ಮಂಗಳೂರು: ರಾಜ್ಯದಲ್ಲಿ ಗ್ರಾಮೀಣ ಭಾಗದ ಅಭಿವೃದ್ಧಿಗೆ ಪೂರಕವಾಗಿ ಹೊಸ ಯೋಚನೆ, ಯೋಜನೆಗಳನ್ನು ಹೊಂದಿರುವ ಹಾಗೂ ಗ್ರಾಮೀಣ ಬದುಕಿನ ಸುಧಾರಣೆಗೆ ಸಹಯೋಗ ನೀಡುವ ಸ್ಟಾರ್ಟ್‌ಆಪ್‌ಗಳನ್ನು ಪ್ರೋತ್ಸಾಹಿಸಲು ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಇಲಾಖೆ ಹಾಗೂ ಐಟಿ-ಬಿಟಿ ಇಲಾಖೆ ಜಂಟಿಯಾಗಿ “ಗ್ರಾಮೀಣ ಆವಿಷ್ಕಾರ ನಿಧಿ’ ಸ್ಥಾಪಿಸಿವೆ.
ಐಟಿ-ಬಿಟಿ ಇಲಾಖೆಯು ವಿವಿಧ ನವೋದ್ಯಮಗಳ ಆವಿಷ್ಕಾರಗಳನ್ನು ಉತ್ತೇಜಿಸಲು “ಎಲಿವೇಟ್ ಕರ್ನಾಟಕ’ ಎನ್ನುವ ಪರಿಕಲ್ಪನೆಯಡಿ ನಿಧಿ ಒದಗಿಸುತ್ತಿದೆ. ಈಗ ಅದೇ ರೀತಿ “ಗ್ರಾಮೀಣ ಆವಿಷ್ಕಾರ ನಿಧಿ’ಯನ್ನು ಇತ್ತೀಚಿನ ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯಲ್ಲಿ ಘೋಷಿಸಲಾಗಿದೆ.
ಸ್ಟಾರ್ಟ್ ಅಪ್‌ರೂಪ ಗ್ರಾಮೀಣ ಭಾಗದಲ್ಲಿ ಜನರ ದೈನಂದಿನ ಜೀವನ ಮತ್ತು ಜೀವನೋಪಾಯಗಳಿಗೆ ಸಂಬಂ ಧಿಸಿದಂತೆ ಸಾಕಷ್ಟು ಸಮಸ್ಯೆಗಳಿವೆ. ಸ್ಥಳೀಯವಾಗಿ ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳು “ವಿಜ್ಞಾನ ಮಾದರಿ’ಗಳ ಮೂಲಕ ಕೆಲವು ಸಮಸ್ಯೆಗಳಿಗೆ ವೈಜ್ಞಾನಿಕ ಪರಿಹಾರವನ್ನು ಶೋಧಿಸುತ್ತಿದ್ದಾರೆ. ಇವುಗಳನ್ನು ಇನ್ನಷ್ಟು ಅಭಿವೃದ್ಧಿಪಡಿಸಿ ಸ್ಟಾರ್ಟ್ ಅಪ್ ರೂಪ ನೀಡಬೇಕಿದೆ. ಸ್ಥಳೀಯ ಯುವ ಜನರೇ ಇದಕ್ಕೆ ಕಾರ್ಯೋನ್ಮುಖರಾದರೆ ಹೆಚ್ಚು ಪರಿಣಾಮಕಾರಿಯಾಗಿರಲಿದೆ. ಅಲ್ಲದೇ ಸಮಸ್ಯೆ ಗಳಿಗೆ ನೈಜ ಪರಿಹಾರ ಸಿಗಲಿದೆ ಎನ್ನುವುದು ಇದರ ಹಿಂದಿನ ಉದ್ದೇಶ.
ಮುಖ್ಯವಾಗಿ ಶುದ್ಧ ಕುಡಿಯುವ ನೀರು ಪೂರೈಕೆ, ಸಂಪರ್ಕ ರಸ್ತೆ, ನೈರ್ಮಲ್ಯ, ತ್ಯಾಜ್ಯ ವಿಲೇವಾರಿ, ತೆರಿಗೆ ಸಂಗ್ರಹ ಮೊದಲಾದವುಗಳಿಗೆ ಸಂಬಂಧಿಸಿದಂತೆ ಸ್ಟಾರ್ಟ್‌ಅಪ್‌ಗ್ಳ ಮೂಲಕ ಪರಿಹಾರ ಒದಗಿಸಬಹುದಾಗಿದೆ. ಇದರೊಂದಿಗೆ ಜತೆಗೆ ಪ್ರದೇಶವಾರು ಇರುವ ಸಮಸ್ಯೆಗಳನ್ನು ಆಯ್ಕೆ ಮಾಡಿ ಅವುಗಳಿಗೂ ತಂತ್ರಜ್ಞಾನದ ಮೂಲಕ ಪರಿಹಾರ ಕಂಡುಹಿಡಿಯಲೂ ಯುವಜನರು ಪ್ರಯತ್ನಿಸಬಹುದಾಗಿದೆ.
50 ಲಕ್ಷ ರೂ. ವರೆಗೆ ಅನುದಾನ
ನವೋದ್ಯಮವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು “ಎಲಿವೇಟ್ ಕರ್ನಾ ಟಕ’ದಡಿ ಗರಿಷ್ಠ 50 ಲಕ್ಷ ರೂ.ವರೆಗೆ ಪ್ರೋತ್ಸಾ ಹ ಧನ ನೀಡಲಾಗುತ್ತಿದೆ. “ಗ್ರಾಮೀಣ ಆವಿಷ್ಕಾರ ನಿಧಿ’ ಯಲ್ಲೂ ಸ್ಟಾರ್ಟ್ ಅಪ್ ಗಳ ಕಾರ್ಯದಕ್ಷತೆ ಆಧರಿಸಿ 10 ಲಕ್ಷ ರೂ.,20 ಲಕ್ಷ ರೂ., 50 ಲಕ್ಷ ರೂ. ನಂತೆ ಅನುದಾನ ದೊರಕಲಿದೆ.
ಗ್ರಾಮೀಣ ಭಾಗದ ಜೀವನ
ಮತ್ತು ಜೀವನೋಪಾಯಕ್ಕೆ ಸಂಬಂಧಿಸಿದ ಕೆಲವು ಸಮಸ್ಯೆಗಳಿಗೆ ಆವಿಷ್ಕಾರ ಅಥವಾ ತಂತ್ರಜ್ಞಾನದ ಮೂಲಕ ಪರಿಹಾರ ಹುಡುಕುವ ನವೋದ್ಯಮಗಳನ್ನು ಈ ನಿಧಿಯಡಿ ಪ್ರೋತ್ಸಾಹಿಸಲಾಗುತ್ತದೆ. ಗ್ರಾಮೀಣ ಭಾಗದ ಯುವ ಜನರೇ ಇಂತಹ ಆಲೋಚನೆಗಳನ್ನು ಹೊಂದಿದ್ದರೆ ಯೋಜನೆಗೆ ಇನ್ನಷ್ಟು ಶಕ್ತಿ ಸಿಗಲಿದೆ. ತಂತ್ರಜ್ಞಾನ ಆಧಾರಿತ ಕೋರ್ಸ್‌ಗಳನ್ನು ಮಾಡುತ್ತಿರುವ ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಪ್ರಯತ್ನಿಸಬಹುದು
– ಪ್ರಿಯಾಂಕ್ ಖರ್ಗೆ
ಗ್ರಾಮೀಣಾಭಿವೃದ್ಧಿ, ಪಂ.ರಾಜ್ ಮತ್ತು ಐಟಿ-ಬಿಟಿ ಸಚಿವ