Advertisement
ಕರಿ ಮಸೂತಿ ನೀರಾವರಿಯಿಂದ ಹೊರಗುಳಿದ ತಾಲೂಕಿನ ಒಣ ಬೇಸಾಯದ ಜಮೀನುಗಳಲ್ಲಿ ತೊಗರಿ ಬಿತ್ತನೆಗೆ ವೇಳೆಯಲ್ಲಿ ಮಳೆ ಕೊರತೆಯಿಂದ ಕೆಲಭಾಗ ಸರಿಯಾಗಿ ನಾಟಿ ಆಗಿಲ್ಲ. ಬಹುತೇಕ ಜಮೀನುಗಳಿಗೆ ನೀರಿನ ಕೊರತೆಯಾಗಿ ಹಾನಿಗೊಳಪಟ್ಟಿತು. ಇನ್ನೂಳಿದ ಕೆಲ ತೊಗರಿ ಬೆಳೆ ಕಾಳು ತುಂಬುವ ಸಮಯದಲ್ಲಿಯೇ ಅಕಾಲಿಕ ತುಂತುರು ಮಳೆ ಆಪತ್ತು ತಂದು ಕೋಟ್ಯಾಂತರ ಫಸಲು ಹಾಳು ಮಾಡಿತು. ಕಾರಣ ಒಣ ಬೇಸಾಯಗಾರರ ಬದುಕು ದುಸ್ತರವಾಗಿದೆ.
Related Articles
Advertisement
ಅಲ್ಪಸ್ವಲ್ಪ ಜಮೀನಿರುವ ರೈತರು ಬೆಳೆ ತೊಗರಿಯನ್ನೇ ಅವಲಂಬಿಸಿದ್ದು, ಬೆಳೆ ಹಾಳಾಗಿ ಅವರ ಬದುಕು ಕಷ್ಟಕರವಾಗಿದೆ. ಕಾರಣ ಸರಕಾರ ಯೋಗ್ಯ ಪರಿಹಾರ ಕೊಡಬೇಕು ಎಂದು ಐಗಳಿ ಪ್ರಗತಿಪರ ರೈತ ಶಂಕರಗೌಡ ಪಾಟೀಲ ಒತ್ತಾಯಿಸಿದ್ದಾರೆ.
ತೆಲಸಂಗ ಹೊಬಳಿಯಲ್ಲಿ 8000 ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬೆಳೆಯಿದ್ದು, ಶೇ.80ರಷ್ಟು ನೀರಿನ ಕೊರತೆಯಿಂದ ಹಾಳಾಗಿದೆ. ಇದರ ಸಮಗ್ರ ವರದಿಯನ್ನು ಸರಕಾರಕ್ಕೆ ಸಲ್ಲಿಸಲಾಗಿದೆ ಎಂದು ತೆಲಸಂಗ ಹೋಬಳಿ ಕೃಷಿ ಅಧಿಕಾರಿ ಯಂಕಪ್ಪ ಉಪ್ಪಾರ ತಿಳಿಸಿದ್ದಾರೆ.