Advertisement

ಯುಕೆ ಯುದ್ಧನೌಕೆಯನ್ನು ಹಿಮ್ಮೆಟ್ಟಿಸಿದ ರಷ್ಯಾ

12:11 AM Jun 24, 2021 | Team Udayavani |

ಮಾಸ್ಕೋ: ರಷ್ಯಾ ಮತ್ತು ಪಾಶ್ಚಾತ್ಯ ದೇಶಗಳ ನಡುವಿನ ಬಿಕ್ಕಟ್ಟು ದಿನೇ ದಿನೆ ತೀವ್ರಗೊಳ್ಳುತ್ತಿದ್ದು, ಅದಕ್ಕೆ ಸಾಕ್ಷಿಯೆಂಬಂತೆ ಬುಧವಾರ ಕಪ್ಪು ಸಮುದ್ರದಲ್ಲಿ ಯು.ಕೆ.ಯ ಕ್ಷಿಪಣಿ ನಿಗ್ರಹ ನೌಕೆಯೊಂದನ್ನು ರಷ್ಯಾ ಹಿಮ್ಮೆಟ್ಟಿಸಿದೆ. ಕ್ರಿಮಿಯಾ ಬಳಿ ಈ ಘಟನೆ ನಡೆದಿದ್ದು, ಈ ಪ್ರದೇಶವನ್ನು ರಷ್ಯಾ ತನ್ನ ಜಲಗಡಿಯೊಳಗಿನ ಪ್ರದೇಶ ಎಂದು ಹೇಳಿಕೊಳ್ಳುತ್ತಾ ಬಂದಿದೆ.

Advertisement

ಶೀತಲ ಸಮರದ ಬಳಿಕ ಇದೇ ಮೊದಲ ಬಾರಿಗೆ ರಷ್ಯಾವು ನ್ಯಾಟೋ ಯುದ್ಧನೌಕೆಯೊಂದನ್ನು ಈ ರೀತಿ ಹಿಮ್ಮೆಟ್ಟಿಸಿದೆ. ಈ ನೌಕೆಯು ಕ್ರಿಮಿಯಾ ಸಮೀಪಿಸುತ್ತಿದ್ದಂತೆ ರಷ್ಯಾವು ಎಚ್ಚರಿಕೆಯ ಸಂದೇಶವೆಂಬಂತೆ ಮೊದಲು ಗುಂಡು ಹಾರಿಸಿದೆ. ಅನಂತರ ಯುದ್ಧ ವಿಮಾನದ ಮೂಲಕ ಈ ನೌಕೆಯ ಮುಂಭಾಗದಲ್ಲೇ 4 ಬಾಂಬ್‌ಗಳನ್ನೂ ಸುರಿದು, ಪಥ ಬದಲಿಸುವಂತೆ ಎಚ್ಚರಿಕೆ ನೀಡಿದೆ. ಕೊನೆಗೆ ಬ್ರಿಟಿಷ್‌ ನೌಕೆಯು ರಷ್ಯಾದ ಜಲಗಡಿಯಿಂದ ಹಿಂದಕ್ಕೆ ಸರಿದಿದೆ.

ಯುಕೆಯ ನೌಕೆಯ ಈ ಅತಿಕ್ರಮ ಪ್ರವೇಶದ ಕುರಿತು ತೀವ್ರ ಪ್ರತಿಭಟನೆ ವ್ಯಕ್ತಪಡಿಸಲು ರಷ್ಯಾ ರಕ್ಷಣ ಸಚಿವಾಲಯ ಮುಂದಾಗಿದ್ದು, ಮಾಸ್ಕೋದಲ್ಲಿರುವ ಯುಕೆ ಸೇನಾಧಿಕಾರಿಗೆ ಸಮನ್ಸ್‌ ಕಳುಹಿಸಿದೆ. ಆದರೆ, ಯುಕೆಯ ರಕ್ಷಣ ಸಚಿವಾಲಯವು ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next