Advertisement

Russia:ಟ್ರಾನ್ಸ್‌ ಲೇಷನ್‌ Appನ ಯಡವಟ್ಟು…ಜ್ಯೂಸ್‌ ಕುಡಿಯಲು ಹೋಗಿ ಪೊಲೀಸರ ಅತಿಥಿಯಾದ!

03:50 PM Nov 03, 2023 | Team Udayavani |

ಮಾಸ್ಕೋ: ತಂತ್ರಜ್ಞಾನದ ಜಗತ್ತು ಒಮ್ಮೊಮ್ಮೆ ಹೇಗೆ ಪೇಚಿಗೆ ಸಿಲುಕಿಸುತ್ತದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ರಷ್ಯಾದ ಪ್ರವಾಸಿಗನೊಬ್ಬ ಪೋರ್ಚುಗಲ್‌ ನ ಲಿಸ್ಬನ್‌ ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಭಾಷಾಂತರ Appನ ಯಡವಟ್ಟಿನಿಂದಾಗಿ ಬಾಂಬ್‌ ನ ಬೆದರಿಕೆಯೊಡ್ಡಿದ್ದಾನೆಂದು ಆರೋಪಿಸಿ ಪೊಲೀಸರು ಬಂಧಿಸಿರುವ ಘಟನೆ ನಡೆದಿತ್ತು.

Advertisement

ಇದನ್ನೂ ಓದಿ:Icc World Cup 2023: ಭಾರತೀಯ ದಾಖಲೆ ಬರೆದ ಮೊಹಮ್ಮದ್ ಶಮಿ

ಏನಿದು ಘಟನೆ:

36ವರ್ಷದ ಪ್ರವಾಸಿಗ ಲಿಸ್ಬನ್‌ ಗೆ ಭೇಟಿ ನೀಡಿದ್ದ ಸಂದರ್ಭ ರೆಸ್ಟೋರೆಂಟ್‌ ವೊಂದಕ್ಕೆ ತೆರಳಿದ್ದ. ಈ ಸಂದರ್ಭದಲ್ಲಿ ಈತ ಪೊಮೆಗ್ರನೇಟ್ (ದಾಳಿಂಬೆ ಜ್ಯೂಸ್)‌ ಬದಲು ಆಕಸ್ಮಿಕವಾಗಿ ಗ್ರೆನೇಡ್‌ ಬೇಕು ಅಂತ ಕೇಳಿದ್ದ!

ಈ ವ್ಯಕ್ತಿ ಗ್ರೆನೇಡ್‌ ಇದೆ ಎಂದು ಬೆದರಿಕೆಯೊಡ್ಡುತ್ತಿದ್ದಾನೆಂದು ರೆಸ್ಟೋರೆಂಟ್‌ ಸಿಬಂದಿ ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದ. ರೆಸ್ಟೋರೆಂಟ್‌ ಗೆ ಆಗಮಿಸಿದ್ದ ಪೊಲೀಸರು ಸ್ಫೋಟಕ ಇದೆಯಾ ಎಂದು ಪರೀಕ್ಷಿಸಲು ಆರಂಭಿಸಿದ್ದರು. ಅಂತೂ ಜ್ಯೂಸ್‌ ಕುಡಿಯಲು ಬಂದು ಪೇಚಿಗೆ ಸಿಲುಕುವಂತೆ ಮಾಡಿದ್ದು ಟ್ರಾನ್ಸಲೇಷನ್‌ App.

Advertisement

ಪೊಲೀಸ್‌ ಠಾಣೆಗೆ ಯುವಕನನ್ನು ಕರೆದೊಯ್ದು ವಿಚಾರಣೆ ನಡೆಸಿದಾಗ ತಿಳಿಯಿತು, ಇದು ಟ್ರಾನ್ಸ್‌ ಲೇಷನ್‌ Appನಿಂದಾದ ಯಡವಟ್ಟು ಎಂಬುದಾಗಿ. ಲಿಸ್ಬನ್‌ ರೆಸ್ಟೋರೆಂಟ್‌ ಗೆ ಆಗಮಿಸಿದ್ದ ರಷ್ಯಾದ ಯುವಕ ಭಾಷೆಯ ಸಮಸ್ಯೆಯಿಂದ ಟ್ರಾನ್ಸ್‌ ಲೇಷನ್‌ Appನಲ್ಲಿ ದಾಳಿಂಬೆ ಜ್ಯೂಸ್‌ ಆರ್ಡರ್‌ ಮಾಡಲು ಪೋರ್ಚುಗೀಸ್‌ ಭಾಷೆಯಲ್ಲಿ ಪೊಮೆಗ್ರನೇಟ್‌ ಶಬ್ದದ ಅರ್ಥ ಹುಡುಕಿದ್ದ…ಅದು ಗ್ರೆನೇಡ್‌ ಎಂಬುದಾಗಿ ಭಾಷಾಂತರಿಸಿತ್ತು. ಇದನ್ನೇ ರೆಸ್ಟೋರೆಂಟ್‌ ಸಿಬಂದಿ ಏನು ಬೇಕು ಎಂದು ಕೇಳಿದಾಗ ಗ್ರೆನೇಡ್‌ ಅಂತ ಹೇಳಿ ಪೇಚಿಗೆ ಸಿಲುಕುವಂತಾಗಿತ್ತು. ಕೊನೆಗೂ ಯುವಕನ ಬಳಿ ಯಾವುದೇ ಮಾರಕ ಶಸ್ತ್ರಾಸ್ತ್ರಗಳಿಲ್ಲ, ಇದೊಂದು  Appನಿಂದಾದ ಪ್ರಮಾದ ಎಂದು ತಿಳಿದ ಮೇಲೆ ಬಿಡುಗಡೆಗೊಳಿಸಿರುವುದಾಗಿ ವರದಿ ವಿವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next