Advertisement

ನಿಮಗೂ ಇದೇ ಗತಿ…ಹುಷಾರ್‌! ನೆರೆ ರಾಷ್ಟ್ರಗಳಾದ ಫಿನ್ಲಂಡ್‌, ಸ್ವೀಡನ್‌ಗೆ ರಷ್ಯಾ ಎಚ್ಚರಿಕೆ

11:53 PM Feb 26, 2022 | Team Udayavani |

ಮಾಸ್ಕೊ: “ನಿಮ್ಮ ಸುರಕ್ಷೆಯ ಜವಾಬ್ದಾರಿಯನ್ನು ನೀವೇ ಹೊರಬೇಕು. ಅದನ್ನು ಬಿಟ್ಟು, ಸುರಕ್ಷತೆಯ ಹೊಣೆಯನ್ನು ಮತ್ತೊಬ್ಬರಿಗೆ ವಹಿಸಲು ಮುಂದಾದರೆ, ಇಂದು ಉಕ್ರೇನ್‌ಗೆ ಆಗಿರುವ ಗತಿಯೇ ನಿಮಗೂ ಆಗುತ್ತದೆ, ಹುಷಾರ್‌’

Advertisement

.. ಹೀಗೆಂದು ರಷ್ಯಾ, ತನ್ನ ನೆರೆಯ ರಾಷ್ಟ್ರಗಳಾದ ಫಿನ್ಲಂಡ್‌ ಹಾಗೂ ಸ್ವೀಡನ್‌ಗೆ ಅಕ್ಷರಶಃ ಧಮುಕಿ ಹಾಕಿದೆ. ರಷ್ಯಾದ ವಿದೇಶಾಂಗ ಇಲಾಖೆಯ ವಕ್ತಾರ ಮರಿಯಾ ಝಖಾರೊವಾ ಅವರು ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಈ ಎಚ್ಚರಿಕೆಯನ್ನು ರವಾನಿಸಿದ್ದಾರೆ.

“ಫಿನ್ಲಂಡ್‌ ಹಾಗೂ ಸ್ವೀಡನ್‌ ದೇಶಗಳು, ತಮ್ಮ ಸುರಕ್ಷತೆಗಾಗಿ ಅನ್ಯ ರಾಷ್ಟ್ರಗಳ ಜೊತೆಗೆ ಕೈ ಜೋಡಿಸಬಾರದು. ಹಾಗೊಂದು ವೇಳೆ, ತಮ್ಮ ಸುರಕ್ಷತೆಗಾಗಿ ಆ ದೇಶಗಳು ಅಮೆರಿಕ ನೇತೃತ್ವದ ನ್ಯಾಟೋ ಪಡೆಗಳ ಜೊತೆಗೆ ಕೈ ಜೋಡಿಸಿದ್ದೇ ಆದರೆ, ಭಾರೀ ಕೆಟ್ಟ ಪರಿಸ್ಥಿತಿಗಳನ್ನು ಎದುರಿಸಬೇಕಾದೀತು. ಜೊತೆಗೆ, ಸೇನೆ ಹಾಗೂ ರಾಜಕೀಯ ಪ್ರಕ್ಷುಬ್ಧತೆಯನ್ನೂ ಅನುಭವಿಸಬೇಕಾದೀತು” ಎಂದು ಎಚ್ಚರಿಸಿದ್ದಾರೆ.

ಟ್ವಿಟರ್‌ ಮೂಲಕವೂ ಎಚ್ಚರಿಕೆ
ಈ ಪತ್ರಿಕಾಗೋಷ್ಠಿ ಮುಗಿದ ಕೂಡಲೇ ಟ್ವಿಟರ್‌ನಲ್ಲಿಯೂ ವಿದೇಶಾಂಗ ಇಲಾಖೆಯು ತನ್ನ ಖಾತೆಯ ಮೂಲಕ ಈ ಎರಡೂ ರಾಷ್ಟ್ರಗಳಿಗೆ ಮತ್ತೊಂದು ಸುತ್ತಿನ ಎಚ್ಚರಿಕೆಯನ್ನು ನೀಡಿದೆ. “ನಮಗೆ, ಫಿನ್ಲಂಡ್‌ನ‌ ಸೇನಾ ಅಲಿಪ್ತ ನೀತಿಯ ಬಗ್ಗೆ ಚೆನ್ನಾಗಿ ಗೊತ್ತಿದೆ. ಅದೇ ನಿಯಮವನ್ನು ಆ ದೇಶ ಪಾಲಿಸಿದರೆ, ಉತ್ತರ ಯೂರೋಪ್‌ನಲ್ಲಿ ಶಾಂತಿ, ಸುರಕ್ಷೆ ಪಾಲನೆಗೆ ಅದು ಸಹಕಾರಿಯಾಗಲಿದೆ. ಆದರೆ, ನ್ಯಾಟೋ ಕಡೆಗೆ ಆ ದೇಶವೇನಾದರೂ ತಲೆಬಾಗಿದರೆ ಆ ದೇಶ ಸೇನಾ ಕಾರ್ಯಾಚರಣೆ, ರಾಜಕೀಯ ಪ್ರಕ್ಷುಬ್ದತೆಯಂಥ ಪರಿಸ್ಥಿತಿಗಳನ್ನು ಎದುರಿಸಬೇಕಾಗುತ್ತದೆ” ಎಂದು ಎಚ್ಚರಿಸಲಾಗಿದೆ.

ರಷ್ಯಾ ಲೆಕ್ಕಾಚಾರವೇ ಬೇರೆ!
ಫಿನ್ಲಂಡ್‌, ಸ್ವೀಡನ್‌ಗೆ ಎಚ್ಚರಿಕೆ ಸಂದೇಶಗಳನ್ನು ರವಾನಿಸಿದ ಬೆನ್ನಲ್ಲೇ ರಷ್ಯಾ, ಉಕ್ರೇನ್‌ನ ಮೇಲೆ ಏಕೆ ದಾಳಿ ನಡೆಸಿತು ಎಂಬುದರ ಬಗ್ಗೆ ಹಲವಾರು ರಾಜಕೀಯ ವಿಶ್ಲೇಷಣೆಗಳು ಗರಿಗೆದರತೊಡಗಿವೆ. ಅಸಲಿಗೆ, “ಉಕ್ರೇನ್‌ನಲ್ಲಿರುವ ತನ್ನ ಭಾಗಗಳನ್ನು ವಶಪಡಿಸಿಕೊಳ್ಳಲು ರಷ್ಯಾ ಈ ದಾಳಿ ನಡೆಸಿಲ್ಲ. ಬದಲಿಗೆ, ನ್ಯಾಟೋ ಸೇನೆಗಳಿಗೆ ತನ್ನ ಪ್ರಾಂತ್ಯದಲ್ಲಿ ಆಶ್ರಯ ಕಲ್ಪಿಸಲು ಮುಂದಾಗಿದ್ದ ಉಕ್ರೇನ್‌ಗೆ ಪಾಠ ಕಲಿಸಿ, ಆ ಮೂಲಕ ಇಡೀ ಐರೋಪ್ಯ ಒಕ್ಕೂಟಕ್ಕೆ ಒಂದು ಎಚ್ಚರಿಕೆಯ ಸಂದೇಶವನ್ನು ರವಾನಿಸಲು ಈ ಯುದ್ಧ ಮಾಡಲಾಗಿದೆ’ ಎಂದು ಹೇಳಲಾಗುತ್ತಿದೆ.

Advertisement

“ಯಾವಾಗ ಉಕ್ರೇನ್‌ ರಾಷ್ಟ್ರ ನ್ಯಾಟೋ ಪಡೆಗಳಿಗೆ ರತ್ನಗಂಬಳಿ ಹಾಸಲು ಸಿದ್ಧವಾಯಿತೋ, ಆಗಲೇ ರಷ್ಯಾಕ್ಕೆ ಬೇಗುದಿ ಶುರುವಾಗಿತ್ತು. ಉಕ್ರೇನ್‌ನಲ್ಲಿ ನ್ಯಾಟೋ ಪಡೆಗಳು ಬಂತೆಂದರೆ, ತನ್ನ ಮನೆಯ ಹೊಸ್ತಿಲಲ್ಲೇ ಶತ್ರುಗಳು ಬಂದು ನೆಲೆಯೂರಿಸಿದ್ದಾರೆ ಎಂದರ್ಥ ಎಂದು ಭಾವಿಸಿದ ರಷ್ಯಾ, ಅದನ್ನು ತಡೆಯೆಂದೇ ಉಕ್ರೇನ್‌ ಮೇಲೆ ದಾಳಿ ನಡೆಸಲಾಗಿದೆ. ಜೊತೆಗೆ, ಐರೋಪ್ಯ ಒಕ್ಕೂಟದಾದ್ಯಂತ ತನ್ನ ಪ್ರಾಬಲ್ಯವನ್ನು ಸ್ಥಾಪಿಸಲು ರಷ್ಯಾ ಹವಣಿಸುತ್ತಿದೆ’ ಎಂದು ಪರಿಗಣಿಸಲಾಗುತ್ತಿದೆ.

ಯೂರೋಪ್‌ನಲ್ಲಿರುವ ಅಮೆರಿಕ-ನ್ಯಾಟೋ ಮಿತ್ರ ರಾಷ್ಟ್ರಗಳು

ರಾಷ್ಟ್ರಗಳ ಹೆಸರು:
ರಷ್ಯಾ
ಉಕ್ರೇನ್‌
ಬೆಲಾರಸ್‌
ಲಿಥುಯೇನಿಯಾ
ಲ್ಯಾಟ್ವಿಯಾ
ಈಸ್ಟೋನಿಯಾ
ಪೋಲೆಂಡ್‌
ಹಂಗೇರಿ
ರೊಮೇನಿಯಾ
ಗ್ರೀಸ್‌
ಟರ್ಕಿ
ಇಟಲಿ
ಫ್ರಾನ್ಸ್‌
ಸ್ಪೇನ್‌
ಪೋರ್ಚುಗಲ್‌
ಯುನೈಟೆಡ್‌ ಕಿಂಗ್‌ಡಮ್‌
ನೆದರ್‌ಲೆಂಡ್‌
ಬೆಲ್ಜಿಯಂ
ಜರ್ಮನಿ
ನಾರ್ವೆ

Advertisement

Udayavani is now on Telegram. Click here to join our channel and stay updated with the latest news.

Next