Advertisement
ಆರ್ಥಿಕವಾಗಿ ಮಾತ್ರವಲ್ಲದೇ, ರಕ್ಷಣಾತ್ಮಕವಾಗಿಯೂ ರಷ್ಯಾವನ್ನು ಸದೆಬಡಿಯಲು ಒಕ್ಕೂಟ ತಯಾರಿ ನಡೆಸಿದೆ.ಈ ಕುರಿತು ಐರೋಪ್ಯ ಒಕ್ಕೂಟದ ಸದಸ್ಯ ರಾಷ್ಟ್ರಗಳು ಮಾಹಿತಿ ನೀಡಿದ್ದು, ಉಕ್ರೇನ್ ಮೇಲಿನ ದಾಳಿ ಬೆಂಬಲಿಸುವ, ರಷ್ಯಾ ಪರ ಪ್ರಚಾರ ಮಾಡುವ, ರಷ್ಯಾಗೆ ಆರ್ಥಿಕ ಅಥವಾ ರಾಜಕೀಯ ಹಾಗೂ ರಕ್ಷಣಾ ನೆರವು ನೀಡುವ, ಸಶಸ್ತ್ರಗಳನ್ನು ಸರಬರಾಜು ಮಾಡುವ ಎಲ್ಲ ವ್ಯಕ್ತಿಗಳು ಹಾಗೂ ಸಂಸ್ಥೆಗಳ ಮೇಲೆ ಕಠಿಣ ನಿರ್ಬಂಧ ವಿಧಿಸಲು ಒಕ್ಕೂಟ ಸಮ್ಮತಿಸಿದೆ ಎಂದಿದ್ದಾರೆ. ಅಲ್ಲದೇ, ರಷ್ಯಾದ ಬ್ಯಾಂಕ್‌ಗಳ ಜತೆಗಿನ ವಹಿವಾಟು ಸ್ಥಗಿತಗೊಳಿಸುವುದಲ್ಲದೇ, ಐರೋಪ್ಯ ರಾಷ್ಟ್ರಗಳಲ್ಲಿರುವ ರಷ್ಯಾ ಸಂಸ್ಥೆಗಳ ಆಸ್ತಿ ಮುಟ್ಟುಗೋಲಿನಂಥ ನಿರ್ಬಂಧ ವಿಧಿಸಲು ಯೋಜಿಸಿವೆ ಎನ್ನಲಾಗಿದೆ.