Advertisement

ಆರ್‌.ವಿ.ರಸ್ತೆ-ಯಲಚೇನಹಳ್ಳಿ ಮೆಟ್ರೋ ಸೇವೆ ಪುನರಾಂಭ

12:49 AM Nov 18, 2019 | Team Udayavani |

ಬೆಂಗಳೂರು: ಕಳೆದ ನಾಲ್ಕು ದಿನಗಳಿಂದ ಆರ್‌.ವಿ.ರಸ್ತೆ-ಯಲಚೇನಹಳ್ಳಿ ನಡುವೆ ಸ್ಥಗಿತಗೊಂಡಿದ್ದ ಮೆಟ್ರೋ ಸೇವೆ ಸೋಮವಾರದಿಂದ ಪುನರಾರಂಭಗೊಳ್ಳಲಿದ್ದು, 24 ಕಿ.ಮೀ. ಉದ್ದದ ಇಡೀ ಹಸಿರು ಮಾರ್ಗದಲ್ಲಿ ಎಂದಿನಂತೆ “ನಮ್ಮ ಮೆಟ್ರೋ’ ಕಾರ್ಯಾಚರಣೆ ಮಾಡಲಿದೆ.

Advertisement

ಎರಡನೇ ಹಂತದ ಎತ್ತರಿಸಿದ ಮಾರ್ಗದಲ್ಲಿ ಬರುವ ಬೊಮ್ಮಸಂದ್ರದಲ್ಲಿ ವಯಾಡಕ್ಟ್ ಅಳವಡಿಕೆ ಕಾರ್ಯ ಮುಗಿದಿದೆ. ಹಾಗಾಗಿ, ನ. 18ರ ಬೆಳಿಗ್ಗೆ 5ರಿಂದ ಎರಡೂ ತುದಿಗಳಿಂದ ಅಂದರೆ ನಾಗಸಂದ್ರ ಹಾಗೂ ಯಲಚೇನಹಳ್ಳಿಯಿಂದ ಮೆಟ್ರೋ ರೈಲುಗಳು ಸಂಚರಿಸಲಿವೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌) ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಯಶವಂತ ಚವಾಣ್‌ ಸ್ಪಷ್ಟಪಡಿಸಿದರು.

ಬೊಮ್ಮಸಂದ್ರದಲ್ಲಿ ವಯಾಡಕ್ಟ್ ಅಳವಡಿಕೆ ಕಾರ್ಯ ಕೈಗೆತ್ತಿಕೊಂಡ ಹಿನ್ನೆಲೆಯಲ್ಲಿ ನ. 14ರಿಂದ 17ರವರೆಗೆ ಆರ್‌.ವಿ. ರಸ್ತೆ-ಯಲಚೇನಹಳ್ಳಿ ನಡುವೆ ರೈಲು ಸಂಚಾರ ಸ್ಥಗಿತಗೊಂಡಿತ್ತು. ಇದಕ್ಕೆ ಪರ್ಯಾಯವಾಗಿ ಬಿಎಂಟಿಸಿ ಬಸ್‌ಗಳ ಉಚಿತ ಸೇವೆ ಕಲ್ಪಿಸಲಾಗಿತ್ತು. ಆದರೂ ನಿಗದಿತ ಸಮಯದಲ್ಲಿ ನಿಗದಿತ ಸ್ಥಳ ತಲುಪಲು ಪರದಾಡುವಂತಾಗಿತ್ತು. ಸಂಚಾರದಟ್ಟಣೆ ಕಿರಿಕಿರಿ ಕೂಡ ಇಲ್ಲಿ ಉಂಟಾಗಿತ್ತು. ಈಗ ಜನ ನಿಟ್ಟುಸಿರುಬಿಟ್ಟಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next