Advertisement

ಮೊಬೈಲ್‌ ಮೋಹ ಜಾಲದಲ್ಲಿ ಗ್ರಾಮೀಣ ಯುವಶಕ್ತಿ

11:12 AM Jun 12, 2022 | Team Udayavani |

ಹುಬ್ಬಳ್ಳಿ: ಜಾಗತೀಕರಣ, ಹೊಸ ಹೊಸ ತಂತ್ರಜ್ಞಾನ ಬೆಳವಣಿಗೆಯಿಂದ ನಗರಗಳಲ್ಲಿಯ ಭೂಮಿ ಹಾಳಾಗಿ ಹೋಗುತ್ತಿದೆ. ಹಳ್ಳಿಗಳ ಯುವ ಶಕ್ತಿ ಮೊಬೈಲ್‌ ಜಾಲಕ್ಕೆ ಸಿಲುಕಿ ವಿಲಾಸಿ ಜೀವನ ಬಯಸಿ ನಗರಗಳತ್ತ ಮುಖ ಮಾಡಿದ್ದರಿಂದ ಹಳ್ಳಿಗಳಲ್ಲಿಯ ಕೃಷಿ ಚಟುವಟಿಕೆಗಳು ನಿಂತು ಹೋಗಿವೆ ಎಂದು ಖ್ಯಾತ ಪರಿಸರವಾದಿ, ಇಕೋ ವಾಚ್‌ ಎನ್‌ಜಿಒ ಸಂಸ್ಥಾಪಕ, ನಟ ಸುರೇಶ ಹೆಬ್ಳೀಕರ ಹೇಳಿದರು.

Advertisement

ಗೋಕುಲದ ಕೆಎಲ್‌ಇ ಸಂಸ್ಥೆಯ ಕೆಎಲ್‌ಇ ತಾಂತ್ರಿಕ ಮಹಾವಿದ್ಯಾಲಯದ ಎನ್ನೆಸ್ಸೆಸ್‌ ಘಟಕದಿಂದ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜಗತ್ತಿನ ಜನಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಾ ಸಾಗಿದೆ. 800 ಕೋಟಿ ಜನಸಂಖ್ಯೆಯಾಗುತ್ತಿದೆ. ಇರುವು ದೊಂದೇ ಭೂಮಿ. ಭೂಮಿ ಸಂರಕ್ಷಣೆ ಕಡೆ ಗಮನ ನೀಡುತ್ತಿಲ್ಲ. ಭೂಮಿಯನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡುತ್ತಿಲ್ಲ. ಕೆರೆ, ನದಿಗಳು ಮಾಲಿನ್ಯಗೊಂಡಿವೆ. ನಾವು ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಭೂಮಿಯಲ್ಲಿ ಅನೇಕ ಅನಾಹುತಗಳು ನಡೆಯಲಿವೆ ಎಂದರು.

ಬೆಂಗಳೂರಿನಂತಹ ಮಹಾನಗರದ ಯುವಕರಿಗೆ ಪರಿಸರ ಪ್ರಜ್ಞೆ, ಮಹತ್ವ, ಅರಿವು, ಕಾಳಜಿ ಇಲ್ಲದಂತಾಗಿದೆ. ಅವರು ಬರೇ ಶ್ರೀಮಂತರಾಗುವುದಲ್ಲಿಯೇ ಜೀವನ ಕಳೆಯುತ್ತಿದ್ದಾರೆ. ಯುವಕರಿಗೆ ಪರಿಸರದ ಬಗ್ಗೆ ಅರಿವು ಮೂಡಿಸುವ ಕೆಲಸ ಆಗಬೇಕಾಗಿದೆ. ಹೆಚ್ಚು ಸಸಿಗಳನ್ನು ನೆಡಬೇಕು. ಭೂಮಿಯ ಮೇಲೆ ಎಲ್ಲವೂ ಕ್ರಮಬದ್ಧವಾಗಿ ಇರಬೇಕು. ಗಿಡಗಳು, ಕೆರೆಗಳು, ಹೊಂಡಗಳು, ಹುಲ್ಲುಗಾವಲು, ಗುಡ್ಡಗಳು, ಅರಣ್ಯ ಪ್ರದೇಶ ಸೇರಿದಂತೆ ಎಲ್ಲವೂ ಇರಬೇಕು. ಅಂದಾಗ ಭೂಮಿ ಸಮತೋಲನದಿಂದ ಕೂಡಿರಲು ಸಾಧ್ಯ. ಇವೆಲ್ಲವು ಒಂದಕ್ಕೊಂದು ಪೂರಕವಾಗಿ ಕೆಲಸ ಮಾಡುತ್ತವೆ ಎಂದು ಹೇಳಿದರು.

ಉತ್ತರ ಕರ್ನಾಟಕ ಅದರಲ್ಲೂ ಧಾರವಾಡ ಜಿಲ್ಲೆ ನಾಲ್ಕು ಪರಿಸರ ವ್ಯವಸ್ಥೆ ಅಥವಾ ಸಂಯೋಜನೆಯಿಂದ ಕೂಡಿದೆ. ಇಂತಹ ಪರಿಸರ ವ್ಯವಸ್ಥೆ ಜಗತ್ತಿನಲ್ಲಿಯೇ ಇಲ್ಲ. ಜೀವವೈವಿಧ್ಯತೆಯಿಂದ ಕೂಡಿದೆ. ಬೆಳೆಯುವ ಹಣ್ಣು, ಹಂಪಲಗಳು ವಿಶೇಷ ರುಚಿಯನ್ನು ಹೊಂದಿವೆ. ಇಂತಹ ಭೂಪ್ರದೇಶವನ್ನು ಸಂರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ನಗರೀಕರಣದಿಂದ 400 ಕೆರೆಗಳು ನಾಶವಾಗಿವೆ. ಅರಣ್ಯ ಪ್ರದೇಶವನ್ನು ನಾಶ ಮಾಡಲು ಅವಕಾಶ ನೀಡಬಾರದು. ಮನುಷ್ಯನ ಅತಿಯಾದ ಬೇಡಿಕೆಗಳು ಭೂಮಿಯನ್ನು ನಾಶ ಮಾಡುತ್ತಿವೆ. ಭೂಮಿ ಸಮತೋಲನ ಕಳೆದುಕೊಳ್ಳುತ್ತಿದೆ. ಆಹಾರ ಹಾಗೂ ಕುಡಿಯುವ ನೀರಿಗಾಗಿ ದೇಶದಲ್ಲಿ ಭಯಾನಕ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಸರಕಾರ, ಜನರು ಎಲ್ಲರೂ ಸೇರಿ ಉತ್ತಮ ಪರಿಸರ ನಿರ್ಮಾಣ ಮಾಡಿ ಭೂಮಿ ಹಾಗೂ ಜಲಮೂಲಗಳನ್ನು ಸಂರಕ್ಷಣೆ ಮಾಡುವ ಕಾರ್ಯಯೋಜನೆ ತಯಾರಿಸಬೇಕೆಂದರು.

Advertisement

ಕೆಎಲ್‌ಇ ಐಟಿ ಪ್ರಾಚಾರ್ಯ ಡಾಣ ಬಸವರಾಜ ಅನಾಮಿ ಅಧ್ಯಕ್ಷತೆ ವಹಿಸಿದ್ದರು. ಪೋಸ್ಟರ್‌ ಪ್ರಸೆಂಟೇಶನ್‌ನಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ಡಾಣ ರಾಜಶೇಖರ ಆರ್‌.ಎಸ್‌., ಇನ್‌ಸ್ಟಿಟ್ಯೂಟ್‌ ಆಫ್‌ ಎಂಜಿನಿಯರ್ ಚೇರ್ಮೇನ್‌ ವಿಜಯ ತೋಟಗೇರ, ಕಾರ್ಯದರ್ಶಿ ಶ್ರೀಹರಿ ಕೆ.ಎಚ್‌., ಡಾಣ ರಮೇಶ ಬುರಬುರೆ. ಗ್ರಂಥಪಾಲಕ ಸುರೇಶ ಹೊರಕೇರಿ, ಸಲೇಹಾ, ಮೇಘನಾ, ಪ್ರೊಣ ವಿನೋದಾ, ಪ್ರೊಣ ಮಹಾಂತೇಶ ಸಜ್ಜನ, ಪ್ರೊಣ ವಿ.ಎಸ್‌. ಮಾಡೋಳ್ಳಿ, ಪ್ರೊಣ ಯರೀಸ್ವಾಮಿ ಇದ್ದರು. ಕೆಎಲ್‌ಇ ಐಟಿ ಡೀನ್‌ ಡಾಣ ಶರದ ಜೋಶಿ ಪ್ರಾಸ್ತಾವಿಕ ಮಾತನಾಡಿದ ರು. ಭಾಗ್ಯಾ ಪ್ರಾರ್ಥಿಸಿದರು. ಪ್ರೊಣ ಮನು ಟಿ.ಎಂ. ಸ್ವಾಗತಿಸಿದರು. ಎನ್ನೆಸ್ಸೆಸ್‌ ಅಧಿಕಾರಿ ಪ್ರೊಣ ಸುಜಯ ಕೆ. ವಂದಿಸಿದರು.

ಹಳ್ಳಿಗಳಲ್ಲಿ ಯುವಕರು ಕೃಷಿ ಕಾರ್ಯಗಳಲ್ಲಿ ಆಸಕ್ತಿ ತೋರುತ್ತಿಲ್ಲ. ಭೂಮಿಯಲ್ಲಿ ಕೆಲಸ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಕೃಷಿಯಲ್ಲಿ ಸಾಕಷ್ಟು ಉದ್ಯೋಗ ಅವಕಾಶಗಳನ್ನು ಸೃಷ್ಟಿಸಬಹುದು. ನಗರೀಕರಣದ ಹೆಸರಿನಲ್ಲಿ ಕೆರೆ, ಬಾವಿಗಳನ್ನು ಮುಚ್ಚಿ ಕಟ್ಟಡಗಳನ್ನು ನಿರ್ಮಿಸುತ್ತಿರುವುದು ಒಂದು ಕಡೆಯಾದರೆ, ಮತ್ತೂಂದು ಕಡೆ ಅರಣ್ಯ ನಾಶ ನಿರಂತರ ನಡೆಯುತ್ತಿರುವುದರಿಂದ ನೈಸರ್ಗಿಕ ಜಲಮೂಲಗಳು ಬತ್ತಿ ಹೋಗುತ್ತಿವೆ.  –ಸುರೇಶ ಹೆಬ್ಳೀಕರ, ಪರಿಸರವಾದಿ

Advertisement

Udayavani is now on Telegram. Click here to join our channel and stay updated with the latest news.

Next