Advertisement

G20 Summit: ಬಂಧನ ಭೀತಿ: ಜಿ20ಗೂ ವ್ಲಾದಿಮಿರ್‌ ಪುಟಿನ್‌ ಬರಲ್ಲ

10:05 PM Aug 25, 2023 | Team Udayavani |

ಮಾಸ್ಕೊ: ನವದೆಹಲಿಯಲ್ಲಿ ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಜಿ20 ರಾಷ್ಟ್ರಗಳ ಶೃಂಗಸಭೆಗೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ನವದೆಹಲಿಗೆ ಆಗಮಿಸುವುದಿಲ್ಲ. ಅವರು ವಿಡಿಯೊ ಕಾನ್ಫರೆನ್ಸ್‌ ಮೂಲಕ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ರಷ್ಯಾ ಅಧ್ಯಕ್ಷರ ಕಾರ್ಯಾಲಯ ಶುಕ್ರವಾರ ತಿಳಿಸಿದೆ.

Advertisement

ದಕ್ಷಿಣ ಆಫ್ರಿಕಾದಲ್ಲಿ ಇದೇ ವಾರ ನಡೆದ ಬ್ರಿಕ್ಸ್‌ ರಾಷ್ಟ್ರಗಳ ಶೃಂಗಸಭೆಯಲ್ಲಿಯೂ ಕೂಡ ಪುಟಿನ್‌ ಭೌತಿಕವಾಗಿ ಪಾಲ್ಗೊಂಡಿರಲಿಲ್ಲ. ವಿಡಿಯೊ ಕಾನ್ಫರೆನ್ಸ್‌ ಮೂಲಕ ಮಾತ್ರ ಅವರು ಹಾಜರಾಗಿದ್ದರು.

ಉಕ್ರೇನ್‌ನಲ್ಲಿ ನಡೆದ ಯುದ್ಧ ಅಪರಾಧಗಳ ಸಂಬಂಧ ಅಂತಾರಾಷ್ಟ್ರೀಯ ಅಪರಾಧ ನ್ಯಾಯಾಲಯವು(ಐಸಿಸಿ) ಪುಟಿನ್‌ ವಿರುದ್ಧ ಬಂಧನ ವಾರೆಂಟ್‌ ಹೊರಡಿಸಿದೆ. ಹೊರದೇಶಕ್ಕೆ ಪುಟಿನ್‌ ಪ್ರಯಾಣಿಸುವುದರಿಂದ ಅವರು ಬಂಧನಕ್ಕೆ ಒಳಗಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

ಆದರೆ ಬಂಧನ ವಾರೆಂಟ್‌ ವಿಷಯವನ್ನು ರಷ್ಯಾ ಅಧ್ಯಕ್ಷರ ಕಾರ್ಯಾಲಯ ಬಲವಾಗಿ ಅಲ್ಲಗೆಳೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next