ಮಾಸ್ಕೋ: ತಮಿಳುನಾಡಿನ ಕೂಡಂಕುಳಂ ಪರಮಾಣು ಸ್ಥಾವರದಲ್ಲಿ ನಿರ್ಮಾಣಗೊಂಡಿರುವ ಮತ್ತು ಹೊಸತಾಗಿ ನಿರ್ಮಾಣಗೊಳ್ಳಲಿರುವ ಇನ್ನೂ ನಾಲ್ಕು ರಿಯಾಕ್ಟರ್‌ಗಳಿಗೆ ಬೇಕಾಗಿರುವ ಪರಮಾಣು ಇಂಧನ ನೀಡುವ ಬಗ್ಗೆ ರಷ್ಯಾ ವಾಗ್ಧಾನ ಮಾಡಿದೆ.
ಸದ್ಯ 1 ಸಾವಿರ ಮೆಗಾ ವ್ಯಾಟ್ ಸಾಮರ್ಥ್ಯದ 2 ರಿಯಾಕ್ಟರ್‌ಗಳು ಕಾರ್ಯರಂಭ ಮಾಡಿವೆ. ಉಕ್ರೇನ್ ಮೇಲೆ ಮುಂದುವರಿಸಿರುವ ದಾಳಿಯ ಹೊರತಾಗಿಯೂ ಪರಮಾಣು ಇಂಧನ ಪೂರೈಸಲು ಪುಟಿನ್ ಆಡಳಿತ ಒಪ್ಪಿಕೊಂಡಿರುವುದು ಮಹತ್ವದ ಬೆಳವಣಿಗೆಯೇ ಆಗಿದೆ.
ಹೊಸ ರೀತಿಯ ಇಂಧನದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಯುರೇನಿಯಂ ಅನ್ನು ಸೇರ್ಪಡೆ ಮಾಡಲಾಗಿದೆ ಎಂದು ಹೈದರಾಬಾದ್‌ನಲ್ಲಿ ಹೊಸ ತಂತ್ರಜ್ಞಾನವನ್ನು ಬಿಡುಗಡೆ ಮಾಡಿದ ರಷ್ಯಾದ ಇಂಧನ ಸಂಸ್ಥೆ ಟಿವಿಇಎಲ್‌ನ ಹಿರಿಯ ಉಪಾಧ್ಯಕ್ಷ ಅಲೆಕ್ಸಾಂಡರ್ ಅಗ್‌ಯಮಾವ್ ಹೇಳಿದ್ದಾರೆ.