ಕುಂದಾಪುರ: ಏಳನೇ ವೇತನ ಆಯೋಗದ ವರದಿಯನ್ನು ಜಾರಿಗೊಳಿಸುವಂತೆ ಆಗ್ರಹಿಸಿ ಪುತ್ತೂರು ಪ್ರಧಾನ ಅಂಚೆ ಕಚೇರಿಯ ಎದುರು ಗ್ರಾಮೀಣ ಅಂಚೆ ನೌಕರರು ನಡೆಸುತ್ತಿರುವ ಧರಣಿ ಶುಕ್ರವಾರ 11ನೇ ದಿನಕ್ಕೆ ಕಾಲಿಟ್ಟಿದೆ. ಗ್ರಾಮೀಣ ಅಂಚೆ ನೌಕರರ ಬೇಡಿಕೆ ಈಡೇರಿಸುವ ಕುರಿತು ಕೇಂದ್ರದ ನಾಯಕರೊಂದಿಗೆ ಮಾತುಕತೆ ನಡೆದಿದೆ. ಆದರೂ ಬೇಡಿಕೆ ಈಡೇರಿಸುವ ಕುರಿತು ಲಿಖೀತ ಭರವಸೆ ದೊರೆಯುವ ತನಕ ನಾವು ಪ್ರತಿಭಟನೆಯನ್ನು ಹಿಂದೆ ಪಡೆಯುವುದಿಲ್ಲ ಎಂದು ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘದ ಬಂಟ್ವಾಳ ವಿಭಾಗದ ಕಾರ್ಯದರ್ಶಿ ಗಣೇಶ್ ಹೇಳಿದರು.
Advertisement
ದಿಲ್ಲಿ ಚಲೋನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ 10 ದಿನಗಳಿಂದ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸುತ್ತಿದ್ದೇವೆ. ಈ ಕುರಿತು ಮಾತುಕತೆಗಳು ನಡೆಯುತ್ತಿವೆ. ಆದರೆ ಲಿಖಿತ ಭರವಸೆಗಳು ದೊರೆತಿಲ್ಲ. ಶುಕ್ರವಾರ ‘ದೆಹಲಿ ಚಲೋ’ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದ್ದು, ಸಾವಿರಾರು ನೌಕರರು ಹೊಸದಿಲ್ಲಿಗೆ ತೆರಳಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಸರಕಾರದಿಂದ ಲಿಖಿತ ಭರವಸೆ ದೊರೆಯದಿದ್ದಲ್ಲಿ ಇಲಾಖೆ ನೌಕರರೂ ಜೂ. 4ರಿಂದ ನಮ್ಮ ಜೊತೆ ಕೈಜೋಡಿಸಲಿದ್ದು, ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
Related Articles
ಕಾರ್ಕಳ: ಕಮಲೇಶ್ಚಂದ್ರ ನೇತೃತ್ವದ ಏಕ ಸದಸ್ಯ ಸಮಿತಿಯ ಧನಾತ್ಮಕ ಶಿಫಾರಸುಗಳನ್ನು ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿ ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘ ಪುತ್ತೂರು ವಿಭಾಗದ ಎ.ಐ.ಜಿ.ಡಿ.ಎಸ್. ವತಿಯಿಂದ ಅನಿರ್ದಿಷ್ಟಾವಧಿ ಮುಷ್ಕರ 11ನೇ ದಿನಕ್ಕೆ ಮುಂದುವರಿದಿದ್ದು, ಜೂ. 1ರಂದು ಕಾರ್ಕಳದ ಪ್ರಧಾನ ಅಂಚೆ ಕಚೇರಿಯ ಗೇಟ್ ಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
Advertisement
ಕಮಲೇಶ್ಚಚಂದ್ರ ವರದಿ ಸರಕಾರಕ್ಕೆ ನೀಡಿ 16 ತಿಂಗಳು ಕಳೆದಿದೆ. ಆದರೆ ಹಣಕಾಸು ಇಲಾಖೆಗೆ ಅನುಮೋದಿಸಿದ ಕಡತ ಸುಮಾರು 2 ತಿಂಗಳಿನಿಂದ ಸಚಿವ ಸಂಪುಟ ಅನುಮೋದನೆ ಮಾಡಲು ಮೀನಮೇಷ ಎನಿಸುತ್ತಿದೆ. ಕಳೆದ 11ದಿನಗಳಿಂದ ಎಲ್ಲ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸಲಾಗುತ್ತಿದ್ದು, ನಮಗೆ ನ್ಯಾಯ ದೊರೆತಿಲ್ಲ. ಸರಕಾರ ಎಚ್ಚೆತ್ತುಕೊಳ್ಳಬೇಕು ನೌಕರರು ಆಗ್ರಹಿಸಿದರು.
150ಕ್ಕೂ ಅಧಿಕ ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದು, ಕಳೆದ 11ದಿನಗಳಿಂದ ಪೋಸ್ಟ್ ಗಳು, ಮನಿ ಆರ್ಡರ್, ಪಿಂಚಣಿಗಳು, ಇನ್ನಿತರ ಪತ್ರಗಳು ಸಾರ್ವಜನಿಕರಿಗೆ ಲಭ್ಯಯವಾಗದೇ ಕಚೇರಿಯಲ್ಲೇ ಉಳಿದಿದೆ ಇದರಿಂದಾಗಿ ಜನರಿಗೆ ತೊಂದರೆಯಾಗುತ್ತಿದೆ. ಆದರೂ ಸರಕಾರ ಸುಮ್ಮನಾಗಿದೆ ಎಂದು ದೂರಿದರು. ಪ್ರತಿಭಟನೆಯಲ್ಲಿ ಭಾಗೀಯ ಅಧ್ಯಕ್ಷ ವಿಠಲ ಎಸ್. ಪೂಜಾರಿ, ವಿಭಾಗೀಯ ಕಾರ್ಯದರ್ಶಿ ಸುನಿಲ್ ದೇವಾಡಿಗ, ಶಕೀಲ, ಜಗತ್ಪಾಲ ಹೆಗ್ಡೆ , ವಿಜೇಂದ್ರ ಶೆಣೈ, ಕೆದಿಂಜೆ ಅಶೋಕ್, ವಸಂತಿ, ದಿನೇಶ್ ಪ್ರಭು, ಶಂಭು ಹೆಬ್ರಿ ಭಾಗವಹಿಸಿದ್ದರು.