Advertisement
ಮಹಾತ್ಮಾಗಾಂಧಿಯವರ 150ನೇ ಜಯಂತಿಯಂದು ಅವರ ಸ್ವತ್ಛ ಭಾರತದ ಕನಸನ್ನು ನನಸಾಗಿಸಿರುವುದು ನಮಗೆ ಖುಷಿ ನೀಡಿದೆ. ದೇಶವನ್ನು ಸಂಪೂರ್ಣವಾಗಿ ಬಯಲು ಶೌಚಮುಕ್ತ ಎಂದು ಆಶ್ರಮದಲ್ಲಿ ಘೋಷಿ ಸುತ್ತಿರುವುದು ನನ್ನ ಅದೃಷ್ಟ ಎಂದು ನಾನು ಭಾವಿಸುತ್ತೇನೆ ಎಂದು ಅವರು ಸಂದರ್ಶಕರ ಪುಸ್ತಕದಲ್ಲಿ ಬರೆದಿದ್ದಾರೆ.
Related Articles
ಹೊಸದಿಲ್ಲಿ: ದೇಶ ವಿಭಜನೆಯ ವೇಳೆ ಮಹಾತ್ಮಾಗಾಂಧಿ ಆರೆಸ್ಸೆಸ್ ಶಾಖೆಗೆ ಭೇಟಿ ನೀಡಿ, ಸ್ವಯಂಸೇವಕರೊಂದಿಗೆ ಮಾತುಕತೆ ನಡೆಸಿದ್ದರು. ಅಷ್ಟೇ ಅಲ್ಲ, ದೇಶದ ಬಗ್ಗೆ ಸ್ವಯಂಸೇವಕರಿಗೆ ಇರುವ ಪ್ರೀತಿ ಮತ್ತು ಸ್ವಯಂಸೇವಕರಲ್ಲಿ ಜಾತಿ ಹಾಗೂ ಜನಾಂಗದ ಬಗ್ಗೆ ತಾರತಮ್ಯ ಭಾವ ಇಲ್ಲದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ ಭಾಗ್ವತ್ ಹೇಳಿದ್ದಾರೆ. ಹೊಸದಿಲ್ಲಿಯ ಶಾಖೆಯಲ್ಲಿ ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಬುಧವಾರ ಗಾಂಧಿ ಸ್ಮರಣೆ ಮಾಡಲಾಯಿತು. ಈ ವೇಳೆ ಸ್ವಯಂಸೇವಕರನ್ನು ಉದ್ದೇಶಿಸಿ ಭಾಗ್ವತ್ ಮಾತನಾಡಿದರು. ಗಾಂಧಿ ತಮ್ಮ ನಿವಾಸದ ಬಳಿ ದಿಲ್ಲಿಯಲ್ಲಿನ ಶಾಖೆಗೆ ಆಗಮಿಸಿದ ವರದಿ 1947ರ ಸೆ. 27ರ ಹರಿಜನ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಅಷ್ಟೇ ಅಲ್ಲ, 1936 ರಲ್ಲಿ ಸಂಘದ ವಾರ್ಧಾ ಬಳಿಯ ಶಾಖೆಗೆ ಭೇಟಿ ನೀಡಿದ್ದರು. ಮರುದಿನ ಅವರನ್ನು ಆರೆಸ್ಸೆಸ್ ಸಂಸ್ಥಾಪಕ ಕೆ.ಬಿ ಹೆಡೆವಾರ್ ಕೂಡ ಭೇಟಿ ಮಾಡಿದ್ದರು ಎಂದರು.
Advertisement
ಐನ್‌ಸ್ಟೀನ್ ಮಾದರಿ ಪ್ರಚಾರ ಬೇಕುಮಹಾತ್ಮಾಗಾಂಧಿ ವಿಶ್ವದ ಕೋಟ್ಯಂತರ ಜನರಿಗೆ ಸ್ಫೂರ್ತಿ ತುಂಬುತ್ತಿರುವ ಮಾರ್ಗದರ್ಶಕರು ಎಂದು ಪ್ರಧಾನಿ ಬಣ್ಣಿಸಿದ್ದಾರೆ. “ದ ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆಗೆ ವಿಶೇಷ ಲೇಖನ ಬರೆದಿರುವ ಅವರು, ಮಹಾತ್ಮಾ ಉತ್ತಮ ಶಿಕ್ಷಕ ಕೂಡ ಹೌದು ಎಂದಿದ್ದಾರೆ. ಮುಂದಿನ ಪೀಳಿಗೆಗಾಗಿ ಗಾಂಧಿ ತತ್ವಗಳನ್ನು ಪಸರಿಸಲು ಐನ್‌ಸ್ಟಿàನ್ ಚಾಲೆಂಜ್ ಹಮ್ಮಿಕೊಳ್ಳುವಂತೆ ಕರೆ ನೀಡಿದ್ದಾರೆ. ಗಾಂಧಿ ಬಗ್ಗೆ ಮಾತನಾಡಿದ್ದ ಐನ್‌ಸ್ಟೀನ್, ಮುಂದಿನ ತಲೆಮಾರುಗಳು ಇಂಥ ಒಬ್ಬ ವ್ಯಕ್ತಿ ಬದುಕಿದ್ದರು ಎಂಬುದನ್ನು ನಂಬುವುದೂ ಇಲ್ಲ ಎಂದಿದ್ದರು. ಹೀಗಾಗಿ, ಗಾಂಧಿ ತತ್ತ್ವಗಳನ್ನು ನಾವು ಮುಂದಿನ ತಲೆಮಾರಿಗೆ ತಲುಪಿಸುವುದು ಹೇಗೆ ಎಂದು ಚಿಂತಕರು, ಉದ್ಯಮಿಗಳು ಮತ್ತು ತಂತ್ರಜ್ಞಾನ ಪರಿಣತರಲ್ಲಿ ಕೇಳಿದ್ದು, ಇವರು ಈ ನಿಟ್ಟಿನಲ್ಲಿ ಮುಂದಾಳತ್ವ ವಹಿಸಬೇಕಿದೆ ಎಂದಿದ್ದಾರೆ. ಅಂಚೆ ಚೀಟಿ ಬಿಡುಗಡೆ
ಮಹಾತ್ಮಾಗಾಂಧಿ ಅವರ 150ನೇ ಜನ್ಮದಿನ ಪ್ರಯುಕ್ತ ಪ್ಯಾಲೆಸ್ತೀನ್ ವಿಶೇಷ ಅಂಚೆಚೀಟಿ ಬಿಡುಗಡೆ ಮಾಡಿದೆ. ರಮಲ್ಲಾದಲ್ಲಿರುವ ಭಾರತದ ಪ್ರತಿನಿಧಿ ಸುನಿಲ್ ಕುಮಾರ್ ಸಮ್ಮುಖದಲ್ಲಿ ಅಲ್ಲಿನ ದೂರಸಂಪರ್ಕ ಮತ್ತು ಮಾಹಿತಿ ಸಚಿವ ಇಶಾಕ್ ಸೆದೆರ್ ಅದನ್ನು ಬಿಡುಗಡೆ ಮಾಡಿದ್ದಾರೆ. ಮಹಾತ್ಮಾ ಪಾಲಿಸುತ್ತಿದ್ದ ಅಂಹಿಸೆ, ಮೌಲ್ಯ, ಬುದ್ಧಿವಂತಿಕೆಗಳು ಮಾನವತೆಗೆ ನಿರಂತರ ದಾರಿ ದೀಪವೆಂದು ಸೆದೆರ್ ಕೊಂಡಾಡಿದರು. ನೇಪಾಲದಲ್ಲಿ ಪ್ರತಿಮೆ
ಭಾರತ ನೆರೆಯ ರಾಷ್ಟ್ರ ನೇಪಾಲದಲ್ಲಿ ಮೊದಲ ಬಾರಿಗೆ ಮಹಾತ್ಮಾ ಗಾಂಧಿ ಪ್ರತಿಮೆ ಅನಾ ವರಣ ಮಾಡಲಾಗಿದೆ. ರಾಜಧಾನಿ ಕಾಠ್ಮಂಡು ವಿನಲ್ಲಿ ಇರುವ ಭಾರತದ ರಾಯಭಾರ ಕಚೇರಿಯಲ್ಲಿ ಪ್ರತಿಮೆ ಸ್ಥಾಪನೆ ಮಾಡಲಾಗಿದೆ. ನೇಪಾಲದಲ್ಲಿನ ಭಾರತದ ರಾಯಭಾರಿ ಮಂಜೀವ್ ಸಿಂಗ್ ಪುರಿ ಅದನ್ನು ಅನಾವರಣಗೊಳಿಸಿದರು. ಬಿಜೆಪಿ ವಿರುದ್ಧ ಟೀಕೆ
ಹೊಸದಿಲ್ಲಿ: ಅಧಿಕಾರಕ್ಕಾಗಿ ಹಪಹಪಿಸುವವರು ಮತ್ತು ಸುಳ್ಳಿನ ರಾಜಕೀಯ ಮಾಡುವವರಿಗೆ ಮಹಾತ್ಮಾ ಗಾಂಧಿಯವರ ತತ್ವ ಅರ್ಥವಾಗುವುದಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ. ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಮಹಾತ್ಮಾ ಗಾಂಧಿಯವರ 150ನೇ ಜನ್ಮದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿಯನ್ನು ಪರೋಕ್ಷವಾಗಿ ಟೀಕಿಸಿರುವ ಅವರು ಕಳೆದ ಕೆಲವು ವರ್ಷಗಳಲ್ಲಿ ಭಾರತದಲ್ಲಿ ನಡೆಯುತ್ತಿರುವ ಬೆಳವಣಿಗೆಗಳಿಂದ ಗಾಂಧಿಯ ಆತ್ಮಕ್ಕೆ ನೋವಾಗಿದೆ ಎಂದು ಟೀಕಿಸಿದ್ದಾರೆ.