ಬೀಜಿಂಗ್: ರಷ್ಯಾ ನಮ್ಮ ಪ್ರಮುಖ ಕಾರ್ಯತಂತ್ರದ ಪಾಲುದಾರ ದೇಶವಾಗಿದ್ದು, ಉಕ್ರೇನ್ ಮೇಲಿನ ರಷ್ಯಾ ಯುದ್ಧವನ್ನು ಖಂಡಿಸುವುದಿಲ್ಲ ಎಂದು ಚೀನಾದ ವಿದೇಶಾಂಗ ಸಚಿವ ಸೋಮವಾರ ತಿಳಿಸಿರುವುದಾಗಿ ವರದಿ ವಿವರಿಸಿದೆ.
ಇದನ್ನೂ ಓದಿ:68ನೇ ಸೀನಿಯರ್ ರಾಷ್ಟ್ರೀಯ ಕಬ್ಬಡ್ಡಿ ಚಾಂಪಿಯನ್ ಶಿಪ್ ಗೆ ಜಿಲ್ಲೆಯ ಇಬ್ಬರು ಬಾಲಕಿಯರು ಆಯ್ಕೆ
ಮಾಸ್ಕೋದೊಂದಿಗಿನ ಸಂಬಂಧ ಕೆಲವೊಂದು ಜಾಗತಿಕವಾದ ಕ್ಲಿಷ್ಟಕರ ದ್ವಿಪಕ್ಷೀಯ ಸಂಬಂಧ ಹೊಂದಿರುವುದಾಗಿ ಚೀನಾದ ವಿದೇಶಾಂಗ ಸಚಿವ ವಾಂಗ್ ಯೀ ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ಗಡಿ ವಿವಾದವು ಎಷ್ಟೇ ಅಪಾಯಕಾರಿಯಾಗಿದ್ದರೂ ಕೂಡಾ, ನಾವು ನಮ್ಮ ಕಾರ್ಯತಂತ್ರದ ಬಗ್ಗೆ ಹೆಚ್ಚಿನ ಗಮನ ಕೊಡುತ್ತೇವೆ. ಚೀನಾ ಮತ್ತು ರಷ್ಯಾದ ಜತೆಗಿನ ಅಭಿವೃದ್ಧಿ ಕಾರ್ಯಗಳ ಬಗ್ಗೆ ರಷ್ಯಾ, ಚೀನಾದ ಸಂಬಂಧ ಹೊಸ ಭಾಷ್ಯ ಬರೆಯಲಿದೆ ಎಂದು ವಾಂಗ್ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದಾರೆ.
ಎಲ್ಲಾ ದೇಶಗಳ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆ ಗೌರವ ಕೊಡಲೇಬೇಕು. ಆದರೆ ನಿರ್ಬಂಧ ಹೇರಿಕೆಯಿಂದ ಹೊಸ ಸಮಸ್ಯೆಯಗಳು ಸೃಷ್ಟಿಯಾಗಲಿದೆ. ಇದರಿಂದ ರಾಜತಾಂತ್ರಿಕತೆ ಮೂಲಕದ ಮಾತುಕತೆಯ ಪ್ರಕ್ರಿಯೆಗೆ ತೊಡಕಾಗಲಿದೆ ಎಂದು ಚೀನಾ ಹೇಳಿದೆ.