Advertisement

ಹುಣಸೂರು:  ಕೋವಿಡ್ ಲಸಿಕೆಗಾಗಿ ನೂಕು ನುಗ್ಗಲು.

11:42 AM Jul 14, 2021 | Team Udayavani |

ಹುಣಸೂರು:  ಹುಣಸೂರು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಲಸಿಕೆ ಪಡೆಯಲು ಜನರು ಯಾವುದೇ ಕೋವಿಡ್ ಎಸ್ ಓಪಿ ನಿಯಮ ಪಾಲಿಸದೆ ಲಸಿಕೆ ಖಾಲಿಯಾಗುವ ಮುನ್ನ ಪಡೆದುಕೊಳ್ಳಲು ನಿಂತಿದ್ದರಿಂದ ನೂಕು ನುಗ್ಗಲು ಉಂಟಾಗಿತ್ತು.

Advertisement

ಬೆಳಗ್ಗೆ 7 ಗಂಟೆಯಿಂದಲೇ ಆಸ್ಪತ್ರೆ ಹಿಂಬಾಗದ ಕಾರಿಡಾರ್ ನಲ್ಲಿ 200 ಹೆಚ್ಚು ಮಂದಿ ನಿಂತಿದ್ದರು. 10 ಗಂಟೆ ವೇಳೆಗೆ ಲಸಿಕೆ ನೀಡಲು ಆರೋಗ್ಯ ಇಲಾಖೆ ಸಿಬ್ಬಂದಿಗಳು ಬಂದರಾದರೂ ಕೇವಲ 120 ಮಂದಿಗೆ ಮಾತ್ರ ಲಸಿಕೆ ನೀಡಲಾಗುವುದೆಂದು ಪ್ರಕಟಿಸಿದ್ದರಿಂದಾಗಿ ಲಸಿಕೆ ಪಡೆಯಲು ದೂರದ ಊರುಗಳಿಂದ ಬಂದಿದ್ದ ಜನರು ಆತಂಕಗೊಂಡಿದ್ದರಿಂದ ಕೆಲ ಕಾಲ ನೂಕು ನುಗ್ಗಲು ಉಂಟಾಗಿತ್ತು.

ಇದನ್ನೂ ಓದಿ:  ಕಲಬುರಗಿ: ಆಸ್ಪತ್ರೆಯಿಂದ ವಿಚಾರಣಾಧೀನ ಕೈದಿ ಪರಾರಿ

ಮೊದಲು ಆಧಾರ್ ಕಾರ್ಡ್ ನೊಂದಣಿ ಮಾಡಿಸಿದ್ದ 120 ಮಂದಿಗೆ ಮಾತ್ರ ಲಸಿಕೆ ನೀಡುವುದಾಗಿ ಆಸ್ಪತ್ರೆ ವೈದ್ಯ ಡಾ.ಉಮೇಶ್  ತಿಳಿಸಿದ್ದರಿಂದಾಗಿ  ಬೇಸರಿಸುತ್ತಲೇ ವಾಪಾಸ್ ತೆರಳಿದರು

Advertisement

Udayavani is now on Telegram. Click here to join our channel and stay updated with the latest news.

Next