Advertisement
ರಷ್ಯಾದ ಅರ್ಥವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರಲೆಂದೇ ಜಾಗತಿಕ ಹಣಕಾಸು ವ್ಯವಸ್ಥೆಯಿಂದ (ಸ್ವಿಫ್ಟ್- ಸೊಸೈಟಿ ಫಾರ್ ವರ್ಲ್ಡ್ ವೈಡ್ ಇಂಟರ್‌ಬ್ಯಾಂಕ್ ಫಿನಾನ್ಶಿಯಲ್ ಟೆಲಿಕಮ್ಯುನಿಕೇಷನ್) ರಷ್ಯಾದ ಕೆಲವು ಬ್ಯಾಂಕ್‌ಗಳನ್ನು ಹೊರ ಹಾಕಿವೆ. ಇದರ ಜತೆಗೆ ರಷ್ಯಾ ಸರ್ಕಾರದ ಕೇಂದ್ರ ಬ್ಯಾಂಕ್‌ಗೆ ಕೂಡ ಅಂತಾರಾಷ್ಟ್ರೀಯವಾಗಿ ಕೆಲ ವ್ಯವಹಾರಗಳನ್ನು ನಡೆಸದಂತೆ ತಡೆಯೊಡ್ಡಲಾಗಿದೆ.
ಸ್ವಿಫ್ಟ್ (Society for Worldwide Interbank Financial Telecommunication) ಎಂದರೆ ಭಾರತ ಸೇರಿದಂತೆ ಜಗತ್ತಿನ 200ಕ್ಕಿಂತಲೂ ಅಧಿಕ ದೇಶಗಳ ಬ್ಯಾಂಕ್‌ಗಳು ಮತ್ತು ವಿತ್ತೀಯ ಸಂಸ್ಥೆಗಳ ಒಕ್ಕೂಟ. ಇದನ್ನು ಜಾಗತಿಕ ಪಾವತಿ ಗೇಟ್‌ವೇ ಎಂದೂ ಕರೆಯುತ್ತಾರೆ. ಇಲ್ಲಿ ಹಣಕಾಸಿನ ಚಲನೆ ಆಗುವುದಿಲ್ಲ. ಬದಲಿಗೆ 200 ದೇಶಗಳ 11 ಸಾವಿರ ಬ್ಯಾಂಕುಗಳಿಗೆ ಸುರಕ್ಷಿತ ಹಣಕಾಸು ಮೆಸೇಜಿಂಗ್ ಸೇವೆ ಒದಗಿಸುವ ಮೂಲಕ ವಹಿವಾಟುಗಳ ಮಾಹಿತಿಯನ್ನು ಒದಗಿಸುವ ಮಧ್ಯವರ್ತಿಯಾಗಿ ಸ್ವಿಫ್ಟ್ ಕಾರ್ಯನಿರ್ವಹಿಸುತ್ತದೆ. ಐರೋಪ್ಯ ಒಕ್ಕೂಟದ ಬೆಲ್ಜಿಯಂನಲ್ಲಿ ಅದರ ಪ್ರಧಾನ ಕಚೇರಿ ಇದೆ. ಜಗತ್ತಿನ ಪ್ರಮುಖ ಹನ್ನೊಂದು ಕೈಗಾರಿಕಾ ದೇಶಗಳಾದ ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ನೆದರ್ಲೆಂಡ್, ಸ್ವೀಡನ್, ಸ್ವಿಜರ್ಲೆಂಡ್, ಯುಕೆ, ಅಮೆರಿಕ, ಬೆಲ್ಜಿಯಂ ಈ ಒಕ್ಕೂಟದ ಮೇಲುಸ್ತುವಾರಿಯನ್ನು ನೋಡಿಕೊಳ್ಳುತ್ತವೆ.
Related Articles
Advertisement
ಯಾವಾಗ ಸ್ಥಾಪನೆ?1970ರಲ್ಲಿ ಇದನ್ನು ಸ್ಥಾಪಿಸಲಾಗಿದೆ. 2020ರ ಮಾಹಿತಿಯ ಪ್ರಕಾರ ಅದು 362.30 ಕೋಟಿ ರೂ. ಲಾಭವನ್ನು ಇದು ಗಳಿಸಿದೆ. ರಷ್ಯಾದ ಮೇಲೇನು ಪರಿಣಾಮ?
– ರಷ್ಯಾದ ಕಂಪನಿಗಳು, ಬ್ಯಾಂಕ್‌ಗಳಿಗೆ ಆಮದು ಮತ್ತು ರಫ್ತು ಕ್ಷೇತ್ರದಲ್ಲಿ ಪಾವತಿ ಮಾಡಲು ಕಷ್ಟವಾಗಲಿದೆ
– ಆ ದೇಶದ ನಾಗರಿಕರಿಗೂ ಅಂತಾರಾಷ್ಟ್ರೀಯ ವ್ಯವಹಾರ ಕಠಿಣವಾಗಲಿದೆ.
– ರಷ್ಯಾದ ಸೆಂಟ್ರಲ್ ಬ್ಯಾಂಕ್‌ನ ಆಸ್ತಿಪಾಸ್ತಿ ಸ್ತಂಭನಗೊಳ್ಳಲಿದೆ, ಸಾಗರೋತ್ತರ ಮೀಸಲು ನಿಧಿಯನ್ನು ಬಳಸಿಕೊಳ್ಳಲು ಅಸಾಧ್ಯವಾಗಲಿದೆ
– ರಷ್ಯಾದ ಬ್ಯಾಂಕ್‌ಗಳಿಗೆ ಫೋನ್, ಮೆಸೇಜಿಂಗ್ ಆ್ಯಪ್ ಅಥವಾ ಇ-ಮೇಲ್‌ಗಳ ಮೂಲಕ ಹಣಕಾಸು ವಿಚಾರಗಳನ್ನು ಪ್ರಸ್ತಾಪಿಸುವ ಅನಿವಾರ್ಯ ಉಂಟಾಗಬಹುದು.
– ರಷ್ಯಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತಷ್ಟು ಏಕಾಂಗಿಯಾಗುತ್ತದೆ.
– ನಿಷೇಧ ಅನ್ವಯ ಆಗದೇ ಇರುವ ರಾಷ್ಟ್ರಗಳಲ್ಲಿ ಅಂತಾರಾಷ್ಟ್ರೀಯ ಮಾನ್ಯತೆಯ ಪಾವತಿ ವ್ಯವಸ್ಥೆ ಬಳಕೆ ಮಾಡಬಹುದು. ಬದಲಿ ವ್ಯವಸ್ಥೆಯ ಮೂಲಕ ನಡೆಸುವ ಪಾವತಿ ವ್ಯವಸ್ಥೆ ಹೆಚ್ಚು ವೆಚ್ಚದಾಯಕವಾಗಬಹುದು. ಇದರಿಂದಾಗಿ ವಹಿವಾಟಿನ ಪ್ರಮಾಣ ಕಡಿಮೆಯಾಗಬಹುದು. ಸ್ವಿಫ್ಟ್ ನಿಂದ ರಷ್ಯಾವನ್ನು ಹೊರ ಹಾಕಿದ್ದರ ಎಫೆಕ್ಟ್ ಸೋಮವಾರ ಸ್ಪಷ್ಟವಾಗಿ ಗೋಚರವಾಗಲಿದೆ. ದೇಶದ ಕರೆನ್ಸಿ ಮಾರುಕಟ್ಟೆ ಪತನಗೊಳ್ಳುವುದು ನಿಶ್ಚಿತ.
– ಸರ್ಗಿ ಅಲೆಸ್ಕಾಶೆನ್ಕೋ, ರಷ್ಯಾ ಸೆಂಟ್ರಲ್ ಬ್ಯಾಂಕ್ ನಿವೃತ್ತ ಉಪಾಧ್ಯಕ್ಷ