Advertisement

ರಷ್ಯಾ: ಕೋವಿಡ್‌ ಔಷಧ ಸಿದ್ಧ

12:50 PM Jun 12, 2020 | mahesh |

ಮಾಸ್ಕೋ: ರಷ್ಯಾದಲ್ಲಿ ಕೋವಿಡ್‌ ಪೀಡಿತರ ಸಂಖ್ಯೆ 5 ಲಕ್ಷಕ್ಕೇರುತ್ತಿದ್ದಂತೆಯೇ, ಹೊಸ ಔಷಧವೊಂದನ್ನು ಸೋಂಕು ಪೀಡಿತರಿಗೆ ನೀಡಲು ಅನುಮತಿಸಲಾಗಿದೆ. ಇದೊಂದು ಹೊಸ ಮಾದರಿಯ ಆ್ಯಂಟಿ ವೈರಸ್‌ ಔಷಧವಾಗಿದ್ದು, ಅವಿಫ‌ವಿರ್‌ ಎಂದು ಹೆಸರಿಡಲಾಗಿದೆ. ದೇಶದ ವಿವಿಧ ಕ್ಲಿನಿಕ್‌ಗಳು, ಆಸ್ಪತ್ರೆಗಳಲ್ಲಿ ಇವುಗಳ ಬಳಕೆಗೆ ಅನುಮತಿಸಲಾಗಿದೆ. ರಷ್ಯಾದ ಆರ್‌ಡಿಐಎಫ್ ಮತ್ತು ಶೇ.50ರಷ್ಟು ಷೇರುಗಳೊಂದಿಗೆ ಔಷಧ ತಯಾರಕ ಕಂಪೆನಿ ಚೆಮ್‌ರಾರ್‌ ಔಷಧ ಸಂಶೋಧನೆಗೆ ಹೂಡಿಕೆ ಮಾಡಿದ್ದವು. ಸದ್ಯ ಔಷಧಧ ಎಲ್ಲ ಪ್ರಾಯೋಗಿಕ ಹಂತಗಳು, ಮಾನವನ ಮೇಲೆ ಪ್ರಯೋಗವು ಅತಿ ಕಡಿಮೆ ಅವಧಿಯಲ್ಲಿ ನಡೆದಿದ್ದು ಔಷಧವನ್ನು ನೀಡಲು ಅಲ್ಲಿನ ಆರೋಗ್ಯ ಇಲಾಖೆ ಸಮ್ಮತಿಯನ್ನು ನೀಡಿದೆ. ಆದಾಗ್ಯೂ ಇನ್ನೂ ಹಲವು ರಾಷ್ಟ್ರಗಳಲ್ಲಿ ಇದರ ಪ್ರಯೋಗ ನಡಿಯುತ್ತಿದೆ ಎಂದು ಕಂಪೆನಿ ಹೇಳಿಕೊಂಡಿದೆ.

Advertisement

ಸದ್ಯ ಕೋವಿಡ್‌ಗೆ ಯಾವುದೇ ಔಷಧಗಳಿಲ್ಲ. ಎಲ್ಲ ಔಷಧಗಳು ಪ್ರಾಯೋಗಿಕ ಹಂತದಲ್ಲಿವೆ. ಇನ್ನು ಕೆಲವು ಲ್ಯಾಬ್‌ ಟೆಸ್ಟಿಂಗ್‌ ಹಂತದಲ್ಲಿವೆ. ಒಂದು ತಿಂಗಳಲ್ಲಿ ಸುಮಾರು 66 ಸಾವಿರ ಮಂದಿಗೆ ಚಿಕಿತ್ಸೆ ನೀಡುವಷ್ಟು ಸದ್ಯ ಔಷಧವನ್ನು ಕಂಪೆನಿ ತಯಾರಿಸಿಕೊಂಡಿದೆ. ಈ ಔಷಧಕ್ಕೆ ಸುಮಾರು 10 ದೇಶಗಳು ಬೇಡಿಕೆ ಇಟ್ಟಿವೆ ಎಂದು ಕಂಪೆನಿ ಹೇಳಿಕೊಂಡಿದೆ. ಸದ್ಯ ರಷ್ಯಾದ ಎಲ್ಲ ಭಾಗಗಳಿಗೂ ಔಷಧ ವನ್ನು ತಲುಪಿಸಬೇಕಿದೆ. ಇದಕ್ಕಾಗಿ ಮಾತುಕತೆ ನಡೆಯುತ್ತಿದೆ. ಗುರುವಾರ ಮೊದಲ ಹಂತದಲ್ಲಿ ಔಷಧ ರವಾನೆಯಾಗಲಿದ್ದು 80 ಪ್ರಾಂತ್ಯಗಳಿಗೆ ಔಷಧ ಸಿಗಲಿದೆ. 5 ಲಕ್ಷ ಕೋವಿಡ್‌ ಪೀಡಿತರೊಂದಿಗೆ ರಷ್ಯಾ ಜಗತ್ತಿನಲ್ಲೇ ಮೂರನೇ ಸ್ಥಾನದಲ್ಲಿದೆ. ಮೊದಲ ಎರಡು ಸ್ಥಾನಗಳನ್ನು ಅಮೆರಿಕ ಮತ್ತು ಬ್ರಜಿಲ್‌ ಹೊಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next