Advertisement

ಜಾನಪದ ಕಲೆಯಿಂದ ಗ್ರಾಮೀಣ ಸೊಗಡು ಶ್ರೀಮಂತ

05:35 PM Sep 01, 2022 | Team Udayavani |

ಕೆರೂರ: ಜಾನಪದ ಕಲೆಯಿಂದ ದೇಶದ ಗ್ರಾಮೀಣ ಸೊಗಡು ಶ್ರೀಮಂತಗೊಂಡಿದೆ. ಹೀಗಾಗಿ ಜಾನಪದ ಕಲೆ ದೇಶದ ಸಂಪತ್ತಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಹೇಳಿದರು.

Advertisement

ಪಟ್ಟಣದ ದೇವಾಂಗ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ತಾಲೂಕ ಕರ್ನಾಟಕ ಜಾನಪದ ಪರಿಷತ್ತು ಘಟಕದ ಕಾರ್ಯ ಚಟುವಟಿಕೆಗಳ ಉದ್ಘಾಟನೆ ಹಾಗೂ ಜಾನಪದ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದ ಗ್ರಾಮೀಣ ಸೊಗಡಿನಲ್ಲಿ ಜಾನಪದ ಕಲೆ ತನ್ನದೆಯಾದ ಶಕ್ತಿಯೊಂದಿಗೆ ದೇಶದ ಸಾಂಸ್ಕೃತಿಕ ಸಂಪತ್ತು ಹೆಚ್ಚಿಸಿರುವುದು ಗಮನಾರ್ಹ. ಜತೆಗೆ ಜಾನಪದ ಕಲಾವಿದರ ಕೊಡುಗೆ ಅಪಾರ. ಜಾನಪದ ಕಲೆ ಉಳಿಯಬೇಕಾಗಿದೆ. ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕ ಸಾಹಿತ್ಯ ಕ್ಷೇತ್ರದ ಜತೆಗೆ ದೇಶಿಯ ಇಂಥ ಸಮೃದ್ಧಿ ಕಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇಂದಿನ ಯುವ ಜನಾಂಗವನ್ನು ಸಾಹಿತ್ಯ ಮತ್ತು ಸಾಂಸ್ಕೃತಿಕ
ಕಲೆಗಳತ್ತ ಅವರನ್ನು ಸೆಳೆಯಬೇಕಾಗಿದೆ ಎಂದರು.ಇದೇ ಜಾನಪದ ಪರಿಷತ್ತಿನ ಬಾದಾಮಿ ತಾಲೂಕು ಪದಾಧಿರಿಗಳ ಪದಗ್ರಹಣ ಮಾಡಲಾಯಿತು.

ಕೆರೂರಿನ ದೇವಾಂಗ ಸಮಾಜದ ಅಧ್ಯಕ್ಷ ಸಂಕಣ್ಣ ಹೊಸಮನಿ ವಹಿಸಿದ್ದರು. ಜಿಲ್ಲಾ ಕಸಾಪ ಕಾರ್ಯದರ್ಶಿ ಸಿ.ಎಸ್‌. ಬಾಳಕ್ಕವರ, ಕೋಶಾಧ್ಯಕ್ಷ ಆರ್‌.ಸಿ. ಚಿತ್ತವಾಡಗಿ, ಬಾದಾಮಿ ತಾಲೂಕಾ ಕಸಾಪ ಅಧ್ಯಕ್ಷ ಬಿ.ಎಫ್‌. ಹೊರಕೇರಿ, ಎಸ್‌.ಆರ್‌. ಎಮ್ಮಿಮಠ, ರಮೇಶ ಅರಕೇರಿ, ವಿಠಲ್‌ಗೌಡ ಗೌಡರ, ಶಂಕರ ಹೂಲಿ, ಸಿ.ಎಸ್‌. ನಾಗನೂರ, ಮಂಜುನಾಥ ಪತ್ತಾರ, ಸದಾನಂದ ಮದಿ, ರಂಗಪ್ಪ ಅಗಸರ, ಇಮಾಮ್‌ಸಾಬ್‌ ಮುದಕವಿ, ಲಿಂಗರಾಜ ಕ್ವಾಣೂªರ, ಮಲ್ಲು ಪೂಜಾರ ಹಾಜರಿದ್ದರು.

ಕಾರ್ಯಕ್ರಮದಲ್ಲಿ ವಿವಿದ ಜಾನಪದ ಕಲಾ ತಂಡಗಳಿಂದ ದೇಶಭಕ್ತಿಯ ನೃತ್ಯಗಳು, ಜಾನಪದ ಗೀತೆ, ಸೋಭಾನೆ ಪದ, ತತ್ವಪದ, ಬೀಸುಕಲ್ಲಿನ ಪದ, ಸಮೂಹ ನೃತ್ಯ, ಸಂಪ್ರದಾಯಕ ಪದ ನಡೆದವು. ರಂಗಾಯಣ ಕಲಾವಿದರಿಂದ ಕಿತ್ತೂರ ರಾಣಿ ಚೆನ್ನಮ್ಮ ನಾಟಕ ಎಲ್ಲರ ಗಮನ ಸೆಳೆಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next