Advertisement

ಗ್ರಾಮೀಣ ವಿದ್ಯಾರ್ಥಿನಿ ತಾಲೂಕಿಗೆ ಪ್ರಥಮ

10:54 AM Aug 12, 2020 | Suhan S |

ಗುಡಿಬಂಡೆ: ತಾಲೂಕಿನ ಲಕ್ಕೇನಹಳ್ಳಿ ಗ್ರಾಮದ ದೊಡ್ಡಮುನಿಯಪ್ಪ-ಗಾಯತ್ರಿ ಮಗಳು ಡಿ. ಐಶ್ವರ್ಯ ಪ್ರತಿ ದಿನ ತಮ್ಮ ಗ್ರಾಮದಿಂದ ಮಾಚಹಳ್ಳಿ ಸರ್ಕಾರಿ ಪ್ರೌಢ ಶಾಲೆಗೆ 3 ಕಿ.ಮೀ ಕಾಲ್ನಡಿಗೆಯಲ್ಲಿ ನಡೆದುಕೊಂಡು ಹೋಗಿ ಬರುತ್ತಿದ್ದ ಈ ವಿದ್ಯಾರ್ಥಿನಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 612 (ಶೇ.97.92) ಅಂಕ ಪಡೆಯುವ ಮೂಲಕ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಇದು ಗ್ರಾಮೀಣ ಪ್ರದೇಶದ ವಿದ್ಯಾರ್ಥಿನಿಯ ಸಾಧನೆ.

Advertisement

ಡಿ.ಐಶ್ವರ್ಯ ಟ್ಯೂಷನ್‌ ಇಲ್ಲದೇ ಸರ್ಕಾರಿ ಶಾಲೆಯ ಶಿಕ್ಷಕರ ಬೋಧನೆಯಿಂದ ಉತ್ತಮ ವಿದ್ಯಾಭ್ಯಾಸ ಮಾಡಿ ಅತ್ಯುನ್ನತ ಶ್ರೇಣುಯಲ್ಲಿ ಪಾಸಾಗಿದ್ದಾಳೆ. ಇವರೆ ತಂದೆ ಸಿಆರ್‌ಪಿಎಫ್‌ನಲ್ಲಿ ಯೋಧರಾಗಿದ್ದು, ಬರ್ಮಾ ಗಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ತಾಯಿ ಗೃಹಿಣಿ. ಇವರಿಗೆ 3 ಜನ ಹೆಣ್ಣುಮಕ್ಕಳು 2 ಗಂಡುಮಕ್ಕಳು. ತಂದೆಯ ಕಷ್ಟವನ್ನು ನೋಡಿ ತಾನು ಸಹ ಏನಾದರೂ ಸಾಧನೆ ಮಾಡಬೇಕೆಂಬ ಛಲದಿಂದ ಓದಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಮುಂದೆ ವಿಜ್ಞಾನ ವಿಭಾಗ ತೆಗೆದುಕೊಂಡು ಡಾಕ್ಟರ್‌ ಆಗಬೇಕೆಂಬ ಕನಸನ್ನು ಹೊಂದಿದ್ದೇನೆ ಎಂದರು.

ಅಭಿನಂದನೆ: ಶಿಕ್ಷಣ ಇಲಾಖೆ, ತಾಪಂತಿ, ತಾಲೂಕು ಆಡಳಿತ, ಪೊಲೀಸ್‌ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಬಿಸಿಎಂ ಇಲಾಖೆಯ ಅಧಿಕಾರಿಗಳು ತಾಲೂಕಿಗೆ ಪ್ರಥಮ ಸ್ಥಾನ ಬಂದಿರುವ ಡಿ.ಐಶ್ವರ್ಯ ಮನೆಗೆ ಹೋಗಿ ಕೇಕ್‌ ಕತ್ತರಿಸಿ ಸಿಹಿ ತಿನಿಸಿ ನಂತರ ವಿದ್ಯಾರ್ಥಿನಿಗೆ ಶಾಲು ಹೊದಿಸಿ ಸನ್ಮಾನಿಸಿದರು.

ಬಿಇಒ ಎನ್‌.ವೆಂಕಟೇಶಪ್ಪ, ಸಬ್‌ ಇನ್ಸ್ ಪೆಕ್ಟರ್‌ ಗೋಪಾಲ್‌ ರೆಡ್ಡಿ, ಬಿಸಿಎಂ ವಿಸ್ತರಣಾಧಿಕಾರಿ ರಾಮಯ್ಯ, ತಾಲೂಕು ಕಚೇರಿ ಶಿರಸ್ತೇದಾರ್‌ ನಟರಾಜ್‌, ಸಮಾಜ ಕಲ್ಯಾಣ ಇಲಾಖೆಯ ದಾಸಪ್ಪ, ಶಿಕ್ಷಣ ಇಲಾಖೆಯ ಇಸಿಒ ಜಿ.ವಿ.ಚಂದ್ರಶೇಖರ್‌, ಮುಖಂಡ ಕೃಷ್ಣೇಗೌಡ, ಮುರಳಿ, ಶಾಲೆಯ ಮುಖ್ಯ ಶಿಕ್ಷಕ ಚಂದ್ರಪ್ಪ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಮಂಜುನಾಥ ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next