ಮಾಸ್ಕೋ: ಯುನೈಟೆಡ್ ಕಿಂಗ್‌ಡಮ್ ಗೆ ವಿಮಾನಯಾನ ನಿಷೇಧಿಸಿದ ನಂತರ, ರಷ್ಯಾದ ಏರ್ ಲೈನ್ ಏರೋಫ್ಲೋಟ್ ಸೋಮವಾರದಿಂದ (ಫೆಬ್ರವರಿ 28) ಯುರೋಪ್‌ಗೆ ಎಲ್ಲಾ ವಿಮಾನಗಳನ್ನು ರದ್ದುಗೊಳಿಸಲು ನಿರ್ಧರಿಸಿದೆ.
ಉಕ್ರೇನ್ ಮೇಲೆ ರಷ್ಯಾದ ಆಕ್ರಮಣವನ್ನು ಪ್ರತಿಭಟಿಸಿ ಅನೇಕ ದೇಶಗಳು ತಮ್ಮ ವಾಯುಪ್ರದೇಶವನ್ನು ಮುಚ್ಚುವ ನಿರ್ಧಾರದ ನಂತರ ಮುಂದಿನ ಸೂಚನೆ ಬರುವವರೆಗೆ ಎಲ್ಲಾ ವಿಮಾನಗಳನ್ನು ನಿಲ್ಲಿಸಲು ಏರ್ ಲೈನ್ ನಿರ್ಧರಿಸಿದೆ.
ಯುಕೆ ನಾಗರಿಕ ವಿಮಾನಯಾನ ಪ್ರಾಧಿಕಾರವು ಮುಂದಿನ ಸೂಚನೆ ಬರುವವರೆಗೆ ಏರೋಫ್ಲಾಟ್ ಅನ್ನು ಅಮಾನತುಗೊಳಿಸಿತ್ತು. ” ಮುಂದಿನ ಸೂಚನೆ ಬರುವವರೆಗೆ ಯುನೈಟೆಡ್ ಕಿಂಗ್‌ಡಮ್ ಗೆ ಅಥವಾ ಅಲ್ಲಿಂದ ವಿಮಾನಗಳನ್ನು ನಿರ್ವಹಿಸಲು ಏರೋಫ್ಲಾಟ್ ಅನ್ನು ಅನುಮತಿಸಲಾಗುವುದಿಲ್ಲ” ಎಂದು ಯುಕೆ ನಾಗರಿಕ ವಿಮಾನಯಾನ ಪ್ರಾಧಿಕಾರದ ವಕ್ತಾರರು ತಿಳಿಸಿದ್ದಾರೆ.
ಇದನ್ನೂ ಓದಿ:ರಷ್ಯಾಗೆ ತಟ್ಟಿದ ಬಿಸಿ; ಯಾವ ದೇಶಗಳಿಂದ ಏನೇನು ನಿರ್ಬಂಧ?
ಯುರೋಪಿಯನ್ ರಾಷ್ಟ್ರಗಳು ಮತ್ತು ಕೆನಡಾ ಭಾನುವಾರ ತಮ್ಮ ವಾಯುಪ್ರದೇಶವನ್ನು ರಷ್ಯಾದ ವಿಮಾನಗಳಿಗೆ ಮುಚ್ಚಿದ್ದು, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಉಕ್ರೇನ್ ಆಕ್ರಮಣವನ್ನು ಕೊನೆಗೊಳಿಸಲು ಒತ್ತಡ ಹೇರುವ ಗುರಿಯನ್ನು ಹೊಂದಿದೆ.
ರಷ್ಯಾದ ಸಂಚಾರಕ್ಕೆ ತನ್ನ ವಾಯುಪ್ರದೇಶವನ್ನು ಮುಚ್ಚಲು ಯುರೋಪಿಯನ್ ಯೂನಿಯನ್ ನಿರ್ಧರಿಸಿದೆ ಎಂದು ವಿದೇಶಾಂಗ ನೀತಿ ಮುಖ್ಯಸ್ಥ ಜೋಸೆಪ್ ಬೊರೆಲ್ ಹೇಳಿದ್ದಾರೆ.
ಒಲಿಗಾರ್ಚ್‌ಗಳ ಖಾಸಗಿ ಜೆಟ್‌ಗಳು ಸೇರಿದಂತೆ ಅಂತಹ ಎಲ್ಲಾ ವಿಮಾನಗಳು ಈಗ ಯಾವುದೇ ಯುರೋಪಿಯನ್ ರಾಷ್ಟ್ರದ ಮೇಲೆ ಇಳಿಯಲು, ಟೇಕ್ ಆಫ್ ಮಾಡಲು ಸಾಧ್ಯವಾಗುವುದಿಲ್ಲ.