Advertisement

ಐಟಿಆರ್‌ನಲ್ಲಿ 2 ಲಕ್ಷ ಮೀರಿದ ಪಾವತಿ ವಿವರ ಕಡ್ಡಾಯ

10:56 AM Apr 10, 2017 | Harsha Rao |

ನವದೆಹಲಿ: ನೋಟುಗಳ ಅಮಾನ್ಯದ ಬಳಿಕದ 50 ದಿನಗಳ ಅವಧಿಯಲ್ಲಿ 2 ಲಕ್ಷ ರೂ.ಗಿಂತ ಅಧಿಕ ನಗದು ನೀಡಿ ಸಾಲ ಪಾವತಿಸಿದ್ದರೆ ಅಥವಾ ಕ್ರೆಡಿಟ್‌ ಕಾರ್ಡ್‌ ಬಿಲ್‌ ಪಾವತಿಸಿದ್ದರೆ, ಅದರ ವಿವರವನ್ನು ನೀವು ಒಂದು ಪುಟದ ಆದಾಯ ತೆರಿಗೆ ರಿಟರ್ನ್ಸ್(ಐಟಿಆರ್‌) ಅರ್ಜಿಯಲ್ಲಿ ಉಲ್ಲೇಖೀಸುವುದು ಕಡ್ಡಾಯ.

Advertisement

ಆದಾಯ ಘೋಷಣೆ, ಪಾವತಿಸಿದ ತೆರಿಗೆ, ತೆರಿಗೆ ವಿನಾಯ್ತಿ ಮತ್ತಿತರ ವಿವರಗಳನ್ನು ಭರ್ತಿ ಮಾಡುವ ಕಾಲಂಗಳ ಜೊತೆಗೆ ಐಟಿಆರ್‌ ಅರ್ಜಿಯಲ್ಲಿ ಹೊಸದೊಂದು ಕಾಲಂ ಅನ್ನು ನೀಡಲಾಗಿದೆ. ಅಲ್ಲಿ ನೀವು ನೋಟು ಅಪನಗದೀಕರಣದ ಬಳಿಕ 2 ಲಕ್ಷ ರೂ.ಗಿಂತ ಅಧಿಕ ಮೊತ್ತವನ್ನು ಬ್ಯಾಂಕುಗಳಲ್ಲಿ ಠೇವಣಿ ಇಟ್ಟಿದ್ದರೆ, ಅದರ ಮಾಹಿತಿಯನ್ನು ನೀಡಬೇಕು. ಅಷ್ಟೇ ಅಲ್ಲ, ಸಾಲ ಪಾವತಿ, ಕ್ರೆಡಿಟ್‌ ಕಾರ್ಡ್‌ ಬಿಲ್‌ ಪಾವತಿ ಮತ್ತಿತರ ಯಾವುದೇ ಪಾವತಿಗಾಗಿ 2 ಲಕ್ಷಕ್ಕಿಂತ ಹೆಚ್ಚಿನ ಮೊತ್ತವನ್ನು ಬಳಸಿದ್ದರೆ, ಅದನ್ನೂ ಇದೇ ಕಾಲಂನಲ್ಲಿ ನಮೂದಿಸಬೇಕು ಎಂದು ಆದಾಯ ತೆರಿಗೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಪನಗದೀಕರಣದ ಬಳಿಕ ನೀವಿಟ್ಟ ಠೇವಣಿಯನ್ನು ನಿಮ್ಮ ವಾರ್ಷಿಕ ಆದಾಯದೊಂದಿಗೆ ಹೊಂದಾಣಿಕೆ ಮಾಡುವುದೇ ಇದರ ಉದ್ದೇಶ ಎಂದೂ ಅವರು ಮಾಹಿತಿ ನೀಡಿದ್ದಾರೆ.

ಅಪನಗದೀಕರಣದ ಬಳಿಕ ಅನೇಕರು ಸಾಲ ಮರುಪಾವತಿ, ಬಿಲ್‌ ಪಾವತಿಗಾಗಿ ಕಪ್ಪುಹಣವನ್ನು ಬಳಕೆ ಮಾಡಿದ್ದಾರೆ ಎಂಬ ಆರೋಪಗಳು ಕೇಳಿಬಂದಿತ್ತು. ಈ ಎಲ್ಲ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಐಟಿ ಇಲಾಖೆ ಇಂತಹುದೊಂದು ಪ್ರಕ್ರಿಯೆ ನಡೆಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next