Advertisement

ಮಾಂಟೆ ಕಾರ್ಲೊ ಟೆನಿಸ್‌: ಜೊಕೋಗೆ ಮೊದಲ ಸುತ್ತಲ್ಲೇ ಸೋಲು

12:01 AM Apr 14, 2022 | Team Udayavani |

ಮಾಂಟೆ ಕಾರ್ಲೊ: ವಿಶ್ವದ ನಂ.1 ಟೆನಿಸಿಗ ನೊವಾಕ್‌ ಜೊಕೋವಿಕ್‌ “ಮಾಂಟೆ ಕಾರ್ಲೊ ಟೆನಿಸ್‌’ ಪಂದ್ಯಾವಳಿಯ ಮೊದಲ ಸುತ್ತಿನಲ್ಲೇ ಸೋಲಿನ ಆಘಾತಕ್ಕೆ ಸಿಲುಕಿದ್ದಾರೆ.

Advertisement

ಇಲ್ಲಿ 2 ಸಲ ಚಾಂಪಿಯನ್‌ ಆಗಿದ್ದ (2013 ಮತ್ತು 2015) ಜಕೋ ಅವರನ್ನು ವಿಶ್ವ ರ್‍ಯಾಂಕಿಂಗ್‌ನಲ್ಲಿ 46ನೇ ಸ್ಥಾನದಲ್ಲಿರುವ ಸ್ಪೇನಿನ ಅಲೆಜಾಂಡ್ರೊ ಡೆವಿಡೋವಿಕ್‌ ಫೋಕಿನ 6-3, 6-7 (5-7), 6-1 ಅಂತರದಿಂದ ಹಿಮ್ಮೆಟ್ಟಿಸಿದರು.

ಫೋಕಿನ ವಿರುದ್ಧ ಆಡಿದ ಹಿಂದಿನೆರಡೂ ಪಂದ್ಯಗಳಲ್ಲಿ ಜೊಕೋ ಜಯ ಸಾಧಿಸಿದ್ದರು. ಈ ಗೆಲುವು ರೋಮ್‌ ಮತ್ತು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಒಲಿದಿತ್ತು. ಇದು ಆಸ್ಟ್ರೇಲಿಯನ್‌ ಓಪನ್‌ ವಿವಾದದ ಬಳಿಕ ಜೊಕೋವಿಕ್‌ ಪಾಲ್ಗೊಂಡ ಕೇವಲ 2ನೇ ಪಂದ್ಯಾವಳಿ. ಇದಕ್ಕೂ ಮೊದಲು ಅವರು ದುಬಾೖಯಲ್ಲಿ 3 ಪಂದ್ಯ ಆಡಿದ್ದರು. ಜೊಕೋ ಕೂಟದ ಮೊದಲ ಸುತ್ತಿನಲ್ಲೇ ಸೋಲನುಭವಿಸಿದ ದ್ವಿತೀಯ ನಿದರ್ಶನ ಇದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next