Advertisement

ರೂಪಾ ಬೆಂಬಲಿಸಿ ಕರವೇ ಪ್ರತಿಭಟನೆ

02:41 PM Jul 18, 2017 | |

ದೇವರಹಿಪ್ಪರಗಿ: ರಾಜ್ಯ ಕಾರಾಗೃಹದಲ್ಲಿ ನಡೆಯುತ್ತಿರುವ ಅವ್ಯವಹಾರ, ಅನೈತಿಕ ಚಟುವಟಿಕೆ ಬಯಲಿಗೆಳೆದ ದಕ್ಷ ಅಧಿಕಾರಿ
ಡಿ.ರೂಪಾ ಅವರ ಹೋರಾಟ ಬೆಂಬಲಿಸಿ ಕರ್ನಾಟಕ ರಕ್ಷಣಾ ವೇದಿಕೆ ಯುವ ಸೈನ್ಯ ಬಾಯಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಪ್ರತಿಭಟನಾ
ಮೆರವಣಿಗೆ ಮಾಡಿ ಉಪ ತಹಶೀಲ್ದಾರ್‌ ಕಚೇರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

Advertisement

ಪಟ್ಟಣದ ರಾಷ್ಟ್ರೀಯ ಹೆದ್ದಾರಿ 218ರ ರಸ್ತೆಯಲ್ಲಿನ ಮೋಹರೆ ಹನುಮಂತರಾಯ ವೃತ್ತದಲ್ಲಿ ಜಮಾವಣೆಗೊಂಡ ಕಾರ್ಯಕರ್ತರು
ಮೌನ ಮೆರವಣಿಗೆ ಹೊರಟು ಬಸ್‌ನಿಲ್ದಾಣ ಮಾರ್ಗವಾಗಿ ನಾಡಕಚೇರಿ ತಲುಪಿದರು. ನಂತರ ಜಡಿಮಠ ಶಿವಾಚಾರ್ಯರು

ಮಾತನಾಡಿ, ಜೈಲುಗಳಲ್ಲಿ ಗಾಂಜಾ, ಅಫಿಮು, ಹೆರಾಯಿನ್‌, ಮದ್ಯ, ಮಾದಕ ವಸ್ತುಗಳನ್ನು ಸಾಗಣೆ ಮಾಡುತ್ತಿರುವ ಭ್ರಷ್ಟ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಿ ಶಿಕ್ಷೆಗೆ ಒಳಪಡಿಸಬೇಕು. ದಕ್ಷ ಅಧಿಕಾರಿಯಾದ ಡಿಐಜಿ ಡಿ.ರೂಪಾ ಅವರಿಗೆ ಸರ್ಕಾರ ನೋಟಿಸ್‌ ನೀಡಿದ್ದು ಅಸಂವಿಧಾನಿಕವಾಗಿದೆ ಎಂದರು. ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇಂತಹ ಭ್ರಷ್ಟಾಚಾರವನ್ನು ಬಯಲಿಗೆಳೆಯುತ್ತಿದ್ದ ದಕ್ಷ ಅಧಿಕಾರಿಗಳಾದ ಡಿವೈಎಸ್‌ಪಿ ಗಣಪತಿ, ಜಿಲ್ಲಾಧಿಕಾರಿ ಡಿ.ಕೆ. ರವಿ, ಪಿಎಸ್‌ಐ ಬಂಡೆ ಅವರನ್ನು
ಬಲಿ ಪಡೆದ ಸರ್ಕಾರ ಇನ್ನೂ ಹೀಗೆ ಮಾಡಿದರೆ ಜನ ದಂಗೆ ಏಳುತ್ತಾರೆಂದು ಎಚ್ಚರಿಸಿದರು.

ಕರವೇ ತಾಲೂಕಾಧ್ಯಕ್ಷ ಹನುಮಂತ ತಾಂಬೆ ಮಾತನಾಡಿ, ದಕ್ಷ ಅಧಿಕಾರಿ ಡಿ.ರೂಪಾ ನೀಡಿದ ಜೈಲಿನ ಅವ್ಯವಹಾರ ವರದಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕೇಸು ದಾಖಲಿಸಿ ನ್ಯಾಯ ಉಳಿಸಬೇಕು. ಸರ್ಕಾರ ಡಿ.ರೂಪಾ ಅವರನ್ನು ತನಿಖೆಗೆ ಒಳಪಡಿಸಿದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಭೀಮು ನಾಗರಾಳ, ಆಸೀನ್‌ ಹಚ್ಯಾಳ, ದಾದಾಗೌಡ ಪಾಟೀಲ, ಪ್ರಸಾದಗೌಡ ಪಾಟೀಲ, ಯೂಸೂಫ್‌ ಹಚ್ಯಾಳ, ಜಾವೀದ್‌ ಹಚ್ಯಾಳ, ರಿಯಾಜ್‌ ದುಮ್ಮದರಿ, ಗುರು ಅವಟಿ, ಯಾಕೂಬ ಮಣೂರ, ಶ್ರೀಶೈಲ ಒಂಟೆತ್ತಿನ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next