ಮಾಸ್ಕೋ: ಉಕ್ರೇನ್ ಮೇಲೆ ಆಕ್ರಮಣ ನಡೆಸಲು ರಷ್ಯಾ ತುದಿಗಾಲಲ್ಲಿ ನಿಂತಿದೆ ಎಂಬ ಆರೋಪಗಳು ಕೇಳಿಬರುತ್ತಿರುವ ನಡುವೆ ಗಡಿ ಉಲ್ಲಂ ಸಿ ಬಂದ ಉಕ್ರೇನ್‌ನ ಐವರು ಸೈನಿಕರನ್ನು ಹತ್ಯೆಗೈದಿರುವುದಾಗಿ ಸೋಮವಾರ ರಷ್ಯಾ ಘೋಷಿಸಿದೆ.
ಇದನ್ನು ಸಂಪೂರ್ಣವಾಗಿ ಅಲ್ಲಗಳೆದಿರುವ ಉಕ್ರೇನ್ ಸರಕಾರ, ನಮ್ಮ ಒಬ್ಬನೇ ಒಬ್ಬ ಸೈನಿಕನೂ ಗಡಿ ದಾಟಿ ಹೋಗಿಲ್ಲ. ಹಾಗೆಯೇ ಯಾರೊಬ್ಬರೂ ಸಾವಿಗೀಡಾಗಿಲ್ಲ ಎಂದು ಸ್ಪಷ್ಟಪಡಿಸಿದೆ. ಇಂಥ ಸುಳ್ಳು ಹೇಳುವ ಮೂಲಕ ಗಡಿಯಲ್ಲಿ ಉದ್ವಿಗ್ನ ವಾತಾವರಣ ಮೂಡಿಸಲು ರಷ್ಯಾ ಯತ್ನಿಸುತ್ತಿದೆ ಎಂದು ಆರೋಪಿಸಿದೆ.
ಸೋಮವಾರ ಬೆಳಗ್ಗೆಯಷ್ಟೇ ಉಕ್ರೇನ್ ನಡೆಸಿದ ಶೆಲ್ ದಾಳಿ ಯಿಂದ ಗಡಿಯಲ್ಲಿದ್ದ ತನ್ನ ಸೇನಾ ಶಿಬಿರ ಧ್ವಂಸಗೊಂಡಿದೆ ಎಂದು ರಷ್ಯಾ ಆರೋಪಿಸಿತ್ತು. ಸಂಜೆಯ ವೇಳೆಗೆ ಗಡಿ ದಾಟಿ ನಮ್ಮ ಭೂಪ್ರದೇಶ ಪ್ರವೇಶಿಸಿದ್ದ ಉಕ್ರೇನ್‌ನ ಐವರು ಸೈನಿಕರನ್ನು ಸದೆಬಡಿಯಲಾಗಿದೆ ಎಂದಿದೆ.
ಇದನ್ನೂ ಓದಿ:ಶಿವಮೊಗ್ಗದಲ್ಲಿ ಯುವಕನ ಹತ್ಯೆ ಪ್ರಕರಣ : ಆರೋಪಿಗಳನ್ನು ಬಂಧಿಸುವಂತೆ ರಾಜ್ಯಪಾಲರಿಗೆ ಮನವಿ
ಉಕ್ರೇನ್ ಮೇಲೆ ದಾಳಿ ಮಾಡಲು ರಷ್ಯಾ ನೆಪ ಹುಡುಕುತ್ತಿದೆ ಎಂದು ಅಮೆರಿಕದ ವಿದೇಶಾಂಗ ಸಚಿವ ಆ್ಯಂಟನಿ ಬ್ಲಿಂಕೆನ್ ಪ್ರತಿಕ್ರಿಯಿಸಿದ್ದಾರೆ.