ಮಣಿಪಾಲ: ಕನ್ನಡ, ತುಳು ಚಿತ್ರರಂಗದ ಭರವಸೆಯ ಯುವ ನಟ ರೂಪೇಶ್ ಶೆಟ್ಟಿ ಉದಯವಾಣಿ ಡಾಟ್ ಕಾಮ್ ನ ತೆರೆದಿದೆ ಮನೆ ಬಾ ಅತಿಥಿ ಎಂಬ ಫೇಸ್ ಬುಕ್ ಲೈವ್ ಕಾರ್ಯಕ್ರಮದಲ್ಲಿ ಶನಿವಾರ(ಮಾರ್ಚ್ 13) ಪಾಲ್ಗೊಳ್ಳಲಿದ್ದಾರೆ.
ರೂಪೇಶ್ ಶೆಟ್ಟಿ ಅವರ ಜತೆ ಶನಿವಾರ ಸಂಜೆ 5.30ಕ್ಕೆ ಫೇಸ್ ಲೈವ್ ನಲ್ಲಿ ಮಾತುಕತೆ ನಡೆಸಲಿದ್ದು, ಈ ಸಂದರ್ಭದಲ್ಲಿ ಓದುಗರು ಕೂಡಾ ಅವರಿಗೆ ತಮ್ಮ ಪ್ರಶ್ನೆಗಳನ್ನು ಲೈವ್ ಚಾಟ್ ಮೂಲಕ ಕೇಳಿ ಉತ್ತರ ಪಡೆಯಬಹುದಾಗಿದೆ.
ಪ್ರತಿಭೆ ಜೊತೆ ಪರಿಶ್ರಮ ಬೆರೆತಾಗ ಯಶಸ್ಸು ಸಾಧ್ಯ ಎಂದು ಸಾಬೀತುಪಡಿಸಿದ ಚಿತ್ರರಂಗದ ಹಿನ್ನಲೆ ಇಲ್ಲದ ಈ ಚಾಕಲೇಟ್ ಹೀರೋ ಕನ್ನಡ, ತುಳು ಮತ್ತು ಕೊಂಕಣಿ ಸೇರಿ ಮೂರು ಭಾಷೆಗಳಲ್ಲಿ ಅಭಿನಯಿಸಿದ್ದಾರೆ.
ರೂಪೇಶ್ ಮಂಗಳೂರಿನಲ್ಲಿ ಆರ್ ಜೆಯಾಗಿ ಜನಪ್ರಿಯತೆ ಗಳಿಸಿದ ನಂತರ ಅವರು “ದಿಬ್ಬಣ” ಎಂಬ ತುಳು ಚಿತ್ರದಲ್ಲಿನ ಕಿರು ಪಾತ್ರದಲ್ಲಿ ನಟಿಸುವ ಮೂಲಕ ಬೆಳ್ಳಿಪರದೆಗೆ ಪ್ರವೇಶಿಸಿದ್ದರು. ಬಳಿಕ 2015ರಲ್ಲಿ ಡೇಂಜರ್ ಜೋನ್ ಎಂಬ ಕನ್ನಡ ಚಿತ್ರದಲ್ಲಿ ನಾಯಕ ನಟನಾಗಿ ನಟಿಸಿ ಮೆಚ್ಚುಗೆ ಗಳಿಸಿದ್ದರು.
ಐಸ್ ಕ್ರೀಮ್ ಎಂಬ ತುಳು ಸಿನಿಮಾದಲ್ಲಿ ನಟಿಸಿದ್ದ ರೂಪೇಶ್ ಶೆಟ್ಟಿ, ನಂತರ ಪಿಶಾಚಿ, ನಿಶಬ್ದ 2 ಮತ್ತು ಸ್ಮೈಲ್ ಪ್ಲೀಸ್ ಎಂಬ ಕನ್ನಡ ಚಿತ್ರಗಳಲ್ಲಿ ನಟಿಸಿದ್ದರು. ಅಮ್ಮೆರ್ ಪೊಲೀಸಾ ತುಳುಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. 2017ರಲ್ಲಿ ಕೃಷ್ಣಪ್ರಸಾದ್ ಉಪ್ಪಿನಕೋಟೆ ನಿರ್ದೇಶಿಸಿದ ರಂಗ್, ರಂಗ್ ದ ದಿಬ್ಬಣ ಚಿತ್ರದಲ್ಲಿ ಪೋಷಕ ಪಾತ್ರದಲ್ಲಿ ಅಭಿನಯಿಸಿದ್ದರು. ಇದರಲ್ಲಿ ಲೈಫ್ ಇಸ್ ಗಿರ್ಗಿಟ್ ಅನ್ನು ರೂಪೇಶ್ ಶೆಟ್ಟಿಯವರೇ ನಿರ್ದೇಶಿಸಿದ್ದರು.