Advertisement

ರಷ್ಯಾ ಸಾಧನೆ; ಕೋವಿಡ್ 19 ಲಸಿಕೆಯ ಪ್ರಿಕ್ಲಿನಿಕಲ್‌ ಪ್ರಯೋಗ ಯಶಸ್ವಿ

09:13 AM Aug 26, 2020 | Nagendra Trasi |

ಮಾಸ್ಕೋ: ರಷ್ಯಾದ ವೆಕ್ಟೊರ್‌ ಸ್ಟೇಟ್‌ ಸೆಂಟರ್‌ ಆಫ್ ವೈರಾಲಜಿ ಆ್ಯಂಡ್‌ ಬಯೋಟೆಕ್ನಾಲಜಿ ಅಭಿವೃದ್ಧಿಪಡಿಸಿರುವ ಕೋವಿಡ್ ವೈರಸ್‌ ನಿಗ್ರಹ ಲಸಿಕೆಯು ಪ್ರಯೋಗಗಳಲ್ಲಿ ಅತ್ಯಂತ ಹೆಚ್ಚು ಪರಿಣಾಮಕಾರಿಯಾಗಿರುವುದು ಸಾಬೀತಾಗಿದೆ ಎಂದು ಕೇಂದ್ರದ ನಿರ್ದೇಶಕ ರಿನಟ್‌ ಮಾಕ್ಸಿಯುಟೊವ್‌ ಹೇಳಿದ್ದಾರೆ.

Advertisement

ಈ ಲಸಿಕೆ ವೆಕ್ಟೊರ್‌ ಕೇಂದ್ರದ ಅಮೈನೋ ಆ್ಯಸಿಡ್‌ಗಳ ಮಿಶ್ರಣದ ವಿಶಿಷ್ಟ ಪೆಪ್ಟೆ„ಡ್‌ ಆಧಾರಿತವಾಗಿದ್ದು, ತನ್ನ ಪ್ರಿಕ್ಲಿನಿಕಲ್‌ ಪರೀಕ್ಷೆಗಳಲ್ಲಿ ಹೆಚ್ಚು ದಕ್ಷತೆಯನ್ನು ಪ್ರದರ್ಶಿಸಿ ಕ್ಲಿನಿಕಲ್‌ ಪ್ರಯೋಗಗಳಿಗೆ ಸಿದ್ಧವಾಗಿದೆ ಎಂದು ರಿನಟ್‌ ತಿಳಿಸಿದ್ದಾರೆ.

ಇನ್ನು ಮೊದಲ ಹಂತದ ಪ್ರಯೋಗದ ಎರಡು ಮಧ್ಯಾಂತರ ವರದಿ ಗಳನ್ನು ಆರೋಗ್ಯ ಸಚಿವಾಲಯಕ್ಕೆ ನೀಡಲಾಗಿದ್ದು, ಪ್ರಯೋಗಕ್ಕೆ ಒಳಪಟ್ಟ ಎಲ್ಲ ಸ್ವಯಂ ಸೇವಕರೂ ಹೆಚ್ಚು ಆರೋಗ್ಯವಾಗಿದ್ದಾರೆ. ಮೊದಲ ಸ್ವಯಂ ಸೇವಕನಿಗೆ ಎರಡನೆಯ ಬಾರಿಗೆ ಲಸಿಕೆ ನೀಡಲಾಗಿದ್ದು, 21 ದಿನಗಳ ಬಳಿಕ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಸದ್ಯ ಬಿಡುಗಡೆಗೊಂಡಿರುವ ಗುಣಮುಖ ಸೋಂಕಿತನನ್ನು ಹೊರರೋಗಿ ವಿಭಾಗದಡಿಯಲ್ಲಿ ನಿಗಾದಲ್ಲಿಡಲಾಗಿದ್ದು, ಅವರು ಮೂರು, ಆರು ಮತ್ತು ಒಂಬತ್ತನೇ ತಿಂಗಳು ಆಸ್ಪತ್ರೆಗೆ ಭೇಟಿ ನೀಡಲಿದ್ದಾರೆ ಎಂದು ವಿವರಿಸಿದ್ದಾರೆ.

ಈ ಲಸಿಕೆಯ ಕ್ಲಿನಿಕಲ್‌ ಪ್ರಯೋಗವು ಸೆಪ್ಟಂಬರ್‌ ಅಂತ್ಯದೊಳಗೆ ಮುಗಿಯಬಹುದು. 2020ರ ಅಕ್ಟೋಬರ್‌ನಲ್ಲಿ ಲಸಿಕೆಯನ್ನು ನೋಂದಣಿ ಮಾಡಲಾಗುವುದು ಮತ್ತು ನವೆಂಬರ್‌ನಲ್ಲಿ ವ್ಯಾಪಕ ಉತ್ಪಾದನೆ ಆರಂಭಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

Advertisement

ಆಗಸ್ಟ್ 11ರಂದು ರಷ್ಯಾ, ಕೋವಿಡ್ 19 ಸೋಂಕನ್ನು ನಿಗ್ರಹ ಮಾಡುವ ಜಗತ್ತಿನ ಮೊದಲ ಲಸಿಕೆಯನ್ನು ನೋಂದಣಿ ಮಾಡಿತ್ತು. ಈ ಲಸಿಕೆಯನ್ನು ರಷ್ಯಾದ ಆರೋಗ್ಯ ಸಚಿವಾಲಯದ ಗಮಾಲೆ ರಾಷ್ಟ್ರೀಯ ಸಂಶೋಧನಾ ಎಪಿಡೆಮಿಯಾಲಜಿ ಮತ್ತು ಮೈಕ್ರೋಬಯಾಲಜಿ ಕೇಂದ್ರಅಭಿವೃದ್ಧಿಪಡಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next