Advertisement

ಗ್ರಾಮಾಭಿವೃದ್ಧಿಗೆ ಧರ್ಮಸ್ಥಳದ ಸೇವಾ ಕಾರ್ಯ ಅನನ್ಯ

02:16 PM Sep 06, 2021 | Team Udayavani |

ಬೈಲಹೊಂಗಲ: ಸಮಾಜದಲ್ಲಿ ಉತ್ತಮಯೋಜನೆಗಳನ್ನು ಹಮ್ಮಿಕೊಂಡು ಬದುಕಿಗೆಆಸರೆಯಾಗಿ ಧಾರ್ಮಿಕ, ಅಧ್ಯಾತ್ಮಿಕಕಾರ್ಯಗಳಿಂದ ಸುಖ ಶಾಂತಿಗೆ ಪ್ರಯತ್ನಿಸುತ್ತಿರುವಧರ್ಮಸ್ಥಳದ ಗ್ರಾಮಾಭಿವೃದ್ಧಿ ಸಂಸ್ಥೆಯ ಕಾರ್ಯಶ್ಲಾಘನೀಯವಾಗಿದೆ ಎಂದು ಕಾಡಾ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ ಹೇಳಿದರು.

Advertisement

ಅವರು ಪಟ್ಣಣದ ಶ್ರೀ ಮೌನೇಶ್ವರ ಕಲ್ಯಾಣಮಂಟಪದಲ್ಲಿ ಶ್ರಾವಣ ಮಾಸದ ಪ್ರಯುಕ್ತಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಬಿಸಿ ಟ್ರಸ್ಟ್‌,ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದಸಂಯುಕ್ತ ಆಶ್ರಯದಲ್ಲಿ ನಡೆದ ಶ್ರೀ ಲಕ್ಷ್ಮೀ ಪೂಜೆ ಹಾಗೂ ಶ್ರೀ ಕೃಷ್ಣ ಜನಾಷ್ಟಮಿ ಧಾರ್ಮಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಾಮಾಜಿಕ,ಶೆ„ಕ್ಷಣಿಕ,ಧಾರ್ಮಿಕ, ಅಧ್ಯಾತ್ಮಿಕ, ಆರ್ಥಿಕ ಸೇರಿದಂತೆವಿಧಾಯಕ ಕಾರ್ಯಗಳಿಂದ ಸಂಸ್ಥೆಯು ರಾಜ್ಯದಲ್ಲಿಮನೆ ಮಾತಾಗಿದೆ.

ಸ್ವಸಹಾಯ ಸಂಘಗಳ ಮೂಲಕಮಹಿಳೆಯರ ಸ್ವಾವಲಂಬನೆಗೆ ಕಾರಣೀಭೂತವಾಗಿ,ರಾಜ್ಯ ಮಟ್ಟದಲ್ಲಿ ಕೃಷಿಮೇಳವನ್ನು ಇಲ್ಲಿಆಯೋಜಿಸಿದ್ದು ಸಾಕ್ಷಿಯಾಗಿದೆ ಎಂದರು.ಯೋಜನೆಯ ಜಿಲ್ಲಾ ನಿರ್ದೇಶಕ ಪ್ರದೀಪ ಶೆಟ್ಟಿಮಾತನಾಡಿ, ಧರ್ಮಾಧಿಕಾರಿ ಡಾ. ವಿರೇಂದ್ರ ಹೆಗ್ಗಡೆಅವರ ಆಶಯದಂತೆ ಸಮಾಜದ ಪ್ರತಿ ವರ್ಗಕ್ಕೂವಿಭಿನ್ನ ಚಟುವಟಿಕೆಗಳನ್ನು ಏರ್ಪಡಿಸಿ ಆ ಮೂಲಕಪ್ರಗತಿಗೆ ಅವಿರತವಾಗಿ ಪ್ರಯತ್ನ ಮಾಡುತ್ತಲಿದ್ದು, ನೊಂದು ಬೆಂದವರ ಬಾಳಿಗೆ ಆಶಾಕಿರಣವಾಗಿದೆ.

ಪ್ರತಿಭಾವಂತರಿಗೆ ಪ್ರೇರಣೆ, ನಾಡಿನ ಅನ್ನದಾತನಿಗೆಸಹಕಾರ, ಯುವಕರ ದುಶ್ಚಟಗಳ ನಿವಾರಣೆಗೆಮದ್ಯವರ್ಜನ ಶಿಬಿರ, ಮಹಿಳೆಯರ ಅಭ್ಯುದಯಸೇರಿದಂತೆ ನಾಡು ಕಟ್ಟುವಲ್ಲಿ ಮುಂಚೂಣಿಯಲ್ಲಿದೆಎಂದರು.ಶ್ರೀರಾಮನಗರ ಒಕ್ಕೂಟದ ಅಧ್ಯಕ್ಷೆ ರತ್ನಾ ಗೋಧಿಸಭೆಯ ಅಧ್ಯಕ್ಷತೆ ವಹಿಸಿದ್ದರು. ಪತ್ರಿ ಬಸವ ನಗರದಅಭಿವೃದ್ಧಿ ಸಂಘದ ಅಧ್ಯಕ್ಷೆ ಪ್ರೇಮಾ ಅಂಗಡಿ,ತಾಲೂಕು ರೈತ ಮೋರ್ಚಾ ಉಪಾಧ್ಯಕ್ಷ ಈಶ್ವರಬೋರಕನವರ, ತಾಲೂಕಾ ಯೋಜನಾಧಿಕಾರಿ ಪುರಷೋತ್ತಮ ಕೆ., ಒಕ್ಕೂಟದ ಅಧ್ಯಕ್ಷೆ ಈರಮ್ಮಾಕಮ್ಮಾರ, ಗಿರಿಜಾ ಪಾಟೀಲ ಮುಂತಾದವರು ಉಪಸ್ಥಿತರಿದ್ದರು. ಮೇಲ್ವಿಚಾರಕಿ ಸರೋಜಾ ಪಟಗಾರಸ್ವಾಗತಿಸಿದರು. ಮಂಜುನಾಥ ಕಡಕೋಳನಿರೂಪಿಸಿದರು. ಸೇವಾ ಪ್ರತಿನಿಧಿ ರಾಜೇಶ್ವರಿ ಈಟಿವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next