ಕೀವ್: ರಷ್ಯಾವು ಶುಕ್ರವಾರ ಉಕ್ರೇನ್ ನ ಮೇಲೆ 70 ಕ್ಕೂ ಹೆಚ್ಚು ಕ್ಷಿಪಣಿಗಳನ್ನು ಹಾರಿಸಿದ್ದು, ಯುದ್ಧದ ಪ್ರಾರಂಭದ ನಂತರದ ಅತಿದೊಡ್ಡ ದಾಳಿಗಳಲ್ಲಿ ಇದು ಒಂದಾಗಿದೆ. ಇದು ಕೈವ್ ಗೆ ರಾಷ್ಟ್ರವ್ಯಾಪಿ ತುರ್ತು ಬ್ಲ್ಯಾಕೌಟ್ ಗಳನ್ನು ಜಾರಿಗೊಳಿಸಲು ಒತ್ತಾಯಿಸಿತು ಎಂದು ಉಕ್ರೇನಿಯನ್ ಅಧಿಕಾರಿಗಳು ತಿಳಿಸಿದ್ದಾರೆ.
ಸೆಂಟ್ರಲ್ ಕ್ರಿವಿ ರಿಹ್ ನಲ್ಲಿ ಅಪಾರ್ಟ್‌ಮೆಂಟ್ ಗೆ ಕ್ಷಿಪಣಿ ಅಪ್ಪಳಿಸಿದ ಪರಿಣಾಮ ಮೂವರು ಸಾವನ್ನಪ್ಪಿದ್ದಾರೆ. ದಕ್ಷಿಣ ಖರ್ಸನ್ ನಲ್ಲಿ ಶೆಲ್ ದಾಳಿಯಲ್ಲಿ ಇನ್ನೊಬ್ಬರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಹೇಳಿದರು. ಆದರೆ ಆಕ್ರಮಿತ ಪೂರ್ವ ಉಕ್ರೇನ್ ನಲ್ಲಿ ರಷ್ಯಾ ಸ್ಥಾಪಿಸಿದ ಅಧಿಕಾರಿಗಳು ಉಕ್ರೇನಿಯನ್ ಶೆಲ್ ದಾಳಿಯಿಂದ 12 ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಿದರು.
ಈ ಬಗ್ಗೆ ಉಕ್ರೇನ್ ಅಧ್ಯಕ್ಷ ವೊಲಿಡಿಮಿರ್ ಝೆಲೆನ್ಸ್ಕಿ ವಿಡಯೋ ಸಂದೇಶದಲ್ಲಿ ಮಾತನಾಡಿದ್ದು, “ರಷ್ಯಾ ಇನ್ನೂ ಹಲವಾರು ಬೃಹತ್ ದಾಳಿಗಳಿಗೆ ಬೇಕಾದಷ್ಟು ಕ್ಷಿಪಣಿಗಳನ್ನು ಹೊಂದಿದೆ. ಹೀಗಾಗಿ ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳು ಉಕ್ರೇನ್ ಗೆ ಹೆಚ್ಚು ಮತ್ತು ಉತ್ತಮವಾದ ವಾಯು ರಕ್ಷಣಾ ವ್ಯವಸ್ಥೆಗಳೊಂದಿಗೆ ಪೂರೈಸಬೇಕು” ಎಂದು ಒತ್ತಾಯಿಸಿದರು.
ಉಕ್ರೇನ್ ಪುಟಿದೇಳುವಷ್ಟು ಪ್ರಬಲವಾಗಿದೆ ಎಂದು ಝೆಲೆನ್ಸ್ಕಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. “ಮಾಸ್ಕೋದ ರಾಕೆಟ್ ಹಾರಿಸುವವರು ಏನೂ ಬೇಕಾದರೂ ಎಣಿಸಲಿ, ಆದರೆ ಅದು ಇನ್ನೂ ಈ ಯುದ್ಧದಲ್ಲಿ ಶಕ್ತಿಯ ಸಮತೋಲನವನ್ನು ಬದಲಾಯಿಸುವುದಿಲ್ಲ” ಎಂದು ಅವರು ಹೇಳಿದರು.
ಅಕ್ಟೋಬರ್ ಆರಂಭದಿಂದ ವಾರಕ್ಕೊಮ್ಮೆ ರಷ್ಯಾ ಉಕ್ರೇನಿಯನ್ ಶಕ್ತಿಯ ಮೂಲಸೌಕರ್ಯದ ಮೇಲೆ ಕ್ಷಿಪಣಿಗಳ ಮಳೆಗರೆದಿದೆ, ಆದರೆ ಶುಕ್ರವಾರದ ದಾಳಿಯು ಇತರ ದಾಳಿಗಿಂತ ಹೆಚ್ಚಿನ ಹಾನಿಯನ್ನುಂಟುಮಾಡಿದೆ