Advertisement
ಆಗಸ್ಟ್ 11ರಂದು ವಿಶ್ವದ ಮೊದಲ ಕೋವಿಡ್-19 ಲಸಿಕೆ ನೋಂದಣಿಯ ಸಂದರ್ಭದಲ್ಲಿ ನೀಡಲಾದ ದಾಖಲೆಗಳೇ ಈಗ ಅನೇಕ ಅನುಮಾನಗಳು ಕಾರಣವಾಗಿವೆ.
Related Articles
Advertisement
ಲಸಿಕೆಗಾಗಿ ನಿಗದಿಪಡಿಸಿದ ಮಾರ್ಗಸೂಚಿಗಳನ್ನು ರಷ್ಯಾ ಅನುಸರಿಸಲಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಆದ್ದರಿಂದ ಈ ಲಸಿಕೆ ಸರಿಯಾಗಿ ಕೆಲಸ ನಿರ್ವಹಿಸುವುದನ್ನು ನಂಬುವುದು ಕಷ್ಟ ಎಂದು ವಿಶ್ವಸಂಸ್ಥೆ ಸ್ಪಷ್ಟವಾಗಿ ಹೇಳಿದೆ.
ಸರಕಾರ ಹೇಳುವುದೇನು?ರಷ್ಯಾದ ರಕ್ಷಣಾ ಸಚಿವಾಲಯದ ಪ್ರಕಾರ, ಲಸಿಕೆ ಪ್ರಯೋಗದ ಫಲಿತಾಂಶಗಳು ಉತ್ತಮ ರೋಗನಿರೋಧಕ ಶಕ್ತಿಯನ್ನು ಸಾಭೀತುಪಡಿಸಿವೆ. ಯಾವುದೇ ಸ್ವಯಂಸೇವಕರಲ್ಲಿ ನಕಾರಾತ್ಮಕ ಅಡ್ಡಪರಿಣಾಮಗಳು ಕಂಡುಬಂದಿಲ್ಲ ಎಂದು ಹೇಳಿತ್ತು. ಆದರೆ, ಲಸಿಕೆ ನೀಡಿದ ಸ್ವಯಂಸೇವಕರಿಗೆ ಜ್ವರ, ದೇಹದ ನೋವು, ದೇಹದ ಉಷ್ಣತೆ ಹೆಚ್ಚಾಗುವುದು, ಚುಚ್ಚುಮದ್ದಿನ ಸ್ಥಳದಲ್ಲಿ ತುರಿಕೆ, ಊತ ಮೊದಲಾದ ಅಡ್ಡಪರಿಣಾಮಗಳು ಕಂಡುಬಂದಿವೆಯಂತೆ. ಇಷ್ಟು ಮಾತ್ರವಲ್ಲದೇ ದೇಹದಲ್ಲಿನ ಶಕ್ತಿಯ ನಷ್ಟವಾಗಿದ್ದು, ನಿತ್ರಾಣಗಳು ಹೆಚ್ಚಾಗಿವೆ. ಹಸಿವು ಕಡಿಮೆಯಾಗಿದ್ದು, ತಲೆನೋವು, ಅತಿಸಾರ, ನೋಯುತ್ತಿರುವ ಗಂಟಲು, ಶೀತ ಮೊದಲಾದಅಡ್ಡಪರಿಣಾಮಗಳು ಸಾಮಾನ್ಯವಾಗಿವೆ. ಲಸಿಕೆಯನ್ನು ಮೊದಲು ರಷ್ಯಾ ಅಧ್ಯಕ್ಷ ಪುಟಿನ್ ಮಗಳಿಗೆ ನೀಡಿದಾಗ, ದೇಹದ ಉಷ್ಣತೆಯಲ್ಲಿ ಬದಲಾವಣೆಗಳು ಕಂಡಿವೆಯಂತೆ. ಮೊದಲು ಒಂದು ಡಿಗ್ರಿ ಹೆಚ್ಚಾಗಿದ್ದು, ಅನಂತರ ಕಡಿಮೆಯಾಗಿತ್ತು. ಆದರೆ ನನ್ನ ಮಗಳ ದೇಹದಲ್ಲಿ ಪ್ರತಿಕಾಯಗಳ ಪ್ರಮಾನ ಹೆಚ್ಚಿವೆ ಎಂದು ಅಧ್ಯಕ್ಷ ಪುಟಿನ್ ಹೇಳಿದ್ದಾರೆ.
ಜಗತ್ತಿನಲ್ಲಿ ಯಾವುದೇ ಮೂಲೆಯಲ್ಲಿ ಇಂತಹ ತುರ್ತು ಆರೋಗ್ಯದ ಸಂದರ್ಭ ಲಸಿಕೆ ಪ್ರಯೋಗಗಳು ನಡೆದಾಗ ಅದರ ಮಾಹಿತಿಯನ್ನು ಹಂಚಿಕೊಳ್ಳಲಾಗುತ್ತದೆ. ಪ್ರತಿಯೊಂದು ಮಾಹಿತಿಯನ್ನು ಡಬ್ಲ್ಯುಎಚ್‌ಒಗೆ ನೀಡಲಾಗುತ್ತದೆ.ಆದರೆ ರಷ್ಯಾ ಆ ರೀತಿ ಮಾಡಿಲ್ಲ. ಇದಕ್ಕೆ ಸಂಬಂಧಿಸಿದ ಮಾಹಿತಿಯನ್ನು ಹೇಳಿಕೆಗಳಲ್ಲಿ ಮಾತ್ರ ಬಹಿರಂಗಪಡಿಸಲಾಗಿದೆ. ವಿಶ್ವ ಸಂಸ್ಥೆ ಹೇಳಿದ್ದೇನು?
ಇದನ್ನು ಸೈಂಟಿಫಿಕ್ ಜರ್ನಲ್ ಅಥವಾ ಡಬ್ಲ್ಯುಎಚ್‌ಒ ಜತೆ ಹಂಚಿಕೊಳ್ಳಲಾಗಿಲ್ಲ. ಲಸಿಕೆ ತಯಾರಿಸಲು ರಷ್ಯಾ ಮಾರ್ಗಸೂಚಿಗಳನ್ನು ಅನುಸರಿಸಿಲ್ಲ ಎಂದು ಡಬ್ಲ್ಯುಎಚ್‌ಒ ಹೇಳಿದೆ. ಆದ್ದರಿಂದ ಈ ಲಸಿಕೆಯ ಯಶಸ್ಸು ಮತ್ತು ಸುರಕ್ಷತೆಯನ್ನು ನಂಬುವುದು ಕಷ್ಟ. ಲಸಿಕೆ ಉತ್ಪಾದನೆಗೆ ಹಲವು ಮಾರ್ಗಸೂಚಿಗಳನ್ನು ಮಾಡಲಾಗಿದೆ. ಇದನ್ನು ಇತರ ದೇಶಗಳು ಮಾಡುತ್ತಿವೆ. ರಷ್ಯಾವೂ ಅದನ್ನು ಅನುಸರಿಸಬೇಕು.