Advertisement

ಸ್ವಪ್ರಯತ್ನದಿಂದ ಕಲೆ ಸಿದ್ಧಿಸಿದ ಗ್ರಾಮೀಣ ಯುವಕ

10:15 PM Oct 15, 2020 | mahesh |

ಅಜೆಕಾರು: ಗ್ರಾಮೀಣ ದಲಿತ ಯುವಕನೋರ್ವ ತನ್ನ ಸ್ವಂತ ಪರಿಶ್ರಮದಿಂದ ಕಲೆಯನ್ನು ಸಿದ್ಧಿಸಿ ಕೊಂಡು ಅಪೂರ್ವ ಸಾಧನೆ ಮಾಡಿದ್ದಾನೆ.

Advertisement

ಮರ್ಣೆ ಗ್ರಾಮದ ಅಜೆಕಾರು ದಾಸಗದ್ದೆ ನಿವಾಸಿ ವಿಜಯ ಎಸ್‌. ಪರವ ಎಂಬ ದಲಿತ ಸಮುದಾಯದ ಯುವಕ ತನ್ನ ಕೈಚಳಕದಿಂದ ಶಿಲ್ಪಕಲೆ, ಗೋಡೆಬರಹ ಹಾಗೂ ಕೊರೆಯಚ್ಚು ಕಲೆಯನ್ನು ಸಿದ್ಧಿಸಿಕೊಂಡು ಸಾಧನೆ ಮಾಡಿದ್ದಾರೆ.

ಆರ್ಥಿಕವಾಗಿ ತೀರಾ ಹಿಂದುಳಿದಿದ್ದ ವಿದ್ಯಾರ್ಥಿಯಾಗಿದ್ದ ವಿಜಯ ಪ್ರತಿಭಾವಂತನಾಗಿದ್ದರು. ತನ್ನ ಶಾಲಾ ದಿನಗಳಲ್ಲಿ ಗೋಡೆಬರಹ, ಕಲಾಕೃತಿ ನಿರ್ಮಾಣದ ಬಗ್ಗೆ ಅತೀವ ಆಸಕ್ತಿ ಹೊಂದಿದ್ದರು. ಇವರು ತನ್ನ ಬಿಡುವಿನಲ್ಲಿ ಸ್ವಪ್ರಯತ್ನದಿಂದ ಅಭ್ಯಾಸ ಮಾಡಿ ಕಲಾಮಾತೆಯನ್ನು ಒಲಿಸಿಕೊಂಡಿದ್ದಾರೆ.

ವಿಜಯ ಅವರು ಈಗಾಗಲೇ 1,500ಕ್ಕೂ ಅಧಿಕ ಗೋಡೆ ಚಿತ್ರಗಳನ್ನು ಬರೆದಿದ್ದು, ಸುಮಾರು 150ಕ್ಕೂ ಅಧಿಕ ಶಿಲ್ಪ ಕಲಾಕೃತಿಗಳನ್ನು ನಿರ್ಮಿಸಿ ಅದನ್ನು ಹಲವು ದೇವಸ್ಥಾನ ಹಾಗೂ ಮ್ಯೂಸಿಯಂಗಳಿಗೆ ಕೊಟ್ಟಿದ್ದಾರೆ.

ಕಾರ್ಕಳ ವೆಂಕಟರಮಣ ದೇವಸ್ಥಾನದ ಗೋಡೆಯಲ್ಲಿ ಆಕರ್ಷಕ ವಿನ್ಯಾಸದಲ್ಲಿ ವರ್ಲಿ ಆರ್ಟ್‌ ಬಿಡಿಸಿದ್ದಾರೆ. ಜಂಗಮೇಶ್ವರ ಮಠ ಉಡುಪಿಯ ಮ್ಯೂಸಿಯಂಗೆ ಕಲಾಕೃತಿಗಳನ್ನು ನೀಡಿದ್ದಾರೆ. ಇದಲ್ಲದೆ ಗೋಡೆಯ ಮೇಲೆ ಪ್ರಕೃತಿ, ಮರಗಿಡಗಳ ಉಬ್ಬುಶಿಲ್ಪಗಳನ್ನು ಅಚ್ಚುಕಟ್ಟಾಗಿ ಚಿತ್ರಿಸುತ್ತಾರೆ. ಇತ್ತೀಚೆಗೆ ಇವರು ಕೊರೆಯಚ್ಚು (ಸ್ಟೆನ್ಸಿಲ್‌) ಕಲೆಯ ಮೂಲಕ ಸಾಕಷ್ಟು ಚಿತ್ರಗಳನ್ನು ಬಿಡಿಸಿದ್ದಾರೆ. ತನ್ನಲ್ಲಿ ಅಡಗಿರುವ ಕಲೆಯನ್ನು ತನ್ನ ಜೀವನಾಧಾರಕ್ಕಾಗಿ ಬಳಸಿಕೊಂಡಿ ರುವ ಅವರ ಕಲೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯವಾಗಬೇಕಿದೆ.

Advertisement

ಪ್ರೋತ್ಸಾಹ ಅಗತ್ಯ
ಗುರುವಿನ ಬಲವಿಲ್ಲದೆ ಸಾಧನೆಗೈದ ಈ ಗ್ರಾಮೀಣ ಯುವಕನಿಗೆ ಸರಕಾರ ಹಾಗೂ ಸಂಘ ಸಂಸ್ಥೆಗಳು ಸೂಕ್ತ ರೀತಿಯಲ್ಲಿ ಪ್ರೋತ್ಸಾಹ ನೀಡಿದಲ್ಲಿ ಕಲೆಗೆ ನ್ಯಾಯ ಒದಗಿಸಿದಂತಾಗುತ್ತದೆ.
-ಕೃಷ್ಣ ಎಂ. ನಾಯ್ಕ, ಕಾಡುಹೊಳೆ

Advertisement

Udayavani is now on Telegram. Click here to join our channel and stay updated with the latest news.

Next