Advertisement

ರಾಯನ್‌ ಇಂಟರ್‌ನ್ಯಾಷನಲ್‌ ಶೈಕ್ಷಣಿಕ ಸಮೂಹದಿಂದ ರಾಯನ್‌ ಮಿನಿಥಾನ್‌

05:17 PM Dec 12, 2018 | |

ನವಿ ಮುಂಬಯಿ: ರಾಯನ್‌ ಇಂಟರ್‌ನ್ಯಾಷನಲ್‌ ಗ್ರೂಪ್‌ ಆಫ್‌ ಇನ್‌ಸ್ಟಿಟ್ಯೂಟ್ಸ್‌
ವತಿಯಿಂದ 161ನೇ ವಾರ್ಷಿಕ ರಾಯನ್‌ ಮಿನಿಥಾನ್‌ ಓಟವು ಡಿ. 9ರಂದು ಸಂಸ್ಥೆಯ ನವಿ ಮುಂಬಯಿಯ ರಾಯನ್ಸ್‌ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.

Advertisement

ಅತಿಥಿ-ಗಣ್ಯರ ಉಪಸ್ಥಿತಿಯಲ್ಲಿ ರಾಯನ್‌ ಇಂಟರ್‌ನ್ಯಾಷನಲ್‌ ಸಮೂಹ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣ ಅಧಿಕಾರಿ ರಾಯನ್‌ ಎ. ಪಿಂಟೋ ಹಸಿರು ನಿಶಾನೆ ತೋರಿಸಿ ಮಿನಿಥಾನ್‌ಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಅತಿಥಿಗಳಾಗಿ ಸ್ಥಾನೀಯ ನಗರ ಸೇವಕ ರವೀಂದ್ರ ಇತಾಪೆ, ಮಾಜಿ ನಗರ ಸೇವಕ ಸುರೇಖಾ ಇತಾಪೆ, ಸಂಚಾರಿ ವಿಭಾಗದ ಉಪ ಆಯುಕ್ತ ಸುನೀಲ್‌ ಲೋಖಂಡೆ, ಎನ್‌ಎಂಎಂಸಿ ಅಧಿಕಾರಿ ರೇವಪ್ಪ ಗುರಾವ್‌, ಮಂತ್ರಾಲಯದ ಅಧಿಕಾರಿ ಶರತ್‌ ಡೋಕೆ, ನೆರೂಲ್‌ ಜಿಮಾVನದ ಗೌರವ ಕಾರ್ಯದರ್ಶಿ ಹರ್ಷರನ್‌ ಸಿಂಗ್‌, ಕೇಂದ್ರ ಅಬಕಾರಿ ತಪಸಣಾಧಿಕಾರಿ ಶೇಖರ್‌ ಲಾಡ್‌, ಜೀವನ್‌ ಜ್ಯೋತ್‌ ಚರ್ಚ್‌ನ ಧರ್ಮಗುರು ಪಾಸ್ಟರ್‌ ಆಶೀಸ್‌ ಶ್ರೀವಾಸ್ತವ, ಭಾರತೀಯ ಕೋಸ್ಟ್‌ಗಾರ್ಡ್‌ ದಿನೇಶ್‌ ಜಾಧವ್‌, ಕ್ರೀಡಾ ತರಬೇತುದಾರ ಮೋಹನ್‌ ಸುರೇಶ್‌ದಾಸ್‌ ಮತ್ತಿತರ ಗಣ್ಯರು ಉಪಸ್ಥಿತರಿದ್ದು  ನಗರದ 14 ಶಾಲೆಗಳ ಸುಮಾರು 12,173 ವಿದ್ಯಾರ್ಥಿಗಳು ಪಾಲ್ಗೊಂಡಿದ್ದ ಮಿನಿಥಾನ್‌ ಓಟಕ್ಕೆ ಚಾಲನೆ ನೀಡಿ ಶುಭಹಾರೈಸಿದರು.

ಸೈಂಟ್‌ ಜೋಸೆಫ್ಸ್ ಹೈಸ್ಕೂಲ್‌ ಸಿಬಿಎಸ್‌ಇ ವಿಭಾಗ ಪನ್ವೇಲ್‌ ಚಾಂಪಿಯನ್‌ಶಿಪ್‌ ಸ್ಥಾನದೊಂದಿಗೆ ಪ್ರಥಮ ಸ್ಥಾನಕ್ಕೆ ಪಾತ್ರವಾದರೆ, ಸೈಂಟ್‌ ಜೋಸೆಫ್ಸ್ ಹೈಸ್ಕಲ್‌ ಎಸ್‌ಎಸ್‌ಸಿ ವಿಭಾಗ  ಪನ್ವೇಲ್‌  ದ್ವಿತೀಯ ಸ್ಥಾನ ಹಾಗೂ ಸೈಂಟ್‌ ಕ್ಸೇವಿಯರ್ ಹೈಸ್ಕೂಲ್‌ ಗೋರೆಗಾಂವ್‌ ತೃತೀಯ ಸ್ಥಾನವನ್ನು ಪಡೆದು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.

ವಿವಿಧ ತಂಡಗಳ ವಿದ್ಯಾರ್ಥಿಗಳ ಮನೋರಂಜನಾ ಕಾರ್ಯಕ್ರಮದೊಂದಿಗೆ ನಡೆಸಲ್ಪಟ್ಟ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರತೀಯೋರ್ವ ವಿದ್ಯಾರ್ಥಿ ವಿಜೇತರಿಗೆ ಪ್ರಶಸ್ತಿ, ಸ್ಮರಣಿಕೆ, ಪ್ರಮಾಣಪತ್ರ ಇತ್ಯಾದಿಗಳ‌ನ್ನಿತ್ತು ಅತಿಥಿ ಗಳು ಮತ್ತು ಕ್ರೀಡಾ ಸಂಘಟಕರು ಗೌರವಿಸಿದರು. ಸ್ಪರ್ಧೆ ಯಲ್ಲಿ ಪಾಲ್ಗೊಂಡ  ಹಾಗೂ ವಿಜೇತ ವಿದ್ಯಾರ್ಥಿಗಳಿಗೆ ರಾಯನ್‌ ಸಮೂಹದ ಕಾರ್ಯಾಧ್ಯಕ್ಷ ಡಾ| ಆಗಸ್ಟಿನ್‌ ಎಫ್‌. ಪಿಂಟೋ ಹಾಗೂ ಆಡಳಿತ ನಿರ್ದೇಶಕಿ ಗ್ರೇಸ್‌ ಪಿಂಟೊ ಶುಭ ಹಾರೈಸಿದರು. 

ಚಿತ್ರ-ವರದಿ : ರೊನಿಡಾ ಮುಂಬಯಿ

Advertisement
Advertisement

Udayavani is now on Telegram. Click here to join our channel and stay updated with the latest news.

Next