ಗುಬ್ಬಿ: ತಾಲೂಕಿನ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಕೇಂದ್ರದಿಂದ 83 ಕೋಟಿ ರೂ.ಗಳ ಅನುದಾನ ಶೀಘ್ರದಲ್ಲಿಕಾರ್ಯರೂಪಕ್ಕೆ ಬರಲಿದ್ದು ಅವಶ್ಯವಿರುವ ಹಳ್ಳಿಗಾಡಿನ ರಸ್ತೆಗಳನ್ನು ಈ ಕಾಮಗಾರಿಗಳಯೋಜನೆಗೆ ಸೇರಿಸಿಕೊಳ್ಳಲಾಗಿದೆ ಎಂದು ಸಂಸದ ಜಿ. ಎಸ್.ಬಸವರಾಜು ಭರವಸೆ ನೀಡಿದರು.
ತಾಲೂಕಿನ ಜಿ.ಹೊಸಹಳ್ಳಿ ಮತ್ತು ಎನ್. ನಂದಿಹಳ್ಳಿ ಗ್ರಾಮದಲ್ಲಿ ಪ್ರಧಾನಮಂತ್ರಿ ಗ್ರಾಮ್ ಸಡಕ್ ಯೋಜ ನೆಯ ಒಟ್ಟು 10 ಕೋಟಿ ರೂ.ಗಳ ಸುಮಾರು 13ಕಿ.ಮೀ. ರಸ್ತೆ ಅಭಿವೃದ್ಧಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ರಸ್ತೆ ಅಭಿವೃದ್ಧಿಗೆ ಆದ್ಯತೆ: ಗ್ರಾಮೀಣ ಭಾಗದಲ್ಲಿ ಮೂಲಭೂತ ಸವಲತ್ತುಗಳ ಪೈಕಿ ರಸ್ತೆ ಅಭಿವೃದ್ಧಿಗೆಮೊದಲ ಆದ್ಯತೆ ನೀಡಿ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಕೋವಿಡ್ ಸಂಕಷ್ಟದಿಂದ ವಿಳಂಬವಾದ ಹಿನ್ನೆಲೆ ತಡವಾಗಿ ಕಾಮಗಾರಿಗಳಿಗೆ ಗ್ರೀನ್ ಸಿಗ್ನಲ್ ಸಿಗುತ್ತಿದೆ ಎಂದು ತಿಳಿಸಿದರು.
ಗಳಗದಿಂದ ಕಡಬ ರಸ್ತೆ ಸಂಪರ್ಕಿಸುವ 9 ಕಿ.ಮೀ. ರಸ್ತೆಗೆ 6.76 ಕೋಟಿ ರೂ. ನೀಡಲಾಗಿದೆ. ಸಂಪಿಗೆ ರಸ್ತೆಯಿಂದಹೊಸಹಟ್ಟಿ ಸಂಪರ್ಕದ ರಸ್ತೆಗೆ2.4ಕೋಟಿ ರೂ. ಮಂಜೂರು ಮಾಡಲಾಗಿದ್ದು ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.
ಚರ್ಚಿಸಿದ್ದೇನೆ: ಶಾಸಕ ಎಸ್.ಆರ್.ಶ್ರೀನಿವಾಸ್, ಮಾತನಾಡಿ ತಾಲೂಕಿನಲ್ಲಿ ಬಹುತೇಕ ಗ್ರಾಮಗಳ ಸಂಪರ್ಕ ರಸ್ತೆಗೆ ಅನುದಾನ ಹಾಕಲಾಗಿದೆ. ಗಡಿಭಾಗದ ಹಳ್ಳಿ ಗಳಿಗೆ ಮತ್ತಷ್ಟು ಅನುದಾನದ ಅವಶ್ಯವಿದೆ. ರಾಜ್ಯ ಸರ್ಕಾರದ ಹಣದೊಂದಿಗೆ ಕೇಂದ್ರ ಸರ್ಕಾರದ ಅನುದಾನದ ಅಗತ್ಯತೆ ಇದೆ. ಈ ಬಗ್ಗೆ ಸಂಬಂಧಿಸಿದ್ದ ಸಚಿವರೊಂದಿಗೆ ಚರ್ಚಿಸಿದ್ದೇನೆ.ಕೋವಿಡ್ ನಂತರ ಮತ್ತಷ್ಟು ಅನುದಾನ ಭರವಸೆ ಯಲ್ಲಿ ಕಾಯುತ್ತಿದ್ದೇವೆ. ಈ ಜತೆಗೆ ಶಾಸಕರ ಸ್ಥಳೀಯ ಅಭಿವೃದ್ಧಿ ಅನುದಾನ ಬಳಸಿ ಕೊಳ್ಳಲಾಗುತ್ತಿದೆ ಎಂದರು.
ಎಪಿ ಎಂಸಿ ಮಾಜಿ ಸದಸ್ಯ ಕಳ್ಳಿ ಪಾಳ್ಯ ಲೋಕೇಶ್, ಮುಖಂಡ ರಾದ ಎನ್.ಸಿ. ಪ್ರಕಾ ಶ್, ಜಿ.ಎನ್.ಬೆಟ್ಟಸ್ವಾಮಿ, ಜಿಪಂ ಸದಸ್ಯೆ ಡಾ. ನವ್ಯಾ, ಚಂದ್ರಶೇಖರ್, ಹೊಸಹಳ್ಳಿ ಗ್ರಾಪಂ ಅಧ್ಯಕ್ಷೆ ಸಿದ್ದ ಗಂಗಮ್ಮ,ಕಿರಣ್, ಬಸವರಾಜು, ಚೇತನ್ ಇದ್ದರು.
ನೀರಾವರಿ ಯೋಜನೆಗೆ ಚಾಲನೆ :
ಅಭಿವೃದ್ಧಿ ಜತೆಗೆ ನೀರಾವರಿ ವಿಚಾರದಲ್ಲೂ ಹಲವು ಗಂಭೀರ ಚಿಂತನೆ ನಡೆಸಿ ಕೇಂದ್ರದ ಅನುದಾನಗಳೊಟ್ಟಿಗೆ ರಾಜ್ಯ ಸರ್ಕಾರ ವಿಶೇಷ ಅನುದಾನ ಬಳಸಿ ಹೇಮಾವತಿ ನೀರು ಹರಿಸಲಾಗುತ್ತಿದೆ. ಜಿಲ್ಲೆಯಲ್ಲಿಕಳೆದೆರಡುವರ್ಷದಿಂದ ಸರಾಗವಾಗಿ ಹೇಮೆ ನೀರು ಹರಿಸಿಜನಮೆಚ್ಚುಗೆಗೆ ಪಾತ್ರವಾಗಿರುವ ಬಿಜೆಪಿ ಸರ್ಕಾರ, ಹೇಮಾವತಿ ನಾಲಾ ಅಭಿವೃದ್ಧಿಗೆಬಿಡುಗಡೆ ಮಾಡಿದ ಹಣ ಬಳಸಿ ನನೆಗುದಿಗೆಬಿದ್ದ ಎಲ್ಲಾ ನೀರಾವರಿ ಯೋಜನೆಗೆ ಚಾಲನೆ ನೀಡಲಾಗಿದೆ. ಅಲ್ಲದೇ, ಗುಬ್ಬಿ ಅಮಾನಿಕೆರೆಮತ್ತುಕಡಬ ಕೆರೆಯನ್ನು ಮುಂದಿನ ಬಾರಿ ಸಂಪೂರ್ಣ ಭರ್ತಿ ಮಾಡಲು ಎಲ್ಲಾ ತಯಾರಿ ನಡೆಸಲಾಗಿದೆ ಎಂದು ಸಂಸದ ಜಿ.ಎಸ್. ಬಸವರಾಜು ತಿಳಿಸಿದರು.