ಕೀವ್: ಪೂರ್ವ ಉಕ್ರೇನ್‌ನಲ್ಲಿ ದಾಳಿ ತೀವ್ರಗೊಳಿಸಿರುವ ರಷ್ಯಾ ರವಿವಾರ ಲುಹಾನ್‌ಸ್ಕ್ ಪ್ರಾಂತ್ಯದ ಶಾಲಾ ಕಟ್ಟಡವೊಂದನ್ನು ಗುರಿಯಾಗಿಸಿಕೊಂಡು ವೈಮಾನಿಕ ದಾಳಿ ನಡೆಸಿದೆ.
ಈ ದಾಳಿಯಲ್ಲಿ 60 ಮಂದಿ ಸಾವಿಗೀಡಾಗಿರುವ ಸಾಧ್ಯತೆಯಿದೆ ಎಂದು ಗವರ್ನರ್ ಸರ್ಗಿ ಗೈಡಾಯಿ ಹೇಳಿದ್ದಾರೆ.
ಕಟ್ಟಡ ನೆಲಮಹಡಿಯಲ್ಲಿ ಸುಮಾರು 90 ಮಂದಿ ಆಶ್ರಯ ಪಡೆದಿದ್ದರು. ಪುತಿನ್ ಪಡೆ ಹಾಕಿದ ಬಾಂಬ್‌ಗ ಇಡೀ ಕಟ್ಟಡವೇ ಧ್ವಂಸಗೊಂಡಿದೆ. ಅವಶೇಷಗಳಡಿ ಸಿಲುಕಿದ್ದ 30 ಮಂದಿಯನ್ನು ರಕ್ಷಿಸಲಾಗಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ. ಈ ನಡುವೆ, ಕಪ್ಪು ಸಮುದ್ರದ ಸ್ನೇಕ್ ದ್ವೀಪದಲ್ಲಿದ್ದ ರಷ್ಯಾದ ನೌಕೆಯೊಂದನ್ನು ಉಕ್ರೇನ್ ಪಡೆ ರವಿವಾರ ಧ್ವಂಸಗೊಳಿಸಿದೆ.
ಜಿಲ್ ಬೈಡೆನ್ ಅಚ್ಚರಿಯ ಭೇಟಿ: ಅಮ್ಮಂದಿರ ದಿನವಾದ ರವಿವಾರ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ರ ಪತ್ನಿ ಜಿಲ್ ಬೈಡೆನ್ ಯುದ್ಧ ಪೀಡಿತ ಉಕ್ರೇನ್‌ಗೆ ಅಚ್ಚರಿಯ ಭೇಟಿ ನೀಡಿ ದ್ದಾರೆ. ಈ ಅಘೋಷಿತ ಭೇಟಿ ವೇಳೆ ಉಕ್ರೇನ್ ಅಧ್ಯಕ್ಷ ಝೆಲೆ ನ್‌ಸ್ಕಿ ಅವರ ಪತ್ನಿ ಒಲೆನಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಜತೆಗೆ ಇಬ್ಬರೂ ಹಳ್ಳಿಯೊಂದರ ಶಾಲೆಗೂ ಭೇಟಿ ನೀಡಿದ್ದಾರೆ. ಮತ್ತೊಂದೆಡೆ ಕೆನಡಾ ಪ್ರಧಾನಿ ಜಸ್ಟಿನ್ ಅವರೂ ಉಕ್ರೇನ್‌ಗೆ ಅನಿರೀಕ್ಷಿತ ವಾಗಿ ಆಗಮಿಸಿದ್ದು, ದಾಳಿಯಿಂದ ಹಾನಿಗೀಡಾದ ಇರ್ಪಿನ್ ನಗರವನ್ನು ನೋಡಿ ದುಃಖಿಸಿದ್ದಾರೆ.