Advertisement

ಓಡುವುದರಿಂದ ಬೇಗನೆ ಸಾವು ಬರುವುದಿಲ್ಲ! ; ಸಮೀಕ್ಷೆ ಹೇಳುವುದೇನು?

09:44 AM Nov 13, 2019 | Hari Prasad |

ವಾಷಿಂಗ್ಟನ್‌: ದಿನವೂ ಸ್ವಲ್ಪವಾದರೂ ಓಡಬೇಕು. ಹೀಗೆ ಓಡುವುದರಿಂದ ಹಲವಾರು ಆರೋಗ್ಯ ಲಾಭಗಳಿದ್ದು ಇವುಗಳಲ್ಲಿ ಸಾವನ್ನು ದೂರವಿರಿಸುವುದೂ ಒಂದು ಎಂದು ಸಂಶೋಧನೆಯೊಂದರಿಂದ ತಿಳಿದುಬಂದಿದೆ. ಒಂದು ವೇಳೆ ಜನರು ದೂರಕ್ಕೆ, ವೇಗವಾಗಿ ಓಡದಿದ್ದರೂ, ಅವರ ಆರೋಗ್ಯವಂತೂ ಸುಧಾರಣೆಯಾಗುತ್ತದೆ ಇದರಿಂದ ಸಮಾಜದ ಆರೋಗ್ಯ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.

Advertisement

ಜನರು ಎಷ್ಟು ಓಡಬೇಕು ಮತ್ತು ಎಷ್ಟು ಓಡಿದರೆ ಹೆಚ್ಚು ಪ್ರಯೋಜನವಾಗುತ್ತದೆ ಎಂಬುದನ್ನು ಈ ಸಂಶೋಧನೆಯಲ್ಲಿ ಹೇಳಿಲ್ಲ. ಆದರೆ ವಿಶೇಷವಾಗಿ ನಿತ್ಯವೂ ಓಡುವವರು, ಜಾಗಿಂಗ್‌ ಮಾಡುವವರನ್ನು ಗುರಿಯಾಗಿಸಿ ಈ ಸಂಶೋಧನೆ ಮಾಡಲಾಗಿದೆ.

ಸಂಶೋಧನೆಗೆ 2.32 ಲಕ್ಷ ಮಂದಿಯನ್ನು ಬಳಸಿಕೊಳ್ಳಲಾಗಿದ್ದು, 5.5 ವರ್ಷದಿಂದ 35 ವರ್ಷದವರೆಗೆ ಅವರ ಮೇಲೆ ನಿಗಾ ಇಡಲಾಗಿದೆ. ಈ ಸಂದರ್ಭದಲ್ಲಿ 25,951 ಮಂದಿ ಸಂಶೋಧನೆಗೊಳಪಟ್ಟವರು ಮೃತಪಟ್ಟಿದ್ದಾರೆ. ಸಮೀಕ್ಷೆಯ ಪ್ರಕಾರ, ಶೇ.27ರಷ್ಟು ಬೇಗನೆ ಸಾವು ಬರುವುದನ್ನು ಓಡುವ ಚಟುವಟಿಕೆ ನಿಯಂತ್ರಿಸುತ್ತದೆ.

ವಿಶೇಷವಾಗಿ ಹೃದಯದ ಸಮಸ್ಯೆಗೆ ಉತ್ತಮವಾದುದಾಗಿದೆ. ದಿನಕ್ಕೆ 50 ನಿಮಿಷ ಅಥವಾ ಗಂಟೆಗೆ 8 ಕಿ.ಮೀ. ಓಟದಿಂದ ಭಾರೀ ಪ್ರಮಾಣದಲ್ಲಿ ಆರೋಗ್ಯ ಲಾಭವಿದೆ ಎಂದು ಹೇಳಲಾಗಿದೆ. ನಿತ್ಯವೂ ಓಡುವುದು ಸಾಧ್ಯವಿಲ್ಲ ಎಂದರೂ ವಾರಕ್ಕೆ 25 ನಿಮಿಷ ಓಟದಿಂದ ಸಾವಿನಿಂದ ತುಸು ದೂರವಾಗಬಹುದು. ಇದರಿಂದ ಆರೋಗ್ಯ ಸುಧಾರಣೆಯಾಗುತ್ತದೆ ಎಂದು ಸಮೀಕ್ಷೆ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next