Advertisement

ರಷ್ಯಾ ಲಸಿಕೆ ಅಭಿಯಾನ ಫ್ಲಾಪ್‌? ಸ್ಫುಟ್ನಿಕ್ ವಿ ಕೋವಿಡ್‌ ಲಸಿಕೆ ಬಗ್ಗೆ ಜನರ ನಿರ್ಲಕ್ಷ್ಯ

09:12 PM Nov 01, 2021 | Team Udayavani |

ಮಾಸ್ಕೋ: ರಷ್ಯಾ ನಿರ್ಮಿತ “ಸ್ಫುಟ್ನಿಕ್ ವಿ’ ಲಸಿಕೆಯನ್ನು ಪಡೆಯಲು ಅಲ್ಲಿನ ಜನರೇ ನಿರಾಕರಿಸುತ್ತಿರುವ ಸೋಜಿಗದ ವಿಚಾರ ತಡವಾಗಿ ಬಹಿರಂಗವಾಗಿದೆ.

Advertisement

ರಷ್ಯಾ ಸರ್ಕಾರವೇ ಖುದ್ದಾಗಿ ಈ ಲಸಿಕೆಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಉತ್ಪಾದನೆಯಾಗಿರುವ ಎಲ್ಲಾ ಲಸಿಕೆಗಳಿಗಿಂತ ಇದು ಶ್ರೇಷ್ಠ ಎಂದು ಅಲ್ಲಿನ ಸರ್ಕಾರ, ತನ್ನ ಲಸಿಕಾ ಅಭಿಯಾನದಡಿ ವ್ಯಾಪಕವಾಗಿ ಪ್ರಚಾರ ಮಾಡಿದೆ. ಆದರೂ, ಈ ಲಸಿಕೆಯು ಇನ್ನೂ ಪ್ರಯೋಗ ಹಂತದ ಲಸಿಕೆಯಾಗಿದೆ ಎಂಬ ವದಂತಿಗಳು ಚಾಲ್ತಿಯಲ್ಲಿರುವುದರಿಂದ ಅಲ್ಲಿನ ಬಹುಪಾಲು ಜನರು, ಈ ಲಸಿಕೆಯ ವಿರೋಧಿಗಳಾಗಿದ್ದಾರೆ. ಹಾಗಾಗಿ, ಲಸಿಕೆ ಹಾಕಿಕೊಳ್ಳಲು ಮುಂದೆ ಬರುತ್ತಿಲ್ಲ ಎಂದು ಹೇಳಲಾಗಿದೆ.

ಇದನ್ನೂ ಓದಿ:ವಣ್ಣಿಯಾರ್‌ ಸಮುದಾಯದ ಶೇ. 10.5 ಮೀಸಲಾತಿ ರದ್ದು

ಮೂರನೇ ಒಂದು ಭಾಗಕ್ಕೆ ಮಾತ್ರ ಲಸಿಕೆ
ಕೊರೊನಾದಿಂದ ಅತಿ ಹೆಚ್ಚು ಬಾಧೆಗೊಳಗಾಗಿರುವ ರಾಷ್ಟ್ರಗಳಲ್ಲಿ ರಷ್ಯಾವೂ ಒಂದು. ಕೊರೊನಾ ಉತ್ತುಂಗದಲ್ಲಿದ್ದಾಗ ಅಲ್ಲಿ ದಿನಂಪ್ರತಿ ಕನಿಷ್ಟ 1,000 ಮಂದಿ ಸಾವಿಗೀಡಾಗುತ್ತಿದ್ದರು.

ಹಾಗಾಗಿ, ರಷ್ಯಾ ಸರ್ಕಾರ ವಿಶ್ವದಲ್ಲೇ ಮೊದಲ ಬಾರಿಗೆ ಸ್ಫುಟ್ನಿಕ್ ವಿ ಲಸಿಕೆಯನ್ನು ಉತ್ಪಾದಿಸಿರುವುದಾಗಿ ಘೋಷಿಸಿತ್ತಲ್ಲದೆ, 2020ರ ಡಿಸೆಂಬರ್‌ನಲ್ಲಿಯೇ ಸ್ಫುಟ್ನಿಕ್ ವಿ ಲಸಿಕಾ ಅಭಿಯಾನ ಶುರು ಮಾಡಿತ್ತು. ಆದರೂ, ಈವರೆಗೆ ಅಲ್ಲಿನ ಜನಸಂಖ್ಯೆಯ ಮೂರನೇ ಒಂದು ಭಾಗ ಮಾತ್ರ ಲಸಿಕೆ ಪಡೆದುಕೊಂಡಿದೆ. ಬಹುತೇಕ ಜನರು ಲಸಿಕೆ ಬೇಡ ಎನ್ನುತ್ತಿದ್ದಾರೆ ಎಂದು “ಟೈಮ್ಸ್‌ ಆಫ್ ಇಂಡಿಯಾ’ ವರದಿ ಮಾಡಿದೆ.

Advertisement

ಇದರ ನಡುವೆಯೇ, ರಷ್ಯಾದಾದ್ಯಂತ ಕೊರೊನಾ ಪ್ರಕರಣಗಳು ದಿನೇ ದಿನೆ ಹೆಚ್ಚಳವಾಗುತ್ತಿದ್ದು, ದಿನಕ್ಕೆ 40 ಸಾವಿರದಷ್ಟು ಪ್ರಕರ ಣಗಳು ಪತ್ತೆಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next