Advertisement

Russia ಪಡೆಗಳಿಂದ ಭಾರೀ ದಾಳಿ : ಉಕ್ರೇನ್ ನಲ್ಲಿ ಕನಿಷ್ಠ 51 ಮಂದಿ ಮೃತ್ಯು

10:04 PM Oct 05, 2023 | Team Udayavani |

ಕೀವ್ : ರಷ್ಯಾದ ಕ್ಷಿಪಣಿಯು ಗುರುವಾರ ಈಶಾನ್ಯ ಉಕ್ರೇನ್ ನ ಖಾರ್ಕಿವ್ ಪ್ರದೇಶದ ಕುಪಿಯಾನ್ಸ್ಕ್ ಜಿಲ್ಲೆಯ ಸೂಪರ್ ಮಾರ್ಕೆಟ್‌ಗೆ ಅಪ್ಪಳಿಸಿ ಕನಿಷ್ಠ 51 ಜನರು ಸಾವನ್ನಪ್ಪಿದ್ದಾರೆ ಎಂದು ಉಕ್ರೇನ್ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಕ್ಷಿಪಣಿ ಕೆಫೆ ಮತ್ತು ಕಿರಾಣಿ ಅಂಗಡಿಗೆ ಅಪ್ಪಳಿಸಿದ್ದು ಉಕ್ರೇನಿಯನ್ ಅಧಿಕಾರಿಗಳು ದಿಗ್ಭ್ರಮೆಗೊಂಡಿದ್ದಾರೆ. ರಕ್ಷಣಾ ಕಾರ್ಯಕರ್ತರು ಹೊಗೆಯಾಡುತ್ತಿರುವ ಅವಶೇಷಗಳಲ್ಲಿರುವ ದೃಶ್ಯಗಳನ್ನು ಅಧಿಕಾರಿಗಳು ಪೋಸ್ಟ್ ಮಾಡಿದ್ದಾರೆ. ಕೆಲವು ಫೋಟೋಗಳಲ್ಲಿ ದೇಹಗಳು ಕಾಂಕ್ರೀಟ್ ಮತ್ತು ತಿರುಚಿದ ಲೋಹದ ಚಪ್ಪಡಿಗಳಡಿಯಲ್ಲಿ ಬಿದ್ದಿರುವುದನ್ನು ಕಾಣಬಹುದಾಗಿದೆ ಮತ್ತು ಇತರ ರಕ್ಷಣಾ ಕಾರ್ಯಕರ್ತರು ದೇಹಗಳನ್ನು ಒಯ್ಯುತ್ತಿರುವುದು ಕಂಡು ಬಂದಿದೆ.

ಯುರೋಪಿಯನ್ ನಾಯಕರು ಉಕ್ರೇನ್ ಅಧ್ಯಕ್ಷ ವ್ಲಾದಿಮಿರ್ ಝೆಲೆನ್ಸ್ಕಿ ಅವರು ಸ್ಪೇನ್‌ನ ಗ್ರೆನಾಡಾದಲ್ಲಿ ಭೇಟಿಯಾಗುತ್ತಿದ್ದಂತೆ ಈ ದಾಳಿ ನಡೆದಿದೆ. ನಾಗರಿಕರನ್ನು ಗುರಿಯಾಗಿರಿಸಿ ದಾಳಿ ಮಾಡುವುದಿಲ್ಲ ಎಂದಿರುವ ರಷ್ಯಾ ತತ್ ಕ್ಷಣ ಯಾವುದೇ ಪ್ರತಿಕ್ರಿಯೆಗಳನ್ನು ನೀಡಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next