ಗಜೇಂದ್ರಗಡ: ಗ್ರಾಮೀಣ ಪ್ರತಿಭೆಗಳು ಸಾಧನೆಯ ಹಾದಿಯಲ್ಲಿ ಸಾಗಿದರೆ ಅವಕಾಶಗಳು ತಾನಾಗಿಯೇ ಒದಗಿ ಬರುತ್ತವೆ ಎನ್ನುವುದಕ್ಕೆ ಮೆಹಬೂಬಿ ಶೇಟಾಸಂಧಿ ಸಾಕ್ಷಿ. ಈಕೆ ಅಟ್ಯಾಪಟ್ಯಾ ಕ್ರೀಡೆಯಲ್ಲಿ ಭಾರತ ತಂಡ ಪ್ರತಿನಿಧಿಸುವ ಮೂಲಕ ಅಂತಾರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾಳೆ.
ಈ ಪ್ರತಿಭೆ ಸದ್ಯ ನರೇಗಲ್ಲನ ಅನ್ನದಾನೇಶ್ವರ ಪಪೂ ಮಹಾವಿದ್ಯಾಲಯದಲ್ಲಿ ದ್ವಿತೀಯ ವರ್ಷದ ವಿಜ್ಞಾನ ವಿಭಾಗದಲ್ಲಿ ಅಧ್ಯಯನ ಮಾಡಿ, ನೀಟ್ ಪರೀಕ್ಷೆಗೆಂದು ಲಾಂಗ್ ಟರ್ಮ್ ತರಬೇತಿ ಪಡೆಯುತ್ತಿದ್ದಾಳೆ. ಈ ಬಾರಿ ನೇಪಾಳದ ಕಟ್ಮಂಡುವಿನಲ್ಲಿ ಅ. 18ರಿಂದ 20ರ ವರೆಗೆ ನಡೆಯಲಿರುವ 7ನೇ ಸೌತ್ ಏಷ್ಯಾ ಅಟ್ಯಾ-ಪಟ್ಯಾ ಚಾಂಪಿಯನ್‌ಶಿಪ್‌ನಲ್ಲಿ ಅವಕಾಶ ದೊರತಿದೆ.
ಕರ್ನಾಟಕದಿಂದ ನಾಲ್ಕು ಕ್ರೀಡಾಪಟುಗಳು ಆಯ್ಕೆ: ಈ ಬಾರಿ ನಡೆಯಲಿರುವ 7ನೇ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕದಿಂದ ಒಟ್ಟು ನಾಲ್ಕು ಜನ ಕ್ರೀಡಾಪಟುಗಳು ಆಯ್ಕೆಯಾಗಿದ್ದು, ಅದರಲ್ಲಿ ಇಬ್ಬರು ಬಾಲಕರು ಹಾಗೂ ಇಬ್ಬರು ಬಾಲಕಿಯರು ಆಯ್ಕೆಯಾಗಿದ್ದಾರೆ. ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನರೇಗಲ್ಲಿನಿಂದ ಮೆಹಬೂಬಿ ಸೇಟಸಂಧಿ ಹಾಗೂ ನರಗುಂದ ತಾಲೂಕಿನ ವಾಸನದಿಂದ ಹರ್ಷಾ ನಡುಮನಿ ಆಯ್ಕೆಯಾಗಿದ್ದಾರೆ.
11 ಬಾರಿ ರಾಷ್ಟ್ರೀಯ ಕ್ರೀಡೆಯಲ್ಲಿ ಭಾಗಿ: ಮೆಹಬೂಬಿ ಚಿಕ್ಕಂದಿನಿಂದಲೂ ಸತತ ಕ್ರೀಡೆಯಲ್ಲಿ ತಲ್ಲಿನಳಾಗುವ ಮೂಲಕ ಸತತವಾಗಿ ಸೀನಿಯರ್, ಜೂನಿಯರ್ ಹಾಗೂ ಸಬ್ ಜೂನಿಯರ್ ವಿಭಾಗಗಳಲ್ಲಿ ಒಟ್ಟು 11 ಬಾರಿ ವಿವಿಧ ರಾಜ್ಯಗಳಲ್ಲಿ ಜರುಗಿದ ರಾಷ್ಟ್ರೀಯ ಅಟ್ಯಾಪಟ್ಯಾ ಚಾಂಪಿಯನ್ ಶಿಪ್‌ನಲ್ಲಿ ಭಾಗವಹಿಸುವ ಮೂಲಕ ತನ್ನದೇಯಾದ ಪ್ರತಿಭೆ ಪ್ರದರ್ಶಿಸಿ ಪ್ರಶಸ್ತಿ ತನ್ನದಾಗಿಸಿಕೊಂಡಿದ್ದಾಳೆ.
ಮೆಹಬೂಬಿಗೆ ಚಿಕ್ಕಂದಿನಿಂದಲೂ ತರಬೇತುದಾರ ರಫೀಕ್ ರೇವಡಿಗಾರ ನಿರಂತರ ಐದಾರು ವರ್ಷಗಳಿಂದ ತರಬೇತಿ ನೀಡುತ್ತಾ ಪ್ರತಿವರ್ಷ ಚಾಂಪಿಯನ್ ಶಿಪ್ ವೇಳೆಯಲ್ಲಿ ಕ್ಯಾಂಪ್ ಆಯೋಜನೆ ಮಾಡುವ ಮೂಲಕ ರಾಜ್ಯದ ವಿವಿಧ ಮೂಲೆಯಲ್ಲಿರುವ ಅಟ್ಯಾಪಟ್ಯಾ ಕ್ರೀಡಾಪಟುಗಳಿಗೆ ತರಬೇತುಗೊಳಿಸಿ ರಾಜ್ಯದಿಂದ ಸಾಗರೋಪಾದಿಯಲ್ಲಿ ಮಕ್ಕಳನ್ನು ರಾಷ್ಟ್ರೀಯ ಹಾಗೂ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸುಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಇದರಲ್ಲಿ ನರೇಗಲ್ಲಿನಿಂದ ಇವರಲ್ಲಿಯೇ ತರಬೇತಿ ಪಡೆದು ಈಗಾಗಲೇ ಐದು ಮಕ್ಕಳು ಸೌತ್ ಏಷ್ಯಾ ಚಾಂಪಿಯನ್ ಶಿಪ್‌ನಲ್ಲಿ ಭಾರತ ತಂಡ ಭಾಗವಹಿಸಿ ವಿಜಯಶಾಲಿಯಾಗುವಂತೆ ಮಾಡಿದ್ದು, ಈಗ ಮೆಹಬೂಬಿ ಸೇಟಸಂದಿ ಅದೇ ಹಾದಿಯಲ್ಲಿ ಆರನೆಯವಳಾಗಿ ಸೌತ್ ಏಷ್ಯಾ ಚಾಂಪಿಯನ್ ಶಿಪ್‌ಗೆ ಆಯ್ಕೆಯಾಗಿದ್ದಾಳೆ.
ಮೆಹಬೂಬಿ ಮನದಾಳದ ಮಾತು
ತನಗೆ ಚಿಕ್ಕಂದಿನಿಂದಲೂ ಕ್ರೀಡೆಯಲ್ಲಿ ಹೆಚ್ಚು ಆಸಕ್ತಿ. ತಾನು ಏಳನೇ ತರಗತಿಯಲ್ಲಿರುವಾಗ ತನ್ನ ಕ್ರೀಡಾ ಪ್ರತಿಭೆ ಗುರುತಿಸಿದ ರμಕ್ ರೇವಡಿಗಾರ ಗುರುಗಳು ನನಗೆ ಅಟ್ಯಾಪಟ್ಯಾ ಕ್ರೀಡೆ ಕುರಿತು ಮಾರ್ಗದರ್ಶನ ಮಾಡಿ, 11 ಬಾರಿ ರಾಷ್ಟ್ರೀಯ ಕ್ರೀಡೆಯಲ್ಲಿ ಭಾಗವಹಿಸಲು ಪ್ರೇರೇಪಿಸಿದ್ದಾರೆ. ಈಗ ಸೌತ್ ಏಷ್ಯಾ ಕ್ರೀಡೆಗೆ ಆಯ್ಕೆಯಾದದ್ದು ತನ್ನ ಮನೆಯವರಿಗಿಂತಲೂ ಅವರಿಗೆ ಹೆಚ್ಚಿನ ಸಂತಸ ತಂದಿದೆ ಎನ್ನುತ್ತಾರೆ ಮೆಹಬೂಬಿ.
ನಮ್ಮ ಸಂಸ್ಥೆಯ ಹಳೆಯ ವಿದ್ಯಾರ್ಥಿ ಭಾರತ ತಂಡಕ್ಕೆ ಆಯ್ಕೆಯಾಗಿದ್ದು ಸಂತಸ ತಂದಿದೆ. ಈ ಕ್ರೀಡಾಪಟು ನೇಪಾಳದ ಕಠ್ಮಂಡುವಿನಲ್ಲಿ ನಡೆಯಲಿರುವ ಅಟ್ಯಾಪಟ್ಯಾ ಚಾಂಪಿಯನ್ ಶಿಪ್‌ನಲ್ಲಿ ಉತ್ತಮವಾಗಿ ಆಟವಾಡಿ ಭಾರತಕ್ಕೆ ಕೀರ್ತಿ ತರುವಂತಾಗಲಿ. zಶ್ರೀ ಮುಪ್ಪಿನ ಬಸವಲಿಂಗ ಸ್ವಾಮೀಜಿ ಹಾಲಕೆರೆ ಅನ್ನದಾನೇಶ್ವರ ಸಂಸ್ಥಾನ ಮಠ
ಗ್ರಾಮೀಣ ಪ್ರತಿಭೆಗಳನ್ನು ವಿಶ್ವ ಮಟ್ಟಕ್ಕೆ ಕೊಂಡೊಯ್ಯುವ ಅಭಿಲಾಷೆಯಿಂದಲೇ ಕಳೆದ ಹದಿನೈದು ವರ್ಷಗಳಿಂದ ಅಟ್ಯಾಪಟ್ಯಾ ತರಬೇತಿ ನೀಡುತ್ತಿದ್ದೇನೆ. ಮೆಹಬೂಬಿ ಇದೀಗ ಏಷ್ಯಾ ಟ್ರೋಫಿ ಗೆಲ್ಲುವುದೇ ನನ್ನ ಗುರಿಯಾಗಿದೆ. zಮಹಮ್ಮದ್ ರಫೀಕ್ ರೇವಡಿಗಾರ, ತರಬೇತುದಾರ