ಹರಪನಹಳ್ಳಿ: ಅನಾರೋಗ್ಯ, ಅಪಘಾತದಂತಹ ತುರ್ತು ಸಂದರ್ಭದಲ್ಲಿ ವರವಾಗಬೇಕಿದ್ದ 108 ಅಂಬ್ಯುಲೆನ್ಸ್‌ಗಳು ಮೂಲೆ ಹಿಡಿದಿದ್ದು ಇರುವ ಒಂದೆರಡು ಅಂಬ್ಯುಲೆನ್ಸ್‌ಗಳು ರೋಗಿಗಳಿಗೆ ಸರಿಯಾದ ಸಮಯಕ್ಕೆ ಸಿಗದೇ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಹೌದು. ಇದು ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಬರುವ ರೋಗಿಗಳು ನಿತ್ಯ ಅನುಭವಿಸುತ್ತಿರುವ ಘಟನೆ. ಸುಮಾರು ನಾಲ್ಕೈದು ತಿಂಗಳುಗಳಿಂದ ನಡೆಯುತ್ತಾ ಇದೆ. ತುರ್ತು ಇರುವ ರೋಗಿಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ವೈದ್ಯರು ಜಿಲ್ಲಾ ಆಸ್ಪತ್ರೆಗಾಗಲಿ ಅಥವಾ ಬೇರೆ ಸ್ಥಳಗಳಿಗೆ ತೆರಳಲು ತಿಳಿಸಿದಾಗ ಇಂಥ ಸಂದರ್ಭದಲ್ಲಿ ರೋಗಿಗಳು 108 ಆಂಬ್ಯುಲೆನ್ಸ್ ಕರೆ ಮಾಡಿ ವಿಷಯ ತಿಳಿಸಿದರೂ ಸರಿಯಾದ ಸಮಯಕ್ಕೆ ಸಿಗದೇ ಗಂಟೆಗಟ್ಟಲೇ ಕಾಯಬೇಕಾದ ಅನಿವಾರ್ಯತೆ ಬಂದೊದಗಿದೆ.
ತಾಲೂಕಿನಲ್ಲಿ ಒಟ್ಟು 5 ಆಂಬ್ಯುಲೆನ್ಸ್‌ಗಳಿದ್ದು ಅದರಲ್ಲಿ ಒಂದು ಮಾತ್ರ ಚನ್ನಾಗಿದೆ. ಉಳಿದೆಲ್ಲವು ರಿಪೇರಿಯಲ್ಲಿವೆ. ಮೂರು ಆಂಬ್ಯುಲೆನ್ಸ್‌ಗಳು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೆಟ್ಟು ನಿಂತಿವೆ. ಈ ಸಂಬಂಧ ಇದನ್ನು ಗುತ್ತಿಗೆ ಪಡೆದಿರುವ ಜಿವಿಆರ್‌ಕೆ ಸಂಸ್ಥೆಯ ಏಜೆನ್ಸಿಯವರಿಗೆ ಈಗಾಗಲೇ ಗಮನಕ್ಕೆ ತಂದಿದ್ದೇವೆ. ರಿಪೇರಿ ಮಾಡಿಸಲು ಅವರು ಮಂದಾಗುತ್ತಿಲ್ಲ. ಅವರಿಗೆ ಎಷ್ಟು ಸರಿ ತಿಳಿಸಿದರೂ ಸಹ ಇವತ್ತು ನಾಳೆ ಎಂದು ಹಾರಿಕೆ ಉತ್ತರ ನೀಡುತ್ತಾರೆ.
ಇದರಿಂದ ನಿತ್ಯ ನಮಗೂ ಮತ್ತು ರೋಗಿಗಳಿಗೆ ತೊಂದರೆಯಾಗುತ್ತಿದೆ ಎಂದು ವೈದ್ಯರು ಹೇಳುತ್ತಾರೆ. ಪ್ರತಿನಿತ್ಯ ಒಂದಲೊಂದು ಅಪಘಾತ, ಪಾಯಿಜನ್, ಡಿಲೆವರಿ ಈಗೇ ತೀವ್ರತರದಂತಹ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳು ಹೆಚ್ಚಿನ ಚಿಕಿತ್ಸೆಗಾಗಿ ನಗರ ಪ್ರದೇಶಗಳಿಗೆ ತೆರಳಲು 108 ವಾಹನಕ್ಕಾಗಿ ಕಾಲ್ ಮಾಡಿದರೂ ಸಹ ಸರಿಯಾದ ಸಮಯಕ್ಕೆ ಆಂಬ್ಯುಲೆನ್ಸ್ ಬಾರದೇ ರೋಗಿಗಳು ಪರದಾಡಿದ ಘಟನೆ ಆಗಾಗ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಜರುಗುತ್ತಿದ್ದು, ಅನಿವಾರ್ಯವಾಗಿ ಲಭ್ಯವಿರುವ ಬೇರೆ ಆಂಬ್ಯುಲೆನ್ಸ್ ನಲ್ಲಿ ರೋಗಿಗಳನ್ನು ಕರೆದುಕೊಂಡು ಹೊಗಲಾಗುತ್ತಿದೆ.
ಜೀವಕ್ಕೆ ಕುತ್ತು ಬಂದರೆ ಯಾರು ಹೊಣೆ? ಜನತೆಗೆ ತುರ್ತು ಸಂದರ್ಭದಲ್ಲಿ ಚಿಕಿತ್ಸೆಯನ್ನು ಒದಗಿಸಲು ಅನುಕೂಲ ಕಲ್ಪಿಸುವುದಕ್ಕಾಗಿಯೇ ಸರ್ಕಾರ 108 ಆಂಬ್ಯುಲೆನ್ಸ್ ನೀಡಿದೆ. ಆದರೆ ಇದು ಆಸ್ಪತ್ರೆಯಲ್ಲಿ ಸರಿಯಾಗಿ ಸಮರ್ಪಕವಾಗಿ ಲಭ್ಯವಿಲ್ಲದೇ ಇರುವುದರಿಂದ ಪದೇ ಪದೇ ರೋಗಿಗಳಿಗೆ ಸಮಸ್ಯೆ ಕಾಡುತ್ತಿದೆ. ಸದ್ಯ ಕೊವಿಡ್-19ನಿಂದ ತತ್ತರಿಸಿರುವಂಥ ಜನತೆ ಹಾಗೂ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವಂಥ ವಯೋವೃದ್ಧರಿಗೆ, ಮಹಿಳೆಯರಿಗೆ ಮತ್ತು ಮಕ್ಕಳ ಜೀವಕ್ಕೆ ಕುತ್ತು ಬಂದರೆ ಯಾರು ಹೊಣೆ ಎಂಬುದಕ್ಕೆ ಸಂಬಂಧಪಟ್ಟ ಅ ಧಿಕಾರಿಗಳೇ ಉತ್ತರಿಸಬೇಕಿದೆ.
ಕಳೆದ ನಾಲ್ಕೈದು ತಿಂಗಳಿನಿಂದ 108 ಆಂಬ್ಯುಲೆನ್ಸ್ ಸಮಸ್ಯೆ ಇರುವುದು ನಿಜ. ಈ ಸಂಬಂಧ ಈಗಾಗಲೇ ಜಿಲ್ಲಾ ಆರೋಗ್ಯಾಧಿಕಾರಿ ಹಾಗೂ ಗುತ್ತಿಗೆ ಪಡೆದ ಏಜೆನ್ಸಿಯವರ ಗಮನಕ್ಕೆ ತಂದಿದ್ದೇವೆ. ಏಜೆನ್ಸಿಯವರು ಇನ್ನು ಸ್ವಲ್ಪ ದಿನದಲ್ಲಿ ಸರಿಪಡಿಸುತ್ತೇವೆ ಎಂದು ಹೇಳುತ್ತಲೇ ಇದಾರೆ, ಬಂದು ರಿಪೇರಿ ಇರುವ ಆಂಬ್ಯುಲೆನ್ಸ್‌ನು° ಸರಿಪಡಿಸುತ್ತಿಲ್ಲ.
ಡಾ| ಹಾಲಸ್ವಾಮಿ,
ತಾಲೂಕು ಆರೋಗ್ಯಾಧಿಕಾರಿಗಳು
ಬಡವರ ತುರ್ತು ಆರೋಗ್ಯ ಸೇವೆಗಾಗಿ ಸರ್ಕಾರ ಇಂಥ ಯೋಜನೆಯನ್ನು ಜಾರಿಗೆ ತಂದಿದೆ. ಆದರೆ ಇದನ್ನು ಸರಿಯಾಗಿ ನಿರ್ವಹಣೆ ಮಾಡದ ಸಂಬಂಧಪಟ್ಟವರ ಮೇಲೆ ಕ್ರಮಕೈಗೊಂಡು ಅದಷ್ಟು ಬೇಗ ಈ ಸಮಸ್ಯೆನ್ನು ಬಗೆಹರಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಈ ಕುರಿತು ಹೋರಾಟ ಮಾಡಲಾಗುವುದು.
ಭರಮ್ಮಪ್ಪ ಶಾಂತಿನಗರ,
ದಲಿತ ಹಕ್ಕುಗಳ ಸಮಿತಿ ಜಿಲ್ಲಾ
ಸಂಚಾಲಕರು.
ಎಚ್. ದೇವೇಂದ್ರ ಮಜ್ಜಿಗೇರಿ
ಹರಪನಹಳ್ಳಿ