Advertisement

ಉಕ್ರೇನ್‌ ಪೂರ್ವಕ್ಕೆ ರಷ್ಯಾ ದಾಳಿ; ಹತ್ತು ಗಗನಚುಂಬಿ ಕಟ್ಟಡಗಳು ಧರೆಗೆ

02:39 AM Apr 07, 2022 | Team Udayavani |

ಕೀವ್‌/ಮಾಸ್ಕೋ: ಉಕ್ರೇನ್‌ ವಿರುದ್ಧ ರಷ್ಯಾ 42ನೇ ದಿನವಾಗಿರುವ ಬುಧವಾರವೂ ದಾಳಿ ಮುಂದುವರಿಸಿದೆ.

Advertisement

ಪೂರ್ವ ಮತ್ತು ದಕ್ಷಿಣ ಭಾಗದಲ್ಲಿ ಲುಗಾನ್ಸ್ಕ್ ನಲ್ಲಿ ಪುತಿನ್‌ ಸೇನೆ ಹಲವು ಕಟ್ಟಡಗಳ ಮೇಲೆ ದಾಳಿ ದಾಳಿ ನಡೆಸಿದೆ.

ಇದರಿಂದಾಗಿ ಜನರನ್ನು ತೆರವುಗೊಳಿಸುವ ಕಾರ್ಯಕ್ಕೆ ಅಡ್ಡಿಯಾಗಿದೆ. ಹತ್ತು ಗಗನ ಚುಂಬಿ ಕಟ್ಟಡಗಳು ಧರೆಗೆ ಒರಗಿವೆ. ಡಾನೆಸ್ಕ್ ನಲ್ಲಿ ನಿರಾಶ್ರಿತರಿಗೆ ನೆರವು ಕೇಂದ್ರದ ಬಳಿ ದಾಳಿ ನಡೆಸಿದ್ದರಿಂದ ಇಬ್ಬರು ನಾಗರಿಕರು ಹತರಾಗಿದ್ದಾರೆ. ರಷ್ಯಾ ದಾಳಿ ಮುಂದುವರಿ ದಿರುವ ಹಿನ್ನೆಲೆಯಲ್ಲಿ ಸುರಕ್ಷಿತ ಪ್ರದೇಶಕ್ಕೆ ಪರಾರಿಯಾಗಿ ಮತ್ತು ಸಾವಿನಿಂದ ತಪ್ಪಿಸಿಕೊಳ್ಳಿ ಎಂದು ಉಕ್ರೇನ್‌ ತನ್ನ ನಾಗರಿಕರಿಗೆ ಸೂಚಿಸಿದೆ.

ಹೊಸ್ಟೊಮೆಲ್‌ ನಗರದ 400 ಮಂದಿ ಕಾಣೆಯಾಗಿರುವುದಾಗಿ ಅಲ್ಲಿನ ಮೇಯರ್‌ ತಿಳಿಸಿದ್ದಾರೆ. ಇತ್ತೀಚೆಗೆ ದೊಡ್ಡ ನರಮೇಧವಾದ ಬುಚಾದಲ್ಲಿ 25ಕ್ಕೂ ಅಧಿಕ ಮಹಿಳೆಯರ ಮೇಲೆ ರಷ್ಯಾ ಸೈನಿಕರು ಅತ್ಯಾಚಾರ ನಡೆಸಿದ್ದಾರೆ ಎಂದು ಉಕ್ರೇನ್‌ ಅಧಿಕಾರಿಗಳು ಆರೋಪಿಸಿದ್ದಾರೆ.

ಇದನ್ನೂ ಓದಿ:ಜಗನ್‌ ಸಂಪುಟದ ಎಲ್ಲಾ ಸಚಿವರು ನಾಳೆ ರಾಜೀನಾಮೆ; ಎ.11ಕ್ಕೆ ಸಂಪುಟ ಪುನರ್‌ರಚನೆ

Advertisement

ಸ್ಫೋಟಕ್ಕೆ ಯತ್ನ: ಇದೇ ವೇಳೆ, ರೊಮೇನಿಯಾ ರಾಜಧಾನಿ ಬುಕಾರೆಸ್‌cನಲ್ಲಿರುವ ರಷ್ಯಾ ರಾಯಭಾರ ಕಚೇರಿಗೆ ಸ್ಫೋಟಕ ತುಂಬಿದ್ದ‌ ಕಾರು ನುಗ್ಗಿಸಿ ಸ್ಫೋಟಿಸಲು ಯತ್ನಿಸಲಾಗಿದೆ. ಕಚೇರಿ ಯ ಗೇಟಿಗೆ ಡಿಕ್ಕಿ ಹೊಡೆಯುತ್ತಿದ್ದಂತೆ ಸ್ಫೋಟಿಸಿದ್ದು, ಬೆಂಕಿ ಹೊತ್ತಿ ಉರಿದಿದೆ.

ಇನ್ನೊಂದೆಡೆ, ಉಕ್ರೇನ್‌ಗೆ ಸಹಾಯ ಹಸ್ತ ಚಾಚಿರುವ ಐರಿಷ್‌ ರಾಷ್ಟ್ರಕ್ಕೆ ಉಕ್ರೇನ್‌ ಅಧ್ಯಕ್ಷ ಝೆಲೆನ್‌ಸ್ಕಿ ಧನ್ಯವಾದ ತಿಳಿಸಿದ್ದಾರೆ. ಹಾಗೆಯೇ ಉಕ್ರೇನ್‌ನ ನೆರೆ ರಾಷ್ಟ್ರವಾಗಿರುವ ಹಂಗೇರಿಯ ಪ್ರಧಾನಿ ವಿಕ್ಟರ್‌ ಒರ್ಬಾನ್‌ ಅವರು ಕದನ ವಿರಾಮ ಘೋಷಿಸಿ ಎಂದು ರಷ್ಯಾ ಅಧ್ಯಕ್ಷ ಪುತಿನ್‌ಗೆ ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next