ಮಾಸ್ಕೋ: ರಷ್ಯಾ ಉಕ್ರೇನ್ ಮೇಲೆ ದಾಳಿ ನಡೆಸಲಿದೆ ಎಂಬ ಆತಂಕದ ನಡುವೆಯೇ ಉಕ್ರೇನ್ ಗಡಿ ಬಳಿಯ ಪ್ರದೇಶಗಳಲ್ಲಿ ರಷ್ಯಾದ ಸೇನೆಯ ಹೊಸ ನಿಯೋಜನೆಯನ್ನು ಉಪಗ್ರಹ ಚಿತ್ರಗಳು ತೋರಿಸಿವೆ. ಮಂಗಳವಾರ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್‌ನಲ್ಲಿ ಪ್ರತ್ಯೇಕತಾವಾದಿಗಳನ್ನು ಬೆಂಬಲಿಸಲು ದೇಶದ ಹೊರಗೆ ಸೈನ್ಯವನ್ನು ಬಳಸಲು ಅನುಮತಿ ನೀಡಿದ್ದರು.
ಕಳೆದ 24 ಗಂಟೆಗಳಲ್ಲಿ ಮ್ಯಾಕ್ಸರ್ ಸಂಗ್ರಹಿಸಿದ ಚಿತ್ರಗಳು, ದಕ್ಷಿಣ ಬೆಲಾರಸ್‌ನಲ್ಲಿ ಮತ್ತು ಉಕ್ರೇನಿಯನ್ ಗಡಿಯ ಸಮೀಪವಿರುವ ಪಶ್ಚಿಮ ರಷ್ಯಾದ ಅನೇಕ ಸೈಟ್‌ಗಳಲ್ಲಿ ಹೆಚ್ಚುವರಿ ಲಾಜಿಸ್ಟಿಕ್ಸ್ ಮತ್ತು ಸರಬರಾಜುಗಳ ನಿಯೋಜನೆ ಮತ್ತು ಚಲನೆಯನ್ನು ತೋರಿಸುತ್ತವೆ.
ಹೊಸ ಚಟುವಟಿಕೆಯು 100 ಕ್ಕೂ ಹೆಚ್ಚು ವಾಹನಗಳು ಮತ್ತು ದಕ್ಷಿಣ ಬೆಲಾರಸ್‌ನ ಮೊಝೈರ್ ಬಳಿಯ ಸಣ್ಣ ಏರ್‌ಫೀಲ್ಡ್‌ನಲ್ಲಿ ಡಜನ್‌ಗಟ್ಟಲೆ ಸೈನಿಕರ ಟೆಂಟ್‌ಗಳನ್ನು ಒಳಗೊಂಡಿದೆ. ಈ ಏರ್‌ಫೀಲ್ಡ್ ಉಕ್ರೇನ್ ಗಡಿಯಿಂದ 40 ಕಿಲೋಮೀಟರ್‌ಗಿಂತ ಕಡಿಮೆ ದೂರದಲ್ಲಿದೆ.
ಇದನ್ನೂ ಓದಿ:ಭಾರತದ ಜನಸಾಮಾನ್ಯನಿಗೆ ಪರಿಣಾಮ ಬೀರಲಿದೆ ರಷ್ಯಾ-ಉಕ್ರೇನ್ ಬಿಕ್ಕಟ್ಟು; ಸಂಪೂರ್ಣ ಮಾಹಿತಿ
ಪಶ್ಚಿಮ ರಷ್ಯಾದಲ್ಲಿ ಪೊಚೆಪ್ ಬಳಿ ಹೆಚ್ಚುವರಿ ನಿಯೋಜನೆಗಾಗಿ ದೊಡ್ಡ ಪ್ರದೇಶವನ್ನು ತೆರವುಗೊಳಿಸಲಾಗುತ್ತಿದೆ. ಬೆಲ್ಗೊರೊಡ್‌ನ ಪಶ್ಚಿಮ ಹೊರವಲಯದಲ್ಲಿರುವ ಮಿಲಿಟರಿ ಗ್ಯಾರಿಸನ್ ನಲ್ಲಿ ಹೊಸ ಆಸ್ಪತ್ರೆಯನ್ನು ಸ್ಥಾಪಿಸಲಾಗಿದೆ. ಉಕ್ರೇನ್ ಗಡಿಯಿಂದ 20 ಕಿಲೋಮೀಟರ್‌ಗಿಂತ ಕಡಿಮೆ ದೂರದಲ್ಲಿರುವ ಬೆಲ್ಗೊರೊಡ್‌ನ ನೈಋತ್ಯದ ಗ್ರಾಮೀಣ ಪ್ರದೇಶಗಳಲ್ಲಿ ಹಲವಾರು ಹೊಸ ಪಡೆಗಳು ಮತ್ತು ಉಪಕರಣಗಳನ್ನು ನಿಯೋಜಿಸಲಾಗಿದೆ.
ಇತ್ತೀಚಿನ ವಾರಗಳಲ್ಲಿ ರಷ್ಯಾ ಉಕ್ರೇನ್ ಗಡಿಯ ಬಳಿ 150,000 ಕ್ಕೂ ಹೆಚ್ಚು ಸೈನಿಕರನ್ನು ನಿಯೋಜನೆ ಮಾಡಿದೆ. ಇದಕ್ಕೆ ಪ್ರತಿಯಾಗಿ ಅಮೆರಿಕ ಸೇರಿದಂತೆ ಹಲವು ದೇಶಗಳು ರಷ್ಯಾದ ಮೇಲೆ ನಿರ್ಬಂಧ ಹೇರಿವೆ. ಯುಎಸ್ ತನ್ನ ಸೈನ್ಯವನ್ನು ಪೂರ್ವ ಯುರೋಪಿನ ನ್ಯಾಟೋ ಸದಸ್ಯ ರಾಷ್ಟ್ರಗಳಿಗೆ ಕಳುಹಿಸುತ್ತಿದೆ.