Advertisement

Court: ಅತ್ಯಾಚಾರಕ್ಕೊಳಗಾದ 14 ವರ್ಷದ ಅಪ್ರಾಪ್ತೆಯ ಗರ್ಭಪಾತಕ್ಕೆ ಸುಪ್ರೀಂಕೋರ್ಟ್‌ ಅನುಮತಿ

02:58 PM Apr 22, 2024 | Team Udayavani |

ನವದೆಹಲಿ: ಅತ್ಯಾಚಾರಕ್ಕೊಳಗಾದ 14 ವರ್ಷದ ಅಪ್ರಾಪ್ತೆಗೆ ಗರ್ಭಪಾತ(30ವಾರ) ಮಾಡಿಸಿಕೊಳ್ಳಲು ಸುಪ್ರೀಂಕೋರ್ಟ್‌ ಸೋಮವಾರ (ಏ.22) ಮಹತ್ವದ ಆದೇಶವನ್ನು ನೀಡಿದೆ.

Advertisement

ಇದನ್ನೂ ಓದಿ:Ranveer Singh: ಮತಯಾಚನೆಯ ಡೀಪ್‌ ಫೇಕ್‌ ವಿಡಿಯೋ ವೈರಲ್; FIR ದಾಖಲಿಸಿದ‌ ನಟ ರಣ್‌ವೀರ್

ಈ ಮೊದಲು ಗರ್ಭಪಾತಕ್ಕೆ ಅವಕಾಶ ನೀಡಬೇಕೆಂದು ಕೋರಿ ಅಪ್ರಾಪ್ತ ಬಾಲಕಿಯ ಮನವಿಯನ್ನು ಬಾಂಬೆ ಹೈಕೋರ್ಟ್‌ ವಜಾಗೊಳಿಸಿತ್ತು. ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಅವರಿದ್ದ ಪೀಠ, ಅರ್ಜಿಯ ವಿಚಾರಣೆ ನಡೆಸಿ, ತಜ್ಞ ವೈದ್ಯರ ತಂಡದ ಮೂಲಕ ಗರ್ಭಪಾತ ಮಾಡಿಸುವಂತೆ ಮುಂಬೈನ ಲೋಕಮಾನ್ಯ ತಿಲಕ್‌ ಆಸ್ಪತ್ರೆಯ ಡೀನ್‌ ಅವರಿಗೆ ನಿರ್ದೇಶನ ನೀಡಿರುವುದಾಗಿ ವರದಿ ವಿವರಿಸಿದೆ.

ಗರ್ಭಪಾತಕ್ಕೆ ಅನುಮತಿ ನಿರಾಕರಿಸಿದ ಬಾಂಬೆ ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ಬಾಲಕಿಯ ತಾಯಿ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದರು. ಮೆಡಿಕಲ್‌ ಟರ್ಮಿನೇಶನ್‌ ಆಫ್‌ ಪ್ರೆಗ್ನೇನ್ಸಿ ಕಾಯ್ದೆ(MTP)ಯ ಪ್ರಕಾರ, ಗರಿಷ್ಠ 24 ವಾರಗಳ ಗರ್ಭಿಣಿಗೆ ಗರ್ಭಪಾತ ಮಾಡಲು ಅವಕಾಶ ನೀಡಲಾಗುತ್ತದೆ. ವಿವಾಹಿತ ಅಥವಾ ಅತ್ಯಾಚಾರ, ಅಪ್ರಾಪ್ತೆಯಂತಹ ಪ್ರಕರಣಗಳಿಗೆ ಇದು ಅನ್ವಯವಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next