Advertisement

ಕೀವ್‌ನಲ್ಲೂ ಅಮಾನುಷ ಹತ್ಯಾಕಾಂಡ; ಬುಚಾದಲ್ಲಾದಂತೆ ರಾಜಧಾನಿಯಲ್ಲೂ ನಾಗರಿಕರ ಕಗ್ಗೊಲೆ

12:06 AM Apr 05, 2022 | Team Udayavani |

ಕೀವ್‌: ಉಕ್ರೇನ್‌ನಲ್ಲಿ 40 ದಿನಗಳಲ್ಲಿ ರಷ್ಯಾದ ಪಡೆಗಳು ಎಸಗಿರುವ ಘನಘೋರ ಯುದ್ಧಾಪರಾಧಗಳಿಗೆ ಪೂರಕ ಸಾಕ್ಷಿಗಳು ಭರಪೂರ ಸಿಗಲಾರಂಭಿಸಿವೆ.

Advertisement

ಬುಚಾದಲ್ಲಿ ಜನಸಾಮಾನ್ಯರ ಕೈಗಳನ್ನು ಕಟ್ಟಿ ಅವರ ತಲೆಗಳಿಗೆ ಗುಂಡು ಹಾರಿಸಿ ಹತ್ಯೆಗೈದಿರುವ ಅಮಾನುಷ ಘಟನೆಗಳು ವರದಿಯಾದ ಬೆನ್ನಲ್ಲೇ, ಉಕ್ರೇನ್‌ ರಾಜಧಾನಿ ಕೀವ್‌ನ ಹೊರವಲಯದಲ್ಲಿಯೂ ಇಂಥ ಪೈಶಾಚಿಕ ಕೃತ್ಯಗಳು ನಡೆದಿರುವುದು ಸೋಮವಾರ ಬೆಳಕಿಗೆ ಬಂದಿದೆ.

ಅಲ್ಲಿನ ಹಲವಾರು ಪ್ರಾಂತ್ಯ ಗಳಲ್ಲಿನ ರಸ್ತೆಗಳಲ್ಲಿ ಕೈಗಳನ್ನು ಕಟ್ಟಿ ಕೊಲ್ಲಲ್ಪಟ್ಟಿರುವ ವ್ಯಕ್ತಿಗಳ ಶವಗಳನ್ನು ತಗ್ಗು ತೋಡಿ ಮಣ್ಣುಮುಚ್ಚಿ ರುವುದು ಕಂಡು ಬಂದಿದೆ.

ಕೀವ್‌ನ ಸುತ್ತಮುತ್ತಲೂ ಈವರೆಗೆ 410 ಅನಾಥ ಶವಗಳು ಕಂಡುಬಂದಿರು ವುದಾಗಿ ಉಕ್ರೇನ್‌ನ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ದೇಶಾದ್ಯಂತ ಅಂಗನವಾಡಿ ಅಭಿವೃದ್ಧಿಗೆ ಕ್ರಮ: ಸಚಿವೆ ಸ್ಮತಿ ಇರಾನಿ

Advertisement

ಝೆಲೆನ್‌ಸ್ಕಿ ಭೇಟಿ: ನರಮೇಧ ನಡೆದಿರುವ ಬುಚಾ, ಕೀವ್‌ ಹಾಗೂ ಇರ್ಪಿನ್‌ ನಗರಗಳಿಗೆ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಭೇಟಿ ನೀಡಿ ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ. ಈ ಸಂದರ್ಭದಲ್ಲಿ ಪತ್ರಕರ್ತರ ಜತೆಗೆ ಮಾತನಾಡಿದ ಅವರು, ರಷ್ಯಾ ಯುದ್ಧಾ ಪರಾಧ ಎಸಗಿದೆ ಮತ್ತು ನರಹತ್ಯೆ ಮಾಡಿದೆ ಎಂದು ದೂರಿದರು.

ರಷ್ಯಾ ನಿರಾಕರಣೆ: ರಷ್ಯಾದ ವಿರುದ್ಧ ಜಗತ್ತಿನ ನಾನಾ ರಾಷ್ಟ್ರಗಳು ಕಿಡಿಕಾರಿವೆ. ರಷ್ಯಾದ ಈ ನಡೆಯನ್ನು ಸಹಿಸಲು ಸಾಧ್ಯವಿಲ್ಲ ಎಂದು ಹಲವಾರು ದೇಶಗಳು ಹೇಳಿವೆ. ಆದರೆ ಈ ಆರೋಪಗಳನ್ನು ರಷ್ಯಾ ನಿರಾಕರಿಸಿದೆ. ರಷ್ಯಾ ವಿರುದ್ಧ ಅಪಪ್ರಚಾರ ನಡೆಸಲೆಂದೇ ಫೇಕ್‌ ವೀಡಿಯೋಗಳನ್ನು ಉಕ್ರೇನ್‌ ಹರಿಬಿಡುತ್ತಿದೆ ಎಂದು ರಷ್ಯಾ ಸರಕಾರದ ವಕ್ತಾರ ಡಿಮಿಟ್ರಿ ಪೆಸ್ಕೊವ್‌ ಹೇಳಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.