Advertisement
ಏನಿದು ಕಿತ್ತಾಟ? : ಈ ಸಮಸ್ಯೆ ಇಂದು-ನಿನ್ನೆಯದಲ್ಲ. ಕಳೆದ 30 ವರ್ಷಗಳಿಂದಲೂ ಈ ವಿವಾದ ಹಾಗೆಯೇ ಇದೆ. ಸೋವಿಯತ್ ಯೂನಿಯನ್ ಛಿದ್ರವಾದಾಗ ಉಕ್ರೇನ್ ಕೂಡ ಹೊಸ ದೇಶವಾಗಿ ಉದಯವಾಯಿತು. ಆದರೆ 2013-14ರ ವರೆಗೆ ಉಕ್ರೇನ್‌ನಲ್ಲಿ ರಷ್ಯಾ ಪರ ಮೃದು ಧೋರಣೆ ಹೊಂದಿದ್ದ ಅಧ್ಯಕ್ಷರೇ ಇದ್ದರು. ಆಗ ಕ್ರಾಂತಿಯ ಕಹಳೆ ಮೊಳಗಿ ಇವರನ್ನು ಕೆಳಗಿಳಿಸಲಾಯಿತು. ಬಳಿಕ ರಷ್ಯಾ ವಿರೋಧಿ ಧೋರಣೆಯ ಅಧ್ಯಕ್ಷರು ಬಂದಿದ್ದಾರೆ. ಉಕ್ರೇನ್‌ಗೆ ಹೊಸ ಅಧ್ಯಕ್ಷರು ಬಂದ ಮೇಲೆ, ಇವರ ಪಾಶ್ಚಾತ್ಯ ದೇಶಗಳ ಜತೆಗಿನ ಸಂಬಂಧ ಉತ್ತಮವಾಗಿದೆ. ಅನಂತರದಲ್ಲಿ ಐರೋಪ್ಯ ಒಕ್ಕೂಟಕ್ಕೂ ಸೇರಿದ್ದಾರೆ. ಈ ಬೆಳವಣಿಗೆಗಳು ರಷ್ಯಾದ ಕಣ್ಣು ಉರಿಸಿವೆ. ಅಷ್ಟೇ ಅಲ್ಲ ನಿಜವಾಗಿ ಸಮಸ್ಯೆ ಶುರುವಾಗಿದ್ದು, ಉಕ್ರೇನ್ ನ್ಯಾಟೋ ಗುಂಪಿಗೆ ಸೇರಲಿದೆ ಎಂಬ ವಿಷಯ ಬದಲಿಗೆ ಬಂದ ಮೇಲೆ.
Advertisement
ಈಗಿನ ಪರಿಸ್ಥಿತಿ ನೋಡಿದರೆ ಯುದ್ಧ ನಡೆಯುವ ಸಂಭವ ಕಡಿಮೆ ಇದೆ ಎಂದು ಕೆಲವು ಅಂತಾರಾಷ್ಟ್ರೀಯ ಮಟ್ಟಗಳ ತಜ್ಞರು ಹೇಳುತ್ತಾರೆ. ಆದರೆ ಪುತಿನ್ ಮನಸ್ಸಿನಲ್ಲಿ ಏನಿದೆ ಎಂಬುದು ಯಾರಿಗೂ ಗೊತ್ತಿಲ್ಲ. ಹೀಗಾಗಿ ಯುದ್ಧವಾಗುತ್ತೋ ಇಲ್ಲವೋ ಎಂದು ಹೇಳಲು ಸಾಧ್ಯವಿಲ್ಲ ಎನ್ನುತ್ತಾರೆ ಅವರು. ಆದರೂ ಉಕ್ರೇನ್ ಗಡಿಯಲ್ಲಿ ರಷ್ಯಾ ಸೇನೆಯನ್ನು ನಿಲ್ಲಿಸಿರುವುದು ಸತ್ಯ. ಒಂದು ವೇಳೆ ರಷ್ಯಾ, ಉಕ್ರೇನ್ ಅನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾದರೆ ಅಮೆರಿಕ ನೇರವಾಗಿಯೇ ಉಕ್ರೇನ್‌ಗೆ ರಕ್ಷಣ ಸಹಾಯ ಮಾಡಬೇಕಾಗುತ್ತದೆ ಎಂದು ಅಧ್ಯಕ್ಷ ಜೋ ಬೈಡೆನ್ ಹೇಳಿದ್ದಾರೆ. ಹೀಗಾಗಿ ಉಕ್ರೇನ್ ಕಾರಣಕ್ಕಾಗಿ, ಅಮೆರಿಕ ಮತ್ತು ರಷ್ಯಾ ನಡುವೆ ಯುದ್ಧವಾಗಬಹುದೇ ಎಂಬ ಪ್ರಶ್ನೆ ಎದ್ದಿದೆ.
ಯುದ್ಧ ಬೇಡವಾದರೆ, ಪುತಿನ್ ಷರತ್ತುಗಳುಂಟು… :
ಹೌದು, ಯುದ್ಧ ಬೇಡವಾದಲ್ಲಿ ನಮ್ಮದು ಕೆಲವು ಷರತ್ತುಗಳಿವೆ, ಇವುಗಳನ್ನು ಈಡೇರಿಸಿ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಪಾಶ್ಚಾತ್ಯ ದೇಶಗಳಿಗೆ ಸೂಚಿಸಿದ್ದಾರೆ. ಅಂದರೆ ಪೋಲ್ಯಾಂಡ್, ಬಾಲ್ಟಿಕ್ಸ್ ಸೇರಿ ಪೂರ್ವ ಐರೋಪ್ಯ ದೇಶಗಳಿಂದ ನ್ಯಾಟೋ ಪಡೆಗಳನ್ನು ವಾಪಸ್ ಪಡೆಯಬೇಕು. ಉಕ್ರೇನ್ ಅನ್ನು ಖಾಯಂ ಸದಸ್ಯ ರಾಷ್ಟ್ರವಾಗಿ ನ್ಯಾಟೋ ಎಂದೂ ಗುರುತಿಸಬಾರದು. ಪೋಲ್ಯಾಂಡ್, ಈಸ್ಟಾನಿಯಾ, ಲಾಟ್ವಿಯಾ, ಸ್ಲೋವಾಕಿಯಾ, ಹಂಗೇರಿ, ಲಿಥೆÌàನಿಯಾದಿಂದ ನ್ಯಾಟೋ ಪಡೆಗಳು ವಾಪಸ್ ಹೋಗಬೇಕು, ಈ ದೇಶಗಳಿಗೆ ಯಾವುದೇ ರೀತಿಯ ಶಸ್ತ್ರಾಸ್ತ್ರದ ಸಹಾಯ ನೀಡಬಾರದು.
ಎಂಥದ್ದೇ ಪರಿಸ್ಥಿತಿ ಬರಲಿ, ಎದುರಿಸುತ್ತೇವೆ… :
ಇದು ಉಕ್ರೇನ್ ಜನತೆಯ ಮಾತುಗಳು. ಈ ದೇಶದಲ್ಲಿ ರಷ್ಯಾ ಬಗ್ಗೆ ಒಂದು ಸಮೀಕ್ಷೆ ನಡೆಸಲಾಗಿದ್ದು, ಶೇ.85 ಮಂದಿ ವಿರೋಧಿಸಿದ್ದಾರೆ. ಶೇ.15 ಮಂದಿ ಮಾತ್ರ ರಷ್ಯಾ ಬಗ್ಗೆ ಸಹಾನುಭೂತಿ ಹೊಂದಿದ್ದಾರೆ. ಹೀಗಾಗಿ ಒಂದು ವೇಳೆ ರಷ್ಯಾ ದಾಳಿ ಮಾಡಿದರೂ, ನಾವು ಬಗ್ಗುವುದಿಲ್ಲ. ಎಂಥದ್ದೇ ಕೆಟ್ಟ ಸನ್ನಿವೇಶವಾದರೂ ಎದುರಿಸುತ್ತೇವೆ ಎಂದು ಜನರು ಹೇಳಿದ್ದಾರೆ.
ರಷ್ಯಾ ಬೇಡಿಕೆ ತಿರಸ್ಕರಿಸಿತೇ ಅಮೆರಿಕ? :
ಹೌದು, ಉಕ್ರೇನ್ ಅನ್ನು ನ್ಯಾಟೋದೊಳಗೆ ಸೇರಿಸಿಕೊಳ್ಳಬಾರದು ಎಂಬ ರಷ್ಯಾ ಬೇಡಿಕೆಯನ್ನು ಅಮೆರಿಕ ಸಾರಾಸಗಟಾಗಿ ತಿರಸ್ಕರಿಸಿದೆ. ಅಮೆರಿಕದ ರಕ್ಷಣ ಸಚಿವ ಆ್ಯಂಟನಿ ಬ್ಲಿಂಕೆನ್ ಅವರು ಅಧಿಕೃತವಾಗಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಉಕ್ರೇನ್ ಅನ್ನು ನ್ಯಾಟೋದಿಂದ ನಿಷೇಧ ಮಾಡುವ ಯಾವುದೇ ಪ್ರಸ್ತಾವ ನಮ್ಮ ಮುಂದೆ ಇಲ್ಲ ಎಂದು ಅವರು ಘೋಷಿಸಿದ್ದಾರೆ.
ಏನಿದು ನ್ಯಾಟೋ? :
1949ರಲ್ಲಿ ರಚನೆಯಾದ ಮಿಲಿಟರಿ ಒಕ್ಕೂಟವಿದು. ಇದರಲ್ಲಿ ಅಮೆರಿಕ, ಕೆನಡಾ, ಇಂಗ್ಲೆಂಡ್, ಫ್ರಾನ್ಸ್ ಸೇರಿದಂತೆ 12 ದೇಶಗಳಿವೆ. ಈ ಗುಂಪಿನ ಯಾವುದೇ ದೇಶದ ಮೇಲೆ ಹೊರಗಿನವರು ಮಿಲಿಟರಿ ದಾಳಿ ನಡೆಸಿದರೆ ಒಂದಾಗಿ ಹೋರಾಡುವ ಒಪ್ಪಂದ ಮಾಡಿಕೊಂಡಿವೆ. ವಿಶೇಷವೆಂದರೆ, 1949ರ ವೇಳೆಯಲ್ಲಿ ಸೋವಿಯತ್ ಯೂನಿಯನ್‌ನ ಪ್ರಾಬಲ್ಯ ಹೆಚ್ಚಾದಂತೆ ಇದನ್ನು ರಚಿಸಿಕೊಳ್ಳಲಾಯಿತು. ಅಂದರೆ ನೇರವಾಗಿ ಹೇಳಬೇಕು ಎಂದಾದರೆ ರಷ್ಯಾವನ್ನೇ ಗುರಿಯಾಗಿಸಿಕೊಂಡು ಮಾಡಿಕೊಂಡ ಮಿಲಿಟರಿ ಕೂಟ. 1991ರಲ್ಲಿ ಸೋವಿಯತ್ ಯೂನಿಯನ್ ಛಿದ್ರವಾದ ಮೇಲೆ ನ್ಯಾಟೋಗೆ ಸೇರುವವರ ಸಂಖ್ಯೆ ಹೆಚ್ಚಾಯಿತು. ಈಗ ನ್ಯಾಟೋದಲ್ಲಿ 30 ರಾಷ್ಟ್ರಗಳಿವೆ.
ಪರಸ್ಪರ ಮಿಲಿಟರಿ ಶಕ್ತಿ :
ಉಕ್ರೇನ್ / ರಷ್ಯಾ
1,10,0000 ಸೇನಾ ಸಾಮರ್ಥ್ಯ 2,90.0000
98 ಅಟ್ಯಾಕ್ ಏರ್‌ಕ್ರಾಫ್ಟ್ 1511
34 ಅಟ್ಯಾಕ್ ಹೆಲಿಕಾಪ್ಟರ್ 544
2,596 ಟ್ಯಾಂಕ್‌ಗಳು 12,240
12,303 ಶಸ್ತ್ರಸಜ್ಜಿತ ವಾಹನ 30,122
2,040 ಆರ್ಟಿಲರಿ 7,571