Advertisement

ರಷ್ಯಾದ 5 ವಿಮಾನಗಳು, ಹೆಲಿಕ್ಯಾಪ್ಟರ್ ಹೊಡೆದುರುಳಿಸಿದ ಉಕ್ರೇನ್

12:27 PM Feb 24, 2022 | Team Udayavani |

ಮಾಸ್ಕೋ : ರಷ್ಯಾ ಸಮರ ಘೋಷಿಸಿ ದಾಳಿ ಆರಂಭಿಸಿದ ಬೆನ್ನಲ್ಲೇ ಲುಹಾನ್ಸ್ಕ್ ಪ್ರದೇಶದಲ್ಲಿ ಐದು ರಷ್ಯಾದ ವಿಮಾನಗಳು ಮತ್ತು ರಷ್ಯಾದ ಹೆಲಿಕ್ಯಾಪ್ಟರ್ ಅನ್ನು ಹೊಡೆದುರುಳಿಸಲಾಗಿದೆ ಎಂದು ಉಕ್ರೇನ್ ಮಿಲಿಟರಿ ಹೇಳಿಕೊಂಡಿದೆ.

Advertisement

ಉಕ್ರೇನ್‌ನ ಅಧ್ಯಕ್ಷರು ಗುರುವಾರ ಸಮರ ಕಾನೂನನ್ನು ಘೋಷಿಸಿ, ರಷ್ಯಾ ಮಿಲಿಟರಿ ದಾಳಿ ಪ್ರಾರಂಭಿಸುವುದರಿಂದ ಭಯಪಡಬೇಡಿ ಎಂದು ನಾಗರಿಕರಿಗೆ ಧೈರ್ಯ ತುಂಬಿದ್ದಾರೆ.

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್‌ನಲ್ಲಿ ಮಿಲಿಟರಿ ಕಾರ್ಯಾಚರಣೆಯನ್ನು ಘೋಷಿಸಿದ್ದು, ದೂರದರ್ಶನದ ಭಾಷಣದಲ್ಲಿ ಪುಟಿನ್, ಉಕ್ರೇನ್‌ನಿಂದ ಬರುತ್ತಿರುವ ಬೆದರಿಕೆಗಳಿಗೆ ಪ್ರತಿಕ್ರಿಯೆಯಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ. ಉಕ್ರೇನ್ ಅನ್ನು ವಶಪಡಿಸಿಕೊಳ್ಳುವ ಗುರಿಯನ್ನು ಹೊಂದಿಲ್ಲ ಎಂದು ಹೇಳಿದ್ದಾರೆ. ರಷ್ಯಾದ ಕ್ರಮದಲ್ಲಿ ಹಸ್ತಕ್ಷೇಪ ಮಾಡುವ ಯಾವುದೇ ಪ್ರಯತ್ನವು “ಅವರು ಎಂದಿಗೂ ನೋಡದ ಪರಿಣಾಮಗಳಿಗೆ” ಕಾರಣವಾಗಬಹುದು ಎಂದು ಪುಟಿನ್ ಇತರ ದೇಶಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಅಮೆರಿಕಾ ಅಧ್ಯಕ್ಷ ಜೋ ಬಿಡೆನ್ ಅವರು ಉಕ್ರೇನ್ ಮೇಲಿನ ದಾಳಿಯ ಬಗ್ಗೆ “ಜಗತ್ತು ರಷ್ಯಾವನ್ನು ಹೊಣೆಗಾರರನ್ನಾಗಿ ಮಾಡುತ್ತದೆ” ಎಂದು ಎಚ್ಚರಿಕೆ ನೀಡಿದ್ದಾರೆ ಮತ್ತು “ವಿಪತ್ತು ಜೀವಹಾನಿ ಉಂಟುಮಾಡುತ್ತದೆ” ಎಂದು ಅವರು ಎಚ್ಚರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next