ಮಾಸ್ಕೋ: ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ಭೀತಿ ಆವರಿಸಿದ್ದ ಬೆಳವಣಿಗೆಯ ನಡುವೆಯೇ ಅಮೆರಿಕ ಮತ್ತು ಬ್ರಿಟನ್ ತಮ್ಮ ದೇಶದ ಪ್ರಜೆಗಳು ಕೂಡಲೇ ವಾಪಸ್ ಆಗುವಂತೆ ಸೂಚನೆ ನೀಡಿದ್ದವು. ಇದೀಗ ಯುದ್ಧ ತಾಲೀಮು ನಡೆಸಿದ ಬಳಿಕ ತಮ್ಮ ಕೆಲವು ಮಿಲಿಟರಿ ಪಡೆ ಉಕ್ರೇನ್ ಗಡಿಭಾಗದಿಂದ ವಾಪಸ್ ಆಗಿರುವುದಾಗಿ ರಷ್ಯಾ ಮಂಗಳವಾರ (ಫೆ.15) ತಿಳಿಸಿದೆ.
ಇದನ್ನೂ ಓದಿ:ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 1,700 ಅಂಕ ಜಿಗಿತ: ಮತ್ತೆ 58 ಸಾವಿರ ಅಂಕಗಳಿಗೆ ಏರಿಕೆ
ಆದರೆ ಎಷ್ಟು ಸಂಖ್ಯೆಯ ಸೇನಾಪಡೆಯನ್ನು ಹಿಂಪಡೆದಿದೆ ಎಂಬ ಸ್ಪಷ್ಟ ಚಿತ್ರಣ ಲಭ್ಯವಾಗಿಲ್ಲ ಎಂದು ವರದಿ ಹೇಳಿದೆ. ಇತ್ತೀಚೆಗಷ್ಟೇ ಉಕ್ರೇನ್ ನ ಉತ್ತರ ಮತ್ತು ಪೂರ್ವ ಭಾಗದಲ್ಲಿ ಅಂದಾಜು 1,30,000 ದಷ್ಟು ಸೇನೆಯನ್ನು ರಷ್ಯಾ ನಿಯೋಜಿಸಿತ್ತು.
ಸೇನೆಯ ತಾಲೀಮು ಪೂರ್ಣಗೊಂಡ ನಂತರ ತಮ್ಮ ನೆಲೆಯಿಂದ ಸೇನಾಪಡೆ ವಾಪಸ್ ಆಗಲಿದೆ ಎಂದು ನಾವು ಹೇಳಿದ್ದೇವು ಎಂದು ರಷ್ಯಾದ ಕ್ರೆಮ್ಲಿನ್ ವಕ್ತಾರ ಡೆಮಿಟ್ರೈ ಪೆಸ್ಕೋವ್ ತಿಳಿಸಿದ್ದಾರೆ.
ರಷ್ಯಾ ದಾಳಿ ನಡೆಸಲಿದೆ ಎಂದು ಅಮೆರಿಕ ದುರುದ್ದೇಶದಿಂದ ಭೀತಿ ಹುಟ್ಟಿಸುವಂತೆ ಮಾಡಿರುವುದಾಗಿ ಡೆಮಿಟ್ರೈ ಆರೋಪಿಸಿದ್ದಾರೆ. ದಾಳಿ ನಡೆಸಬೇಕೆಂಬ ಉದ್ದೇಶ ನಮಗಿಲ್ಲ ಎಂದು ರಷ್ಯಾ ತಿಳಿಸಿದೆ. ಆದರೆ ನಾವು ಪೂರ್ಣಪ್ರಮಾಣದಲ್ಲಿ ಸೇನೆಯನ್ನು ಹಿಂಪಡೆಯುತ್ತಿರುವುದು ಸತ್ಯ ಎಂದು ವಿದೇಶಾಂಗ ಕಾರ್ಯದರ್ಶಿ ಲಿಝ್ ಟ್ರುಸ್ಸ್ ಎಲ್ ಬಿಸಿ ರೇಡಿಯೋಕ್ಕೆ ತಿಳಿಸಿದ್ದಾರೆ.