ಹೊಸದಿಲ್ಲಿ: ಜಕಾರ್ತದಲ್ಲಿ ಮೇ 23ರಿಂದ ಆರಂಭವಾಗುವ ಏಷ್ಯಾ ಕಪ್ ಕೂಟದಲ್ಲಿ ಭಾರತೀಯ ಹಾಕಿ ತಂಡವನ್ನು ಖ್ಯಾತ ಡ್ರ್ಯಾಗ್‌ಫ್ಲಿಕರ್ ರುಪೀಂದರ್ ಪಾಲ್ ಸಿಂಗ್ ಮುನ್ನಡೆಸಲಿದ್ದಾರೆ.
20 ಸದಸ್ಯರ ಭಾರತೀಯ ತಂಡದಲ್ಲಿ ಉಪನಾಯಕರಾಗಿ ಬಿರೇಂದ್ರ ಲಾಕ್ರ ಅವರನ್ನು ಹೆಸರಿಸಲಾಗಿದೆ. ನಿವೃತ್ತಿ ಘೋಷಿಸಿದ್ದ ರುಪೀಂದರ್ ಮತ್ತು ಲಾಕ್ರ ಇತ್ತೀಚೆಗೆ ತಂಡಕ್ಕೆ ಮರಳಿದ್ದರು. ಏಷ್ಯಾ ಕಪ್ ಕೂಟವು ವಿಶ್ವಕಪ್‌ಗೆ ಅರ್ಹತಾ ಕೂಟವಾಗಿದೆ. ಆದರೆ ಭಾರತವು ಈ ಬಾರಿ ಆತಿಥ್ಯ ವಹಿಸಿರುವ ಹಿನ್ನೆಲೆಯಲ್ಲಿ ಈ ಮಹತ್ವದ ಕೂಟಕ್ಕೆ ತನ್ನ ಪ್ರವೇಶವನ್ನು ದೃಢಪಡಿಸಿದೆ. ವಿಶ್ವಕಪ್ ಮುಂದಿನ ವರ್ಷದ ಜನವರಿಯಲ್ಲಿ ನಡೆಯಲಿದೆ. ಏಷ್ಯಾ ಕಪ್‌ನ ಅಗ್ರ ಮೂರು ತಂಡಗಳು ವಿಶ್ವಕಪ್‌ನಲ್ಲಿ ಆಡಲು ಅರ್ಹತೆ ಗಳಿಸಲಿವೆ.
ಖ್ಯಾತ ಆಟಗಾರ ಎಸ್‌ವಿ ಸುನಿಲ್ ಕೂಡ ಭಾರತೀಯ ತಂಡದಲ್ಲಿದ್ದಾರೆ. ಅವರು ನಿವೃತ್ತಿ ಘೋಷಿಸಿದ ಬಳಿಕ ತಂಡಕ್ಕೆ ಮರಳಿದ ಆಟಗಾರರಾಗಿದ್ದರು. ಆದರೆ ಅವರು ಗಾಯದ ಸಮಸ್ಯೆಯಿಂದಾಗಿ ಟೋಕಿಯೊ ಒಲಿಂಪಿಕ್ಸ್ ತಂಡದಲ್ಲಿ ಇರಲಿಲ್ಲ. ರುಪೀಂದರ್ ಮತ್ತು ಲಾಕ್ರ ಟೋಕಿಯೊ ಗೇಮ್ಸ್ ನಲ್ಲಿ ಕಂಚು ಗೆದ್ದ ತಂಡದ ಸದಸ್ಯರಾಗಿದ್ದರು. ಒಲಿಂಪಿಕ್ಸ್ ಬಳಿಕ ಈ ಮೂವರು ನಿವೃತ್ತಿ ಘೋಷಿಸಿದ್ದರು. ಆ ಬಳಿಕ ಆಯ್ಕೆಗೆ ಲಭ್ಯರಿದ್ದೇವೆ ಎಂದು ತಿಳಿಸಿದ್ದರು.
“ಎ’ ಬಣದಲ್ಲಿ ಭಾರತ
ಹಾಲಿ ಚಾಂಪಿಯನ್ ಆಗಿರುವ ಭಾರತವು ಜಪಾನ್, ಪಾಕಿಸ್ಥಾನ ಮತ್ತು ಆತಿಥ್ಯ ರಾಷ್ಟ್ರ ಇಂಡೊನೇಶ್ಯದ ಜತೆ “ಎ’ ಬಣದಲ್ಲಿದೆ. ಮಲೇಶ್ಯ, ಕೊರಿಯ, ಒಮಾನ್ ಮತ್ತು ಬಾಂಗ್ಲಾದೇಶ “ಬಿ’ ಬಣದಲ್ಲಿದೆ.
ಏಷ್ಯಾ ಕಪ್‌ಗಾಗಿ ದ್ವಿತೀಯ ದರ್ಜೆಯ ಭಾರತೀಯ ತಂಡವನ್ನು ಪ್ರಕಟಿಸಲಾಗಿದ್ದು ಸುಮಾರು 10 ಮಂದಿ ಸೀನಿಯರ್ ತಂಡಕ್ಕೆ ಪದಾರ್ಪಣೆಗೈಯಲಿದ್ದಾರೆ. ಜೂನಿಯರ್ ವಿಶ್ವಕಪ್‌ನಲ್ಲಿ ಆಡಿದ ಅನುಭವವಿರುವ ಯಶ್‌ದೀಪ್ ಸಿವಾಚ್, ಅಭಿಷೇಕ್ ಲಾಕ್ರ, ಮನ್‌ಜಿàತ್, ವಿಷ್ಣುಕಾಂತ್ ಸಿಂಗ್ ಮತ್ತು ಉತ್ತಮ್ ಸಿಂಗ್ ಏಷ್ಯಾ ಕಪ್ ತಂಡದಲ್ಲಿದ್ದಾರೆ. ಹಿರಿಯ ಆಟಗಾರರಾದ ಮನ್‌ಪ್ರೀತ್ ಸಿಂಗ್, ಹರ್ಮನ್‌ಪ್ರೀತ್ ಸಿಂಗ್ ಮತ್ತು ಪಿ.ಆರ್. ಶ್ರೀಜೇಶ್ ಅವರಿಗೆ ವಿಶ್ರಾಂತಿ ನೀಡಲಾಗಿದೆ.