Advertisement

ರಷ್ಯಾದ ಮೇಜರ್ ಜನರಲ್ ವಿಟಾಲಿ ಗೆರಾಸಿಮೊವ್ ಹತ್ಯೆ ಮಾಡಿದ ಉಕ್ರೇನ್

09:01 AM Mar 08, 2022 | Team Udayavani |

ಕೀವ್: ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧ ಮುಂದುವರಿದಿದೆ. ಎರಡೂ ಸೈನಗಳಲ್ಲಿ ಹಲವು ಸಾವುನೋವುಗಳು ಸಂಭವಿಸಿದೆ. ಈ ಮಧ್ಯೆ ಮಾರ್ಚ್ 7 ರಂದು ಖಾರ್ಕಿವ್ ಯುದ್ಧದಲ್ಲಿ ರಷ್ಯಾದ ಇನ್ನೊಬ್ಬ ಜನರಲ್ ವಿಟಾಲಿ ಗೆರಾಸಿಮೊವ್ ಕೊಲ್ಲಲ್ಪಟ್ಟರು ಎಂದು ಉಕ್ರೇನಿಯನ್ ರಕ್ಷಣಾ ವರದಿ ಮಾಡಿದೆ.

Advertisement

ಮೇಜರ್ ಜನರಲ್ ವಿಟಾಲಿ ಗೆರಾಸಿಮೊವ್ ರಷ್ಯಾದ ಕೇಂದ್ರ ಮಿಲಿಟರಿಯ 41 ನೇ ಸೈನ್ಯದ ಮೊದಲ ಉಪ ಕಮಾಂಡರ್ ಆಗಿದ್ದರು.

ಉಕ್ರೇನಿಯನ್ ರಕ್ಷಣಾ ಸಚಿವಾಲಯದ ಪ್ರಕಾರ, ಎರಡನೇ ಚೆಚೆನ್ ಯುದ್ಧ ಮತ್ತು ಸಿರಿಯಾದಲ್ಲಿ ನಡೆದ ರಷ್ಯಾದ ಮಿಲಿಟರಿ ಕಾರ್ಯಾಚರಣೆಗಳಲ್ಲಿ ವಿಟಾಲಿ ಗೆರಾಸಿಮೊವ್ ಪಾತ್ರ ವಹಿಸಿದ್ದಾರೆ. ಅವರಿಗೆ 2014 ರಲ್ಲಿ ‘ಫಾರ್ ದಿ ರಿಟರ್ನ್ ಆಫ್ ಕ್ರೈಮಿಯಾ’ ಪದಕ ನೀಡಲಾಗಿತ್ತು.

ರಷ್ಯಾದ ಅನೇಕ ಹಿರಿಯ ಅಧಿಕಾರಿಗಳು ಸಾವನ್ನಪ್ಪಿದ್ದಾರೆ ಅಥವಾ ಗಾಯಗೊಂಡಿದ್ದಾರೆ ಎಂದು ಉಕ್ರೇನಿಯನ್ ರಕ್ಷಣಾ ಸಚಿವಾಲಯ ಹೇಳಿದೆ.

ಇದನ್ನೂ ಓದಿ:ಸ್ಫೋಟಗೊಳ್ಳದ 500 ಕೆಜಿ ಬಾಂಬ್‌! ಚೆರ್ನಿಹಿವ್‌ನ ಕಟ್ಟಡದಲ್ಲಿ ಬಿದ್ದಿದ್ದ ಬಾಂಬು

Advertisement

ಬ್ರಿಟಿಷ್ ಸುದ್ದಿ ಸಂಸ್ಥೆ ದಿ ಇಂಡಿಪೆಂಡೆಂಟ್ ವರದಿ ಮಾಡಿದಂತೆ ರಷ್ಯಾದ 7 ನೇ ವಾಯುಗಾಮಿ ವಿಭಾಗದ ಕಮಾಂಡಿಂಗ್ ಜನರಲ್ ಆಂಡ್ರೇ ಸುಖೋವೆಟ್ಸ್ಕಿ ಮತ್ತು 41 ನೇ ಕಂಬೈನ್ಡ್ ಆರ್ಮ್ಸ್ ಆರ್ಮಿಯ ಉಪ ಕಮಾಂಡರ್ ರನ್ನು ಉಕ್ರೇನ್ ಈಗಾಗಲೇ ಹತ್ಯೆ ಮಾಡಿದೆ.

ರಷ್ಯಾ ಸೋಮವಾರ ಮತ್ತೊಂದು ಸೀಮಿತ ಕದನ ವಿರಾಮ ಮತ್ತು ಸುರಕ್ಷಿತ ಕಾರಿಡಾರ್‌ ಗಳ ಸ್ಥಾಪನೆಯನ್ನು ಘೋಷಿಸಿತು. ಸೋಮವಾರದಂದು ಯುದ್ಧ ಪೀಡಿತ ಉಕ್ರೇನಿಯನ್ ನಗರಗಳಾದ ಕೈವ್, ಮಾರಿಯುಪೋಲ್, ಖಾರ್ಕಿವ್ ಮತ್ತು ಸುಮಿಯಿಂದ ನಾಗರಿಕರು ವಲಸೆ ಹೋಗುತ್ತಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next