Advertisement

ರಷ್ಯಾದ ವಿಕ್ಟರಿ ಪರೇಡ್‌ನ‌ಲ್ಲಿ ಭಾರತೀಯ ಯೋಧರ ಹೆಜ್ಜೆ

09:25 AM Jun 25, 2020 | mahesh |

ಮಾಸ್ಕೋ: 2ನೇ ಮಹಾಯುದ್ಧ ವಿಜಯದ ಹಿನ್ನೆಲೆಯಲ್ಲಿ ರಷ್ಯಾ ಆಯೋಜಿಸಿದ್ದ 75ನೇ ವಾರ್ಷಿಕ ಸಂಭ್ರಮದಲ್ಲಿ ಭಾರತೀಯ ಸಶಸ್ತ್ರ ಪಡೆಗಳು ಪಾಲ್ಗೊಂಡಿದ್ದವು. ಬುಧವಾರ ನಡೆದ ವಿಜಯ ದಿನದ ಪರೇಡ್‌ನ‌ಲ್ಲಿ ಭಾರತೀಯ ಸೇನೆಯ 75 ವೀರಯೋಧರ ಶಿಸ್ತುಬದ್ಧ ಪಥಸಂಚಲನ ಆಕರ್ಷಕವಾಗಿತ್ತು.

Advertisement

ಮಾಸ್ಕೋದ ರೆಡ್‌ ಸ್ಕ್ವೇರ್‌ನಲ್ಲಿ ನಡೆದ ವಿಕ್ಟರಿ ಡೇ ಪರೇಡ್‌ಗೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಸಾಕ್ಷಿಯಾಗಿದ್ದರು. 2ನೇ ವಿಶ್ವಯುದ್ಧದಲ್ಲಿ ರಷ್ಯಾ ಮತ್ತು ಮಿತ್ರ ರಾಷ್ಟ್ರಗಳ ಯೋಧರು ಪ್ರದರ್ಶಿಸಿದ್ದ ವೀರತ್ವ ಮತ್ತು ತ್ಯಾಗವನ್ನು ಈ ವೇಳೆ ಗಣ್ಯರು ಸ್ಮರಿಸಿದರು.

ಪರೇಡ್‌ಗೂ ಮೊದಲು ಸಿಂಗ್‌, “1941- 45ರ ವಿಶ್ವಯುದ್ಧದಲ್ಲಿ 75ನೇ ವಿಜಯೋತ್ಸವದ ನೆನಪಿಗಾಗಿ ವಿಕ್ಟರಿ ಪರೇಡ್‌ ಆಯೋಜಿಸಲಾಗಿದೆ. ಈ ಮೆರವಣಿಗೆಯಲ್ಲಿ ಭಾರತೀಯ ಸಶಸ್ತ್ರ ಪಡೆಯ ಮೂರೂ ದಳಗಳೂ ಭಾಗವಹಿಸಿವೆ. ಇದು ಭಾರತಕ್ಕೆ ಹೆಮ್ಮೆಯ ಸಂಗತಿ’ ಎಂದು ಟ್ವಿಟ್ಟರಿನಲ್ಲಿ ಹರ್ಷ ಹಂಚಿಕೊಂಡಿದ್ದರು. 2ನೇ ವಿಶ್ವಯುದ್ಧದಲ್ಲಿ ಜರ್ಮನಿಯ ಸರ್ವಾ ಧಿಕಾರಿ ಹಿಟ್ಲರ್‌ನನ್ನು ಹಿಮ್ಮೆಟ್ಟಿಸಿದ ನೆನಪಿಗಾಗಿ ರಷ್ಯಾ ಪ್ರತಿವರ್ಷ ಮೇ 9ರಂದು ವಿಕ್ಟರಿ ಪರೇಡ್‌ ಆಯೋಜಿಸುತ್ತದೆ. ಕೊರೊನಾದಿಂದಾಗಿ ಈ ವರ್ಷ ಪರೇಡ್‌ ತಡವಾಗಿ ಆಯೋಜಿಸಲ್ಪಟ್ಟಿದೆ. ರಷ್ಯಾದ 13,000 ಸೈನಿಕರು ಪರೇಡ್‌ನ‌ಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next