ಲಂಡನ್: ಬ್ರಿಟನ್‌ನಲ್ಲಿ ಅಕ್ರಮವಾಗಿ ನೆಲೆಸಿದ್ದಾರೆ ಎಂದು ಹೇಳಲಾಗಿರುವ ರವಾಂಡಾ ನಾಗರಿಕರನ್ನು ಗಡಿಪಾರು ಮಾಡುವ ರಿಷಿ ಸುನಕ್ ನೇತೃತ್ವದ ಸರ್ಕಾರದ ಕ್ರಮಕ್ಕೆ ಆಕ್ಷೇಪ ವ್ಯಕ್ತವಾಗಿದೆ. ನಿರಾಶ್ರಿತರ ಪೈಕಿ ಶೇ.42 ಮಂದಿ ವಿವಾಹಿತರಾಗಿದ್ದು, ಶೇ. 20 ಮಂದಿಗೆ ಮಕ್ಕಳಿದ್ದಾರೆ.ಯುಕೆ ಸರ್ಕಾರದ ನಿರ್ಣಯದಿಂದ ನಿರಾಶ್ರಿತರ ಸ್ಥಿತಿ ಅತ್ರಂತವಾಗುವುದಲ್ಲದೇ, ಹಲವು ಕುಟುಂಬಗಳು ಬೀದಿ ಪಾಲಾಗುತ್ತವೆ ಎನ್ನುವ ಕೂಗು ಕೇಳಿಬಂದಿದೆ.
500ಕ್ಕೂ ಅಧಿಕ ನಿರಾಶ್ರಿತಪರ ಸಂಘಸಂಸ್ಥೆಗಳ ಒಕ್ಕೂಟವಾದ ಕೇರ್ ಫಾರ್ ಕ್ಯಾಲೈಸ್ ಎನ್ನುವ ಸಂಸ್ಥೆ, ಟುಗೆದರ್ ಫಾರ್ ರೆಫ್ಯೂಜಿಸ್ ಎನ್ನುವ ಅಭಿಯಾನ ಆರಂಭಿಸಿದ್ದು, ಸರ್ಕಾರದ ನಿರ್ಣಯ ಸಂಬಂಧಿಸಿದಂತೆ ಸಮೀಕ್ಷೆಯೊಂದನ್ನು ನಡೆಸಿದೆ. ಆ ಪ್ರಕಾರ, ಬ್ರಿಟನ್ ಸರ್ಕಾರ ರವಾಂಡಕ್ಕೆ ಗಡಿಪಾರು ಮಾಡುವುದಾಗಿ ನಿರಾಶ್ರಿತರಿಗೆ ನೋಟಿಸ್ ಹೊರಡಿಸಿದೆ.
ನೋಟಿಸ್ ಸ್ವೀಕರಿಸಿದವರಲ್ಲಿ ಶೇ.72 ಮಂದಿ ಅಂದರೆ 231 ಮಂದಿ ಅಫ್ಘಾನಿಸ್ಥಾನ, ಎರಿಟ್ರಿಯಾ, ಇರಾನ್, ಸುಡಾನ್,ಸಿರಿಯಾ ದೇಶದವರಾಗಿದ್ದಾರೆ. ಬ್ರಿಟನ್‌ನಲ್ಲಿ ಆಶ್ರಯ ಹುಡುಕಿ ಬಂದ ಬೇರೆ ದೇಶಿಗರನ್ನು ರವಾಂಡಕ್ಕೆ ಗಡಿಪಾರುಗೊಳಿಸುವುದು ತಪ್ಪು ಎಂದು ಕೇರ್ ಫಾರ್ ಕ್ಯಾಲೈಸ್ ಸಂಸ್ಥೆ ವಾದಿಸಿದೆ.
ಇದಲ್ಲದೇ, ರವಾಂಡದಿಂದ ಬಂದಿರುವ ನಿರಾಶ್ರಿತರ ಪೈಕಿ ಶೇ.70 ಮಂದಿ ಒಬ್ಬರೇ ಆಗಿದ್ದಾರೆ. ಆರ್ಥಿಕ ಅಪರಾಧಗಳಿಂದಾಗಿ ಕಾನೂನುಬಾಹಿರವಾಗಿ ದೇಶ ಪ್ರವೇಶಿಸಿದ್ದಾರೆ ಎಂದು 2022ರಲ್ಲಿ ಗೃಹ ಸಚಿವರಾಗಿದ್ದ ಪ್ರೀತಿ ಪಟೇಲ್ ಹೇಳಿದ್ದರು. ಆದರೆ ನೋಟಿಸ್ ಸ್ವೀಕರಿಸುವವರ ಪೈಕಿ ಶೇ.42 ಮಂದಿ ವಿವಾಹಿತರಾಗಿದ್ದು, ಶೇ.20 ಮಂದಿಗೆ ಮಕ್ಕಳಿದ್ದಾರೆ. ಇವರಲ್ಲಿ ಮಹಿಳೆಯರೂ ಇದ್ದು, ಬಹುತೇಕರೂ ಗುಲಾಮಗಿರಿ ಸಮಸ್ಯೆ, ಲೈಂಗಿಕ ಹಿಂಸೆಗಳಿಂದ ದೇಶ ತೊರೆದಿದ್ದರು ಎನ್ನಲಾಗಿದೆ.
– ವಿವಿಧ ರಾಷ್ಟ್ರಗಳ ನಿರಾಶ್ರಿತರಿಗೂ ನೋಟಿಸ್ ಜಾರಿ
– ಬ್ರಿಟನ್ ಸರ್ಕಾರದ ವಿರುದ್ಧ ನಿರಾಶ್ರಿತರ ಆಕ್ರೋಶ
– ಗಡಿಪಾರು ಸೂಚನೆ ಪಡೆದವರಲ್ಲಿ 13 ಮಹಿಳೆಯರು
– ನಿರಾಶ್ರಿತರ ಪರ ಸಂಘಟನೆಗಳಿಂದ ಪ್ರತಿಭಟನೆ