Advertisement
ರಷ್ಯಾ ಮತ್ತು ಉಕ್ರೇನ್ ನಡುವೆ ನಡೆದ ಮೊದಲ ಸುತ್ತಿನ ಸಂಧಾನ ಮಾತುಕತೆ ವಿಫಲವಾದ ಬೆನ್ನಲ್ಲೇ ಉಕ್ರೇನ್‌ನ ಹಲವು ನಗರಗಳ ಮೇಲೆ ಬಾಂಬ್‌ಗಳ ಮಳೆಯೇ ಸುರಿದಿದೆ.
Related Articles
Advertisement
ಇದನ್ನೂ ಓದಿ:ಕೀವ್ ನಗರದಲ್ಲಿರುವ ಟವರ್ ಧ್ವಂಸ; ಎಲ್ಲ ಟಿವಿ ಚಾನೆಲ್ ಬಂದ್
10 ಮಂದಿ ಸಾವು: ಖಾರ್ಕಿವ್‌ನ ಸೆಂಟ್ರಲ್ ಸ್ಕ್ವೇರ್ ಮೇಲೆ ರಷ್ಯಾ ಸೇನೆ ಕ್ಷಿಪಣಿ ದಾಳಿ ಮಾಡಿದ್ದು, ಕನಿಷ್ಠ 10 ಮಂದಿ ಅಸುನೀಗಿದ್ದಾರೆ. ಅವಶೇಷಗಳಡಿಯಿಂದ 12ಕ್ಕೂ ಅಧಿಕ ಮಂದಿಯನ್ನು ರಕ್ಷಿಸಲಾಗಿದೆ. ಕೀವ್‌ನಲ್ಲಿ ಆಡಳಿತಾತ್ಮಕ ಕಟ್ಟಡವೊಂದರ ಮೇಲೆ ಶೆಲ್ ದಾಳಿ ನಡೆದಿದೆ. ಕಟ್ಟಡವು ಭಾಗಶಃ ಕುಸಿದುಬಿದ್ದಿದೆ. ಉಕ್ರೇನ್‌ನ ಆಗ್ನೇಯ ನಗರ ಮರಿಯುಪೋಲ್‌ಗೂ ರಷ್ಯಾ ಸೇನೆ ನುಗ್ಗಿದೆ.
ವೀಸಾಮುಕ್ತ ಎಂಟ್ರಿ: ಉಕ್ರೇನ್ ಪರ ಹೋರಾಡಲು ಬಯಸುವ ವಿದೇಶಿಯರಿಗೆ ಅಲ್ಲಿನ ಸರಕಾರ ಬಾಗಿಲು ತೆರೆ ದಿದೆ. ಅಂಥವರು ಯಾರೇ ಬಂದರೂ ಪ್ರವೇಶ-ವೀಸಾ ಪಡೆಯಬೇಕು ಎಂಬ ನಿಯಮವನ್ನು ರದ್ದು ಮಾಡಿದೆ.ರಷ್ಯಾದ 12 ಮಂದಿ ಗಡೀಪಾರು: ವಿಶ್ವಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ 12 ಮಂದಿಯನ್ನು ಅಮೆರಿಕ ಗಡೀಪಾರು ಮಾಡಿದೆ. ಈ ವ್ಯಕ್ತಿಗಳು ಗುಪ್ತಚರ ಚಟುವಟಿಕೆ ನಡೆಸುತ್ತಿದ್ದರೆ ನ್ನುವುದು ಅಮೆರಿಕದ ಆರೋಪ. “ರಷ್ಯಾ ಈ ತಂಡ ಗುಪ್ತಚರ ಕೆಲಸದಲ್ಲಿ ನಿರತವಾಗಿತ್ತು. ಇದು ಅಮೆರಿಕದ ರಾಷ್ಟ್ರೀಯ ಭದ್ರತೆಗೇ ಸವಾಲು. ಹೀಗಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಮೆರಿಕ ಹೇಳಿದೆ. ಕಟ್ಟಡಗಳಲ್ಲಿ ನಿಗೂಢ ಚಿಹ್ನೆಗಳು ಪತ್ತೆ!
ಯುದ್ಧ ಮುಂದುವರಿದಿರುವಂತೆಯೇ ಉಕ್ರೇನ್‌ನ ಕೆಲವು ಗಗನಚುಂಬಿ ಕಟ್ಟಡಗಳ ತುತ್ತತುದಿಯಲ್ಲಿ ಹಾಗೂ ಗ್ಯಾಸ್ ಪೈಪ್‌ಗ್ಳಲ್ಲಿ ನಿಗೂಢ ಚಿಹ್ನೆಗಳು ಪತ್ತೆಯಾಗಿವೆ. ಕಡುಕೆಂಪು ಬಣ್ಣದಲ್ಲಿ ಎಕ್ಸ್ (ಗಿ) ಎಂದು ಬರೆಯಲಾಗಿದೆ. ರಷ್ಯಾದ ಸೈನಿಕರು ಯಾವ ಕಟ್ಟಡಗಳನ್ನು ಗುರಿಯಾಗಿಸಿ ದಾಳಿ ನಡೆಸಬೇಕು ಎಂಬುದರ ಸೂಚಕವಾಗಿ ಈ ಚಿಹ್ನೆ ಗಳನ್ನು ಹಾಕಿರಬಹುದೇ? ರಷ್ಯಾಗೆ ಯಾರೋ ವೈಮಾನಿಕ ದಾಳಿಗೆ ಈ ಚಿಹ್ನೆಗಳ ಮೂಲಕ ಸುಳಿವು ಕೊಡುತ್ತಿದ್ದಾ ರೆಯೇ ಎಂಬ ಸಂದೇಹ ಮೂಡಿದೆ. ಈ ಹಿನ್ನೆಲೆಯಲ್ಲಿ ದೊಡ್ಡ ದೊಡ್ಡ ಕಟ್ಟಡಗಳಲ್ಲಿ ವಾಸಿಸುತ್ತಿರುವವರು ಕೂಡಲೇ ತಮ್ಮ ಕಟ್ಟಡಗಳಲ್ಲಿ ಇಂಥ ಚಿಹ್ನೆಯಿದೆಯೇ ಎಂದು ಪರೀಕ್ಷಿಸಿ, ಅದನ್ನು ಅಳಿಸಿ ಹಾಕಲು ಯತ್ನಿಸಿ, ಸುರಕ್ಷಿತವಾಗಿರುವಂತೆ ಸೂಚಿಸಲಾಗಿದೆ. ಸಮರಾಂಗಣದಲ್ಲಿ
– ಈ ಕೂಡಲೇ ಉಕ್ರೇನ್ ಆಕ್ರಮಣ ನಿಲ್ಲಿಸಿ- ರಷ್ಯಾಕ್ಕೆೆ ನ್ಯಾಟೋ ಮುಖ್ಯಸ್ಥರಿಂದ ಎಚ್ಚರಿಕೆ
– ಕೀವ್, ಖಾರ್ಕಿವ್ ಸೇರಿ ಇತರ ನಗರಗಳಿಗೆ ವೈಮಾನಿಕ ದಾಳಿಯ ಅಲರ್ಟ್
– ಉಕ್ರೇನ್‌ನ ದಕ್ಷಿಣದಲ್ಲಿನ ಖೇರ್‌ಸನ್ ನಗರವನ್ನು ಸುತ್ತುವರಿದ ಪುತಿನ್ ಪಡೆ
– ಖಾರ್ಕಿವ್‌ನಲ್ಲಿ ವಸತಿ ಕಟ್ಟಡಗಳು, ಸೆಂಟ್ರಲ್ ಸ್ಕ್ವೇರ್ ಮೇಲೆ ಕ್ಷಿಪಣಿ ದಾಳಿ-ಕನಿಷ್ಠ 10 ಸಾವು
– ಓಕ್ಟಿಕಾದ ಸೇನಾನೆಲೆ ಮೇಲೆ ರಷ್ಯಾ ದಾಳಿ- 70 ಉಕ್ರೇನ್ ಸೈನಿಕರ ಸಾವು
– ನಿರಂತರ ಶೆಲ್ ದಾಳಿಗೆ ಸಂಪೂರ್ಣ ಹಾನಿಗೀಡಾದ ಮರಿಯಪೋಲ್ ನಗರ
– ಯುದ್ಧ ಮುಂದುವರಿಸಿದರೆ ರಷ್ಯಾ ಮೇಲೆ ಇನ್ನಷ್ಟು ನಿರ್ಬಂಧ ವಿಧಿಸುವುದಾಗಿ ಪೋಲೆಂಡ್ ಬೆದರಿಕೆ
– ನೀವು ನಮ್ಮೊಂದಿಗಿದ್ದೀರಿ ಎಂಬುದನ್ನು ಸಾಬೀತು ಪಡಿಸಿ- ಐರೋಪ್ಯ ಒಕ್ಕೂಟಕ್ಕೆ ಉಕ್ರೇನ್ ಅಧ್ಯಕ್ಷ
– ನಮ್ಮ ಗುರಿ ಮುಟ್ಟುವವರೆಗೂ ಉಕ್ರೇನ್ ಕಾರ್ಯಾಚರಣೆ ಮುಂದುವರಿಯುತ್ತದೆ ಎಂದು ರಷ್ಯಾ ಘೋಷಣೆ