Advertisement

ಗ್ರಾಮೀಣ ಕ್ರೀಡಾಪಟುಗಳು ರಾಷ್ಟ್ರಮಟ್ಟದಲ್ಲಿ ಮಿಂಚುವಂತಾಗಲಿ

10:28 AM Apr 16, 2018 | |

ಮೂಡಬಿದಿರೆ: ಗಾಣಿಗ ಸಮಾಜದವರು 5 ವರ್ಷಗಳಿಂದ ಪಂದ್ಯಾಟ ಆಯೋಜಿಸುವ ಮೂಲಕ ವಿವಿಗಳಿಗೆ ಸರಿಸಮಾನವಾಗಿ ನಿಂತಿದ್ದಾರೆ. ಈ ಪಂದ್ಯಗಳ ಮೂಲಕಗ್ರಾಮೀಣ ಕ್ರೀಡಾ ಪ್ರತಿಭೆಗಳು ರಾಜ್ಯ, ರಾಷ್ಟ್ರ ಮಟ್ಟಗಳಲ್ಲಿ ಮಿಂಚುವಂತಹ ಅವಕಾಶಗಳು ಸಿಗಲಿ ಎಂದು ಶ್ರೀ ಧವಲಾ ಕಾಲೇಜಿನ ಪ್ರಾಂಶುಪಾಲ ಪ್ರೊ| ಎಂ. ರವೀಶ್‌ ಕುಮಾರ್‌ ಹೇಳಿದರು.

Advertisement

ರವಿವಾರ ಕಾಲೇಜಿನಲ್ಲಿ ನಡೆದ ಸಪಲಿಗರ ಯಾನೆ ಗಾಣಿಗರ ಸೇವಾ ಸಂಘ, ಗಾಣಿಗರ ಯುವ ವೇದಿಕೆ ಮತ್ತು ಮಹಿಳಾ ವೇದಿಕೆ ಮೂಡಬಿದಿರೆ ಇವುಗಳ ಆಶ್ರಯದಲ್ಲಿ ಅವಿಭಜಿತ ಜಿಲ್ಲಾ ಮಟ್ಟದ ವಾಲಿಬಾಲ್‌, ಶಟ್ಲ ಹಾಗೂ ವಿಲಾಸಿನಿ ಮುರಳೀದಾಸ್‌ ಕಾವೂರು ಇವರ ಸ್ಮರಣಾರ್ಥ ಜಿಲ್ಲಾ ಮಟ್ಟದ ತ್ರೋಬಾಲ್‌ ಪಂದ್ಯಾಟವನ್ನು ಅವರು ಉದ್ಘಾಟಿಸಿದರು.

ಮೂಡಬಿದಿರೆ ಸಪಳಿಗರ ಯಾನೆ ಗಾಣಿಗರ ಸೇವಾ ಸಂಘದ ಅಧ್ಯಕ್ಷ ಪ್ರತಾಪ್‌ ಬೆಟ್ಕೇರಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿದ್ದ ಎಡಪದವು ಸಂಘದ ಅಧ್ಯಕ್ಷ ಭಾಸ್ಕರ್‌ ಎಸ್‌. ಮಾತನಾಡಿದರು. ಮೂಡಬಿದಿರೆ ಸಂಘದ ಗೌರವಾಧ್ಯಕ್ಷ ಸದಾಶಿವ ಬಂಗೇರ, ಮಹಿಳಾ ವೇದಿಕೆಯ ಅಧ್ಯಕ್ಷೆ ಸಂಧ್ಯಾ ಸಂದೀಪ್‌, ಯುವ ವೇದಿಕೆಯ ಅಧ್ಯಕ್ಷ ರಂಜಿತ್‌ ಪುತ್ರನ್‌, ತ್ರೋಬಾಲ್‌ ಪಂದ್ಯಾಟದ ಪ್ರಾಯೋಜಕ ಮುರಳೀದಾಸ್‌ ಕಾವೂರು ಉಪಸ್ಥಿತರಿದ್ದರು. ಸಪಲಿಗರ ಯಾನೆ ಗಾಣಿಗರ ಸಂಘದ ಪ್ರ.ಕಾರ್ಯದರ್ಶಿ ರಾಜೇಶ್‌ ಬಂಗೇರ ಸ್ವಾಗತಿಸಿದರು. ಕೇಶವ ಪೊಳಲಿ ವರದಿ ನೀಡಿದರು. ಜಗನ್ನಾಥ ಸಪಲಿಗ ನಿರೂಪಿಸಿ, ವಂದಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next